ಪ್ರವೇಶ ಶುಲ್ಕ ಕಡಿಮೆ ಮಾಡುವಂತೆ ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವಂತೆ ತಹಶಿಲ್ದಾರರ ಮೂಲಕ ವಿದ್ಯಾರ್ಥಿಗಳಿಂದ ಮನವಿ

ರಾಮದುರ್ಗ ತಾಲೂಕು ಶುಲ್ಕ ಕಡಿಮೆ ಮಾಡುವಂತೆ ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವಂತೆ ತಹಶಿಲ್ದಾರರ ಮೂಲಕ ವಿದ್ಯಾರ್ಥಿಗಳಿಂದ ಮನವಿ

 ಹೌದು ವಿಕ್ಷಕರೇ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ವಿಶ್ವಭಾರತಿ ಪ್ರಥಮ ದರ್ಜೆ ಮಹಾವಿದ್ಯಾಲಯ ತುರನೂರದಲ್ಲಿ ದುಬಾರಿ ಪ್ರವೇಶ ವಸೂಲಾತಿ ಮಾಡುತ್ತಿರುವದು ಮತ್ತು ಈ ಕಾಲೇಜು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಅದರ ನಿಟ್ಟಿನಲ್ಲಿ ವಿದ್ಯಾರ್ಥಿವೃಂದ ವು ಪ್ರವೇಶ ಶುಲ್ಕವನ್ನು  ಕಡಿಮೆ ಮಾಡಬೇಕು ಮತ್ತು ಆದಷ್ಟು ಬೇಗ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಮಾನ್ಯ ರಾಮದುರ್ಗ ತಹಶೀಲ್ದಾರಾದ ಮಲ್ಲಿಕಾರ್ಜುನ್ ಹೆಗ್ಗಣ್ಣವರ್  ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಮನವಿ ನೀಡಿದರು.

    ಮಹಾವಿದ್ಯಾಲಯದ ಆಡಳಿತ ಮಂಡಳಿಯು ಪ್ರತಿ ವರ್ಷ ಪ್ರವೇಶ ಶುಲ್ಕವನ್ನು ದುಬಾರಿಗೊಳಿಸುತ್ತಾ ಹೋಗುತ್ತಿದೆ . ಅದರಂತೆ ಈ ಭಾರಿಯೂ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿದೆ . ಕೊರೋನಾನಂತಹ ಮಹಾಮಾರಿಯಿಂದ ನಮ್ಮ ಪಾಲಕರು ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು , ಇಷ್ಟು ಪಾವತಿ ಶುಲ್ಕವನ್ನು ಭರಿಸುವುದು ಕಷ್ಟಸಾಧ್ಯ . ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಸುತ್ತೋಲೆಯ ಪ್ರಕಾರ ಪ್ರವೇಶಾತಿ ಶುಲ್ಕವು ಪರಿಶಿಷ್ಟ ಜಾತಿ | ಪರಿಶಿಷ್ಟ ಪಂಗಡ ದ ವಿದ್ಯಾರ್ಥಿಗಳಿಗೆ ರೂ 470 / - ಗಳು ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ರೂ 532 /- ಗಳು ಇರುತ್ತದೆ . ಆದರೆ ಮಹಾವಿದ್ಯಾಲಯದ ಆಡಳಿತ ಮಂಡಳಿಯು ಪ್ರಸ್ತುತ ಸಾಲಿನಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಂದ ರೂ . 8600 / -  ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಂದ ರೂ 10100 / - ಗಳನ್ನು ಪಡೆದುಕೊಂಡು ಶುಲ್ಕ ಪಾವತಿಯಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಪಾವತಿಯಲ್ಲಿ ( ರಸಿದಿಯಲ್ಲಿ ) ಕೇವಲ ರೂ 1100 / -ಗಳನ್ನು ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ರೂ 3330 / -  ಗಳನ್ನು ಮಾತ್ರ ನಮೂದಿಸಿರುತ್ತಾರೆ .

ಅನುದಾನಕ್ಕೆ ಒಳಪಟ್ಟ ಈ ಮಹಾವಿದ್ಯಾಲಯವನ್ನು ಇನ್ನಿತರ ಅನುದಾನಿತ ಮಹಾವಿದ್ಯಾಲಯಗಳೊಂದಿಗೆ ಹೋಲಿಸಿದಾಗ ನಮ್ಮ ಮಹಾವಿದ್ಯಾಲಯದಲ್ಲಿ ಅನೇಕ ಮೂಲಭೂತ ಸೌಕರ್ಯಗಳು ಕೊರತೆ ಇರುವುದು ಕಂಡು ಬರುತ್ತಿದೆ . ಇಷ್ಟೊಂದು ದುಬಾರಿ ಶುಲ್ಕ ವಸೂಲಾತಿ ಮಾಡಿದರೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿಯ ವ್ಯವಸ್ಥೆ ಇರುವುದಿಲ್ಲ . ಶುದ್ಧ ಕುಡಿಯುವ ನೀರಿನ ಕೊರತೆ , ಗ್ರಂಥಾಲಯದಲ್ಲಿ ಪಠ್ಯ ಪುಸ್ತಕಗಳು , ದಿನಪತ್ರಿಕೆಗಳು ( ಮ್ಯಾಕ್ಟಿನ್ ) ಕೊರತೆ ಕ್ರೀಡಾಂಗಣದ ಕೊರತೆ ತರಗತಿ ಮತ್ತು ಗ್ರಂಥಾಲಯದಲ್ಲಿ ಆಸನದ ಕೊರತೆ ತರಗತಿಯ ಕೊಠಡಿಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲಿಯೇ ಪಾಠವನ್ನು ಕೇಳುವ ಪರಿಸ್ಥಿತಿ ಇರುತ್ತದೆ ಮತ್ತು ಪ್ರವೇಶ ಶುಲ್ಕದೊಂದಿಗೆ ಪರೀಕ್ಷಾ ಶುಲ್ಕ ಪಡೆದುಕೊಂಡರೂ ಆಂತರಿಕ ಪರೀಕ್ಷೆಗಳನ್ನು ಬರೆಯಲು ಉತ್ತರ ಪತ್ರಿಕೆಗಳನ್ನಾಗಲಿ / ಮುದ್ರಿತ ಪ್ರಶ್ನೆ ಪತ್ರಿಕೆಗಳನ್ನಾಗಲಿ ಅಥವಾ ಗೃಹ ಕಾರ್ಯ ಪುಸ್ತಕಗಳನ್ನು ಒದಗಿಸುವದಿಲ್ಲ . ಸಮಾಜಶಾಸ್ತ್ರ , ಇಂಗ್ಲೀಷ್ ಮತ್ತು ಕಂಪ್ಯೂಟರ ವಿಷಯದ ಉಪನ್ಯಾಸಕರ ಕೊರತೆ ಹಾಗೂ ಕಂಪ್ಯೂಟರ ಲ್ಯಾಬ ಕೊರತೆ ಇರುತ್ತದೆ . ಮಹಾವಿದ್ಯಾಲಯದ ಕಟ್ಟಡಕ್ಕೆ ಮುಖ್ಯ ಶಿರ್ಷಿಕೆ ಅಂದರೆ ವಿಶ್ವಭಾರತಿ ಪ್ರಥಮ ದರ್ಜೆ ಮಹಾವಿದ್ಯಾಲಯ ಎಂದು ಎಲ್ಲಿಯೂ ಬೋರ್ಡ ಹಾಕಿರುವದಿಲ್ಲ ಮತ್ತು ಯಾವುದೇ ಸೂಚನಾ ಫಲಕಗಳು ಇರುವದಿಲ್ಲ .

 ಸರಕಾರದಿಂದ ಶಿಷ್ಯವೇತನ ಮಂಜೂರ ಆದರೂ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ವಿತರಿಸದೆ ನಕಲಿ ದಾಖಲೆಯನ್ನು ಸೃಷ್ಟಿಸಿ , ಆಡಳಿತ ಮಂಡಳಿ ಹಾಗೂ ಬೋಧಕೇತರ ಸಿಬ್ಬಂದಿಗಳು ಸರಕಾರಕ್ಕೆ ಮತ್ತು ವಿದ್ಯಾರ್ಥಿಗಳಿಗೆ ವಂಚನೆ ಮಾಡುತ್ತಿದ್ದಾರೆ ಮತ್ತು ಬೇಜವಾಬ್ದಾರಿತನದಿಂದ ಕಾರ್ಯನಿರ್ವಹಿಸುತ್ತಿದ್ದಾರೆ . ಪ್ರವೇಶ ಪಡೆಯುವ ಕೊನೆಯ ದಿನಾಂಕ 28/09/2021 ಇರುವುದರಿಂದ ಆಡಳಿತ ಮಂಡಳಿಯ ಶೋಷಣೆ ಅನ್ಯಾಯ , ವಂಚನೆ ಹಾಗೂ ದಬ್ಬಾಳಿಕೆಯಿಂದ ನಮ್ಮನ್ನು ಮುಕ್ತಗೊಳಿಸಿ ಮತ್ತು ನಮ್ಮನ್ನು ವಂಚಿಸುತ್ತಿರುವ ಮಹಾವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರ ವಿರುದ್ಧ ಸಂಬಂಧಪಟ್ಟ ಮೇಲಾಧಿಕಾರಿಗಳು ಸೂಕ್ತ ಶಿಸ್ತು ಕ್ರಮವನ್ನು ಕೈಗೊಂಡು ನಮಗೆ ನ್ಯಾಯ ಒದಗಿಸಿಕೊಡಬೇಕೆಂದು
 ಆಗ್ರಹಿಸಿದರು. ಈ ಸಂದರ್ಭದಲ್ಲಿ ರಾಮದುರ್ಗ ತಾಲೂಕ ರಕ್ಷಣಾ ವೇದಿಕೆ ನಾರಾಯಣ ಗೌಡ್ರು ಬಣ್ ಮತ್ತು ಬಹುಜನ ಸಮಾಜ ಚಳುವಳಿ ಸಾಥ್ ನೀಡಿತು.

ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ವಿಜಯಕುಮಾರ್ ಎಸ್ ರಾಠೋಡ ಮತ್ತು ಸರ್ವ ಪದಾಧಿಕಾರಿಗಳು.ಹಾಗೂ ಬಹುಜನ ಸಮಾಜ ಚಳುವಳಿ ಮಹಿಳಾ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು   ವಿಶ್ವಭಾರತಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.
ವರದಿ :ಯಾದವಾಡ ರಾಮದುರ್ಗ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಥೂ.. ನಿಮ್ ಯೋಗ್ಯತೆಗಿಷ್ಟು ಬೆಂಕಿ ಹಾಕ. ಸಚಿವ ಸುದಾಕರ್ ಗೆ ಮಹಿಳಾ ಛೀಮಾರಿ.