ಪೋಸ್ಟ್‌ಗಳು

mandya ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮಂಡ್ಯ:ಕೆ.ಆರ್ ಪೇಟೆ|| ರೋಗಿಗಳಿಗೆ ಹಣ್ಣು‌‌ ಹಂಚಿ,‌ ಗಿಡ‌‌ ನೆಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನ ಆಚರಣೆ

ಇಮೇಜ್
ಮಂಡ್ಯ:ಕೆ.ಆರ್ ಪೇಟೆ|| ರೋಗಿಗಳಿಗೆ ಹಣ್ಣು‌‌ ಹಂಚಿ,‌ ಗಿಡ‌‌ ನೆಡುವ ಮೂಲಕ  ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನ ಆಚರಣೆ ಕೆ. ಆರ್. ಪೇಟೆ ವರದಿ  ಮಂಡ್ಯ.  *ಕೆ.ಆರ್. ಪೇಟೆ ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಜನುಮ ದಿನ ಆಚರಣೆ*  ಕೆ.ಆರ್. ಪೇಟೆ  ಪಟ್ಟಣದಲ್ಲಿ  ಇಂದು  ಕಾಂಗ್ರೆಸ್ ಪಕ್ಷದ ವತಿಯಿಂದ  ಪ್ರವಾಸಿ ಮಂದಿರದಲ್ಲಿ  ಗಿಡ ನೆಟ್ಟು, ಸಾರ್ವಜನಿಕ ಆಸ್ಪತ್ರೆಯ  ರೋಗಿಗಳಿಗೆ ಹಣ್ಣು  ಹಂಪಲು ವಿತರಿಸುವ ಮೂಲಕ  ಅರ್ಥ ಪೂರ್ಣ ವಾಗಿ  ಮಾಜಿ  ಮುಖ್ಯಮಂತ್ರಿ , ಹಾಗೂ  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು  ಆಚರಿಸಿದರು. ನಂತರ ಮಾತನಾಡಿದ  ಕೆ ಆರ್ ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಬಿ  ನಾಗೇಂದ್ರ ಕುಮಾರ್,  ಸಿದ್ದರಾಮಯ್ಯ ನವರು ಈ ನಾಡು ಕಂಡಂತ  ಶ್ರೇಷ್ಠ ರಾಜಕಾರಣಿಗಳಲ್ಲಿ  ಒಬ್ಬರು, ಅವರು  ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರಣಾಳಿಕೆ ಯಲ್ಲಿ  ಘೋಷಣೆ ಮಾಡಿದ್ದ  ಎಲ್ಲ  ಕಾರ್ಯಕ್ರಮಗಳನ್ನು  ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದ್ದಾರೆ. ಅವರು  ಒಂದು  ವರ್ಗಕ್ಕೆ , ಒಂದು ಜಾತಿಗೆ   ಒಂದು  ಧರ್ಮಕ್ಕ...