ಟಿ.ನರಸೀಪುರ:ಭಾರತೀಯ ಔದ್ಧ ಮಹಾಸಭಾ ತಾಲ್ಲೂಕು ಶಾಖೆ ವತಿಯಿಂದ ಉತ್ತಮ ಅಂಕ ಪಡೆದ ಮಕ್ಕಳಿಗೆ ಸನ್ಮಾನ
ಟಿ.ನರಸೀಪುರ ಭಾರತೀಯ ಬೌದ್ಧ ಮಹಾಸಭಾ ತಾಲ್ಲೂಕು ಶಾಖೆ ವತಿಯಿಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾದ ಬೌದ್ಧ ಮಹಾಸಭಾ ಪ್ರತಿನಿಧಿಗಳ ಮಕ್ಕಳಾದ ಶೃಂಗಾ ಎಸ್.ಎನ್. ಪ್ರಜ್ಞಾ.ಎನ್. ಮನೋಜ್ ಕುಮಾರ್.ಆರ್.ರವರನ್ನು ಬೌದ್ಧ ಮಹಾಸಭಾ ತಾಲ್ಲೂಕು ಅಧ್ಯಕ್ಞ ಎಂ.ಶ್ರೀಧರ್ ಸನ್ಮಾನಿಸಿದರು. ಪಟ್ಟಣದ ಮೆಗಾಸ್ಟಾರ್ ಡಾನ್ಸ್ ಕ್ಲಾಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬುದ್ಧ- ಬಸವ-ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ,ಮೇಣದ ಬತ್ತಿಯನ್ನು ಹಚ್ಚುವುದರ ಮೂಲಕ ಅದ್ಯಕ್ಷರಾದ ಎಂ.ಶ್ರೀಧರ್ ಮತ್ತು ತಂಡ ಚಾಲನೆ ನೀಡಿದರು. ಅಧ್ಯಕ್ಷ ಎಂ.ಶ್ರೀಧರ್ ಮಾತನಾಡಿ ನಮ್ಮ ಸಮುದಾಯದ ಮಕ್ಕಳಿಗೆ ಅವಕಾಶ ಸಿಕ್ಕರೆ ಎಲ್ಲಾ ರಂಗದಲ್ಲೂ ಸಾಧನೆ ಮಾಡಬಲ್ಲರು ಎಂಬುದಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಿಕ್ಷಕ ನಾಗೇಶ್ ರವರ ಪುತ್ರಿ 623 ಅಂಕಗಳಿಸಿರುವುದೇ ಸಾಕ್ಷಿಯಾಗಿದೆ. ಸಮಾಜವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯಲು ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ.ಆ ನಿಟ್ಟಿನಲ್ಲಿ ಮಕ್ಕಳು ಬಾಬಾಸಾಹೇಬರ ಚಿಂತನೆಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಕೊಳ್ಳೇಗಾಲದ ಮುಖ್ಯ ಶಿಕ್ಷಕ ಮಹದೇವ್ ಕುಮಾರ್ ರವರು ಬಾಬಾಸಾಹೇಬರ ವಿಚಾರಧಾರೆಗಳನ್ನು ಮನನ ಮಾಡಿದರು....