ಅಂಬೇಡ್ಕರ್‌ಗೆ ಗೌರವ ತಂದುಕೊಟ್ಟ ಏಕೈಕಾ ಪ್ರಧಾನಿ ನರೇಂದ್ರಮೋದಿ, ದಲಿತರು ಬಿಜೆಪಿಯನ್ನು ಬೆಂಬಲಿಸಿ : ಕೆ.ಶಿವರಾಮ್ ಮನವಿ.
ಅಂಬೇಡ್ಕರ್‌ಗೆ ಗೌರವ ತಂದುಕೊಟ್ಟ ಏಕೈಕಾ ಪ್ರಧಾನಿ ನರೇಂದ್ರಮೋದಿ, ದಲಿತರು ಬಿಜೆಪಿಯನ್ನು ಬೆಂಬಲಿಸಿ : ಕೆ.ಶಿವರಾಮ್ ಮನವಿ. ಅರಕಲಗೂಡು : ಸ್ವಾತಂತ್ರö್ಯ ಭಾರತದಲ್ಲಿ ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಗೌರವ ತಂದುಕೊಟ್ಟ ಏಕೈಕಾ ಪ್ರಧಾನಿ ಹೆಮ್ಮೆಯ ನರೇಂದ್ರಮೋದಿಜೀ ಆಗಿದ್ದು,ದಲಿತ ಸಮಾಜದವರು ಬಿಜೆಪಿ ಪಕ್ಷವನ್ನು ಬೆಂಬಲಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ರಾಜ್ಯ ಬಿಜೆಪಿ ಮುಖಂಡ ಕೆ.ಶಿವರಾಮ್ ಮನವಿ ಮಾಡಿದರು. ಪಟ್ಟಣದ ಶ್ರೀಗುರು ವಿಜಯಸಿದ್ದ ಶಿವದೇವಾ ಮಂಗಳ ಮಂದಿರ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ಎಸ್‌ಸಿ,ಎಸ್ಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಪರಿಶಿಷ್ಟರಿಗೆ ನಿಜವಾದ ದೇವರು ಅಂಬೇಡ್ಕರ್ ಆಗಿದ್ದಾರೆ.ನಮ್ಮ ಆರಾಧ್ಯ ದೇವ ಅವರೇ ಆಗಿದ್ದಾರೆ.ಈ ಇತಿಹಾಸದಲ್ಲಿ ನಾವು ಎಷ್ಟು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದ್ದೇವೆ.ಬಾಬಾ ಸಾಹೇಬರಿಗೆ ಯಾರು ಗೌರವ ಕೊಡುತ್ತಾರೋ ಅವರಿಗೆ ನಮ್ಮ ಬೆಂಬಲ ಕೊಡಬೇಕಿದೆ.ಮೋದಿ ಅವರ ಸರಕಾರ ಬಂದ ಮೇಲೆ ದೇಹಲಿಯಲ್ಲಿ ಅಂಬೇಡ್ಕರ್ ಅವರ ಹೆಸರಿನಲ್ಲಿ ಅಂರರಾಷ್ಟಿçÃಯ ಕೇಂದ್ರ ಸ್ಥಾಪನೆ.ಅಂಬೇಡ್ಕರ್ ಅವರ ಸಮಾಧಿ,ವಾಸ ಮಾಡಿದ ಸ್ಥಳ,ದೀಕ್ಷಾ ಭೂಮಿ,ಸಂವಿಧಾನ ಬರೆದ ಸ್ಥಳ,ಓದಿದ ಸ್ಥಳವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.೬೦ವರ್ಷ ಸರಕಾರ ಮಾಡಿದ ಕಾಂಗ್ರೆಸ್‌ಗೆ ಯಾಕೆ ಈ ಸ್ಥಳಗಳನ್ನು ...