ವಿದ್ಯುತ್ ಪೂರೈಕೆ ಸಮಯ ಆಗಾಗ್ಗೆ ಬದಲಾವಣೆ ರೈತರ ಆಕ್ರೋಶ: ಪ್ರತಿಭಟನೆಯ ಎಚ್ಚರಿಕೆ.
ವಿದ್ಯುತ್ ಪೂರೈಕೆ ಸಮಯ ಆಗಾಗ್ಗೆ ಬದಲಾವಣೆ ರೈತರ ಆಕ್ರೋಶ: ಪ್ರತಿಭಟನೆಯ ಎಚ್ಚರಿಕೆ. ಅನಿರೀಕ್ಷಿತವಾಗಿ ಹಾಗೂ ಮಾಹಿತಿ ನೀಡದೆ ವಿದ್ಯುತ್ ಸಮಯವನ್ನು ಆಗಿಂದಾಗ್ಗೆ ಬದಲಾವಣೆ ಮಾಡುತ್ತಿರುವ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಯಾವುದೇ ಮಾಹಿತಿ ನೀಡದೆ ವಿದ್ಯುತ್ ಸರಬರಾಜು ಸಮಯವನ್ನು ಬದಲಾವಣೆ ಮಾಡುತ್ತಿರುವುದು ರೈತರಿಗೆ ಅನಾನುಕೂಲವಾಗುತ್ತಿದೆ . ಈಗಾಗಲೇ ಇರುವ ವೇಳಾಪಟ್ಟಿಯ ಅವಧಿಯಂತೆ ವಿದ್ಯುತ್ ಸರಬರಾಜು ಮಾಡುವಂತೆ ರೈತರು ಒತ್ತಾಯಿಸಿದ್ದಾರೆ. ಅಲ್ಲದೇ ವಿದ್ಯುತ್ ನೀಡುವ ಅವಧಿಯನ್ನು ಹೆಚ್ಚಿಸುವಂತೆಯೂ ಒತ್ತಾಯಿಸಿದ್ದಾರೆ. ಇಲಾಖೆ ವತಿಯಿಂದ ವಾಟ್ಸಪ್ ಗುಂಪನ್ನು ರಚಿಸಿ ವಿದ್ಯುತ್ ಸರಬರಾಜು ಸಮಯದ ಬಗ್ಗೆ ನಿಗದಿತ ಮಾಹಿತಿಯನ್ನು ಒದಗಿಸುವಂತೆ ರೈತರು ಆಗ್ರಹಿಸಿದ್ದಾರೆ. ರೈತರು ಈ ಕುರಿತು ಕಿರಿಯ ಅಭಿಯಂತರರ ಕಚೇರಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಬಸವಾಪಟ್ಟಣ ಕಚೇರಿಗೆ ದೂರನ್ನು ಸಲ್ಲಿಸಿದಿದ್ದಾರೆ. ಒಂದು ವೇಳೆ ಇದೇ ರೀತಿ ರೈತರಿಗೆ ತೊಂದರೆ ಆದರೆ ಕಛೇರಿಯ ಮುಂದೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸುವ ಮೂಲಕ ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಸಂದರ್ಭದಲ್ಲಿ ಯುವ ರೈತರಾದ ಡಾ. ಶಿವಪ್ರಸಾದ್ ಬಿಎಂ, , ರವಿ ಬಿಕೆ ಮಂಜಾ ಬಿಎಂ ಪುಟ್ಟಸ್ವಾಮಿ ಬಿಆರ್ ಹಾಗೂ ರಂಗನ್ ಹಾಜರಿದ್ದರು