ಶುಂಠಿ ಬೆಲೆ ಕುಸಿತ: ರೈತರ ಹಿತ ಕಾಪಾಡುವಂತೆ ಹೆಚ್.ಯೋಗಾರಮೇಶ್ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ.
ಅರಕಲಗೂಡು: ಹೆಚ್.ಯೋಗಾರಮೇಶ್ ನೇತೃತ್ವದಲ್ಲಿ ಪೊಟ್ಯಾಟೋ ಕ್ಲಬ್ ಕಛೇರಿಯಲ್ಲಿ ಇಂದು ನಡೆದ ಶುಂಠಿ ಬೆಳೆಗಾರರ ರೈತರ ಸಂವಾದದಲ್ಲಿ ಶುಂಠಿ ಬೆಳೆಗಾರರ ರೈತರ ಸಂಕಷ್ಟದ ಬಗ್ಗೆ ರೈತರೊಂದಿಗೆ ಸಮಸ್ಯೆಗಳನ್ನು ಚರ್ಚಿಸಲಾಯಿತು. ಶುಂಠಿ ಬೆಳೆಯಲು ಅನುಸರಿಸಬೇಕಾದ ವೈಜ್ಞಾನಿಕ ಕ್ರಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲಾಯಿತು. ಅರಕಲಗೂಡು ಪೊಟ್ಯಾಟೋ ಕ್ಲಬ್ ಅಧ್ಯಕ್ಷರಾದ ಹೆಚ್ ಯೋಗಾರಮೇಶ್ ಮಾತನಾಡಿ ರೈತರು ಅರ್ಥಿಕವಾಗಿ ಸ್ವಲ್ಪ ಹಣ ಗಳಿಸಬಹುದು ಎಂದು ಪ್ರತಿ ವರ್ಷವೂ ಶುಂಠಿ ಬೆಳೆ ಬೆಳೆಯುತ್ತಿದ್ದಾರೆ. ಶುಂಠಿ ಔಷದೀಯ ಜೊತೆಗೆ ಆಹಾರಕ್ಕಾಗಿ ಹೆಚ್ಚಾಗಿ ಬಳಕೆ ಆಗುತ್ತಿದೆ. ಒಂದು ವರ್ಷ ಶುಂಠಿಗೆ ಒಳ್ಳೆಯ ಬೆಲೆ ಬಂದರೆ ಆ ವರ್ಷ ಶುಂಠಿಗೆ ಕಾಯಿಲೆ ಬಂದು ಉತ್ತಮ ಬೆಳೆ ಬಂದಿರುವುದಿಲ್ಲ. ಇದಕ್ಕೆ ಒಳ್ಳೆಯ ದೃಢೀಕೃತ ಬೀಜ ಇಲ್ಲದಿರುವುದೇ ಆಗಿದೆ. ಇದರಿಂದ ರೈತರು ಆರ್ಥಿಕವಾಗಿ ಪ್ರತಿ ವರ್ಷವೂ ಸಂಕಷ್ಟ ಎದುರಿಸುವಂತಾಗಿದೆ ಎಂದರು. ತಾಲ್ಲೂಕಿನಲ್ಲಿ ಪ್ರತಿ ಗ್ರಾಮದಲ್ಲೂ ಕನಿಷ್ಠ 50 ರಿಂದ 100 ಜನ ಶುಂಠಿ ಬೆಳೆಗಾರರು ಇದ್ದಾರೆ. ಇವರಿಗೆ ಒಂದೊಂದು ರೈತರಿಗೆ 2-3 ಲಕ್ಷ ನಷ್ಟ ಎಂದು ಅಂದಾಜು ಮಾಡಿದರೂ ಒಂದು ಗ್ರಾಮದಲ್ಲಿ 1 ರಿಂದ 2-3 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ತಾಲ್ಲೂಕಿನಲ್ಲಿ ಸಾವಿರಾರು ಕೋಟಿಗೂ ಅಧಿಕ ನಷ್ಟ ರೈತರಿಗೆ ಉಂಟಾಗಿದೆ. ಈ ವರ್ಷ ಶುಂಠಿ ಬೆ...