ಮಂಡ್ಯ:ಕೆ.ಆರ್ ಪೇಟೆ|| ರೋಗಿಗಳಿಗೆ ಹಣ್ಣು‌‌ ಹಂಚಿ,‌ ಗಿಡ‌‌ ನೆಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನ ಆಚರಣೆ

ಮಂಡ್ಯ:ಕೆ.ಆರ್ ಪೇಟೆ|| ರೋಗಿಗಳಿಗೆ ಹಣ್ಣು‌‌ ಹಂಚಿ,‌ ಗಿಡ‌‌ ನೆಡುವ ಮೂಲಕ  ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನ ಆಚರಣೆ ಕೆ. ಆರ್. ಪೇಟೆ ವರದಿ  ಮಂಡ್ಯ. 

*ಕೆ.ಆರ್. ಪೇಟೆ ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಜನುಮ ದಿನ ಆಚರಣೆ* 
ಕೆ.ಆರ್. ಪೇಟೆ  ಪಟ್ಟಣದಲ್ಲಿ  ಇಂದು  ಕಾಂಗ್ರೆಸ್ ಪಕ್ಷದ ವತಿಯಿಂದ  ಪ್ರವಾಸಿ ಮಂದಿರದಲ್ಲಿ  ಗಿಡ ನೆಟ್ಟು, ಸಾರ್ವಜನಿಕ ಆಸ್ಪತ್ರೆಯ  ರೋಗಿಗಳಿಗೆ ಹಣ್ಣು  ಹಂಪಲು ವಿತರಿಸುವ ಮೂಲಕ  ಅರ್ಥ ಪೂರ್ಣ ವಾಗಿ  ಮಾಜಿ  ಮುಖ್ಯಮಂತ್ರಿ , ಹಾಗೂ  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು  ಆಚರಿಸಿದರು.
ನಂತರ ಮಾತನಾಡಿದ  ಕೆ ಆರ್ ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಬಿ  ನಾಗೇಂದ್ರ ಕುಮಾರ್,  ಸಿದ್ದರಾಮಯ್ಯ ನವರು ಈ ನಾಡು ಕಂಡಂತ  ಶ್ರೇಷ್ಠ ರಾಜಕಾರಣಿಗಳಲ್ಲಿ  ಒಬ್ಬರು, ಅವರು  ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರಣಾಳಿಕೆ ಯಲ್ಲಿ  ಘೋಷಣೆ ಮಾಡಿದ್ದ  ಎಲ್ಲ  ಕಾರ್ಯಕ್ರಮಗಳನ್ನು  ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದ್ದಾರೆ. ಅವರು  ಒಂದು  ವರ್ಗಕ್ಕೆ , ಒಂದು ಜಾತಿಗೆ   ಒಂದು  ಧರ್ಮಕ್ಕೆ  ಸೀಮಿತವಾಗಿಲ್ಲ. ಅವರು  ಬಡವರ ಪರವಾಗಿ,  ಶೋಷಿತರಿಗೆ   ಧ್ವನಿಯಾಗಿದ್ದಾರೆ  ಎಂದು ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ  ಜಾರಿಗೆ ತಂದಿರುವ ಜನಪರ  ಕಾರ್ಯಕ್ರಮಗಳನ್ನು  ಈ ಸಂದರ್ಭದಲ್ಲಿ ಸ್ಮರಿಸಿದರು. 


ಈ ಸಂದರ್ಭದಲ್ಲಿ  ಮಾಜಿ  ಶಾಸಕರುಗಳಾದ  ಕೆ ಬಿ ಚಂದ್ರಶೇಖರ್,  ಬಿ ಪ್ರಕಾಶ್,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಕಿಕ್ಕೇರಿ ಸುರೇಶ್,  ಮಾಜಿ  ಕರ್ನಾಟಕ ರಾಜ್ಯ ಒಳ ಚರಂಡಿ ನಿಗಮದ  ಅಧ್ಯಕ್ಷ  ಎಂ ಡಿ  ಕೃಷ್ಣಮೂರ್ತಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ  ದೇವರಾಜು,  ಪುರಸಭೆ  ಸದಸ್ಯ ರವೀಂದ್ರಬಾಬು,  ಲಕ್ಷಿಪುರ  ಅಕ್ಕಿ ಮಂಜಣ್ಣ,  ಅಕ್ಕಿಹೆಬ್ಬಾಳು  ದಿವಾಕರ್,  ಹಾಗೂ  ಕಾಂಗ್ರೆಸ್ ಮುಖಂಡರು ಮತ್ತು  ಕಾರ್ಯಕರ್ತರು  ಉಪಸ್ಥಿತರಿದ್ದರು. 

 *ವರದಿ:  ಸಿ. ಆರ್ ಜಗದೀಶ್  ಕೆ ಆರ್ ಪೇಟೆ,  ಮಂಡ್ಯ*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಥೂ.. ನಿಮ್ ಯೋಗ್ಯತೆಗಿಷ್ಟು ಬೆಂಕಿ ಹಾಕ. ಸಚಿವ ಸುದಾಕರ್ ಗೆ ಮಹಿಳಾ ಛೀಮಾರಿ.