ಸರ್ಕಾರಿ ಶಾಲೆಗೆ ಚೇರ್ ಗಳನ್ನು ಕೊಡುಗೆಯಾಗಿ ನೀಡಿದ ಪೊಟ್ಯಾಟೋ ಕ್ಲಬ್ ಅಧ್ಯಕ್ಷರಾದ ಹೆಚ್ ಯೋಗಾರಮೇಶ್

ಅರಕಲಗೂಡು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಹೆಚ್ ಯೋಗಾರಮೇಶ್ ಅವರ ತಂದೆ ದಿ|| ಶ್ರೀ ಹೊ.ತಿ. ಹುಚ್ಚಪ್ಪನವರು ದತ್ತು  ಪಡೆದಿದ್ದ ಹೊನ್ನವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಯೋಗಾರಮೇಶ್ ಬೇಟಿ ನೀಡಿ ಶಾಲೆಯ ಬೇಡಿಕೆಗೆ ಸ್ಪಂದಿಸಿ ಮಕ್ಕಳು ಕುಳಿತುಕೊಳ್ಳುವ ಚೇರ್ ಗಳನ್ನು ಉಚಿತವಾಗಿ ನೀಡುವ ಮೂಲಕ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಹಕಾರಿಯಾಗಿದ್ದಾರೆ. ಯೋಗಾರಮೇಶ್ ಅವರು ಅರಕಲಗೂಡಿನಲ್ಲಿ ಪೊಟ್ಯಾಟೋ ಕ್ಲಬ್ ಸ್ಥಾಪಿಸಿ ರೈತಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದು ಈಗ ಇಂತಹ ಸಮಾಜ ಸೇವಾ ಕೆಲಸಗಳಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಸಣ್ಣನಿಂಗಯ್ಯ, ಶಾಲಾ ಶಿಕ್ಷಕರಾದ ಲತಾಮಣಿ, ಲೀಲಾ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ನಿಂಗರಾಜು ಮುಖಂಡರಾದ ರಾಜೇಗೌಡರು, ಪ್ರಕಾಶ್, ಗೋಪಾಲ್, ಮೋಹನ್ ಹಾಗೂ ಗ್ರಾಮಸ್ಥರು ಜೊತೆಯಲ್ಲಿ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಥೂ.. ನಿಮ್ ಯೋಗ್ಯತೆಗಿಷ್ಟು ಬೆಂಕಿ ಹಾಕ. ಸಚಿವ ಸುದಾಕರ್ ಗೆ ಮಹಿಳಾ ಛೀಮಾರಿ.