ಇಂದಿನಿಂದ ನಿಗದಿಯಂತೆ ನಡೆಯಲಿದೆ KPSC ಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆ :
ಇಂದಿನಿಂದ ನಿಗದಿಯಂತೆ ನಡೆಯಲಿದೆ KPSC ಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆ : ಅಭ್ಯರ್ಥಿಗಳು ತಪ್ಪದೇ ಈ ಮಾರ್ಗಸೂಚಿ ಅನುಸರಿಸಸಬೇಕು ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ಇಂದಿನಿಂದ ನಿಗದಿಯಂತೆ ನಡೆಯಲಿದೆ. ಒಟ್ಟು 106 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಈ ಪರೀಕ್ಷೆ ನಡೆಯಲಿದ್ದು, 1,65,258 ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದು ಪರೀಕ್ಷೆ ಬರೆಯಲು ಸಿದ್ದರಾಗಿದ್ದಾರೆ. ಕೊರೋನಾ ಸೊಂಕಿನ ಹಿನ್ನಲೆಯಲ್ಲಿ ಇಲಾಖೆಯಯ ಮುಂಜಾಗ್ರತವಾಗಿ ಎಲ್ಲಾ ಕ್ರಮವನ್ನು ಹಾಗೂ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದೆ. ಬೆಂಗಳೂರು, ಬೆಳಗಾವಿ, ಬಳ್ಳಾರಿ, ದಾವಣಗೆರೆ, ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ರಾಯಚೂರು ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಪರೀಕ್ಷೆ ನಡೆಸಲಿದೆ. ಪರೀಕ್ಷಾ ಕೇಂದ್ರಗಳ ಸುತ್ತಲೂ 200ಮೀ ಆವರಣವನ್ನು ಆರಿಸಿ ಕಲಂ 144ರ ಮೇರೆಗೆ ನಿರ್ಭಂದಿತ ಪ್ರದೇಶವೆಂದು ಘೋಷಿಸಲಾಗಿದೆ. ಸದರಿ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತಲೂ ಬೆಳಗ್ಗೆ 09 ರಿಂದ ಸಂಜೆ 5ರ ವರೆಗೆ ಜೆರಾಕ್ಸ್ ಸೆಂಟರ್ ಹಾಗೂ ಅನಧಿಕೃತ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಕರೋನಾ ಸೋಂಕು ಹಿನ್ನಲೆಯಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ, ಪಿಯುಸಿಯ ಒಂದು ವಿಷಯದ ಪರೀಕ್ಷೆ ಹಾಗೂ ಸಿ...