ಅರಕಲಗೂಡು ಪೋಲೀಸರ ಯಶಸ್ವಿ ಕಾರ್ಯಾಚರಣೆ. 1.5 ಲಕ್ಷ ಬೆಲೆ ಬಾಳುವ 15 ಕುರಿ ಹಾಗೂ 4 ಟಗರು ಕಳ್ಳನ ಬಂದನ
ಅರಕಲಗೂಡು ಪಟ್ಟಣದ ಅಸ್ಲಂ ಪಾಷ ಎಂಬುವರು ಅರಕಲಗೂಡು ಬೈಪಾಸ್ ರಸ್ತೆಯ ಉರ್ದು ಶಾಲೆಯ ಹಿಂಬಾಗ ಕುರಿ ಹಾಗೂ ಟಗರುಗಳನ್ನು ಶೆಡ್ ಮುಂಬಾಗ ಮೇಯಲು ಬಿಟ್ಟಿದ್ದು ಕೆಲಸದ ನಿಮಿತ್ತ ಸ್ವಲ್ಪ ಸಮಯ ಹೊರಗಡೆ ಹೋಗಿದ್ದಾರೆ . ಹೊಂಚು ಹಾಕಿ ಕಾದು ಕುಳಿತ್ತದ್ದ ಕಳ್ಳ ಇದನ್ನೆ ಅವಕಾಶ ಮಾಡಿಕೊಂಡು ಎಲ್ಲಾ 15 ಕುರಿಗಳು ಹಾಗೂ 4 ಟಗರುಗಳನ್ನು ದಿನಾಂಕ 20/08/2020 ರಂದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದನು.
ಅಸ್ಲಂಪಾಷ ಅವರ ದೂರಿನ ಅನ್ವಯ ಆರೋಪಿಯ ಪತ್ತೆಗಾಗಿ ಅರಕಲಗೂಡು ಪೊಲೀಸರು ಬಲೆ ಬೀಸಿ ಕಳವು ಮಾಡಿದ್ದ ಆರೋಪಿತರ ಪತ್ತೆ ಬಗ್ಗೆ ವಿಶೇಷ ತಂಡ ರಚಿಸಿ
ಈ ಪ್ರಕರಣದಲ್ಲಿ ಕಳ್ಳತನ ಮಾಡಿದ್ದ ಆರೋಪಿತರ ಪತ್ತೆಗಾಗಿ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಶ್ರೀನಿವಾಸಗೌಡ
ಐಪಿಎಸ್.ರವರು ವಿಶೇಷ ತಂಡವನ್ನು ರಚಿಸಿದ್ದು, ಮಾನ್ಯ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ನಂದಿನಿರವರು ಮತ್ತು
ಹೊಳೆನರಸೀಪುರ ಉಪ ವಿಭಾಗದ ಉಪಾಧೀಕ್ಷಕರಾದ ಶ್ರೀ ಲಕ್ಷ್ಮೇಗೌಡರವರ ಮಾರ್ಗದರ್ಶನದಲ್ಲಿ ಅರಕಲಗೂಡು ವೃತ್ತದ ಸಿಪಿಐ ಶ್ರೀ
ಎಂ.ಕೆ. ದೀಪಕ್ ರವರ ಮೇಲುಸ್ತುವಾರಿಯಲ್ಲಿ ಅರಕಲಗೂಡು ಪೊಲೀಸ್ ಠಾಣೆ ಪಿಎಸ್‌ಐ ಶ್ರೀ ವಿಜಯಕೃಷ್ಣ ರವರ ನೇತೃತ್ವದಲ್ಲಿ
ಸಿಬ್ಬಂದಿಗಳನ್ನೊಳಗೊಂಡ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡವು ಆರೋಪಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದು, ಖಚಿತ
ಮಾಹಿತಿ ಮೇರೆಗೆ ದಿನಾಂಕ:09-09-2020 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಜಾಬಗೆರೆ ಗ್ರಾಮದ ರಮೇಶನಾಯಕ.ಜೆ.ಪಿ. ಎಂಬ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಅರಕಲಗೂಡು ವೃತ್ತ ಕಛೇರಿಗೆ ಕರೆದುಕೊಂಡು ಬಂದು ಹೆಚ್ಚಿನ ವಿಚಾರಣೆಗೆ
ಒಳಪಡಿಸಿ 150000/- ಲಕ್ಷ ಬೆಲೆಬಾಳುವ 15 ಕುರಿ ಹಾಗೂ 2 ಟಗರುಗಳು ಹಾಗೂ ಕಳ್ಳತನಕ್ಕೆ ಬಳಸಿದ ಒಂದು ಆಟೋವನ್ನು ವಶಪಡಿಸಿಕೊಂಡು ಮಾಲೀಕರಿಗೆ ಕುರಿಗಳನ್ನು ಮರಳಿಸುವಲ್ಲಿ ಅರಕಲಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿತನ ಪತ್ತೆ ಮಾಡಿದ ವಿಶೇಷ ತನಿಖಾ ತಂಡದ ಅಧಿಕಾರಿ ಸಿಬ್ಬಂದಿಯವರ ವಿವರ:
ಸದರಿ ಪ್ರಕರಣದಲ್ಲಿನ ಆರೋಪಿತನ ಪತ್ತೆಗಾಗಿ ಶ್ರಮವಹಿಸಿದ ಹೊಳೆನರಸೀಪುರ ಉಪ ವಿಭಾಗದ ಉಪಾಧೀಕ್ಷಕರಾದ ಶ್ರೀ
ಲಕ್ಷೇಗೌಡ್ರು, ಅರಕಲಗೂಡು ವೃತ್ತದ ಸಿಪಿಐರವರಾದ ಶ್ರೀ ಎಂ.ಕೆ. ದೀಪಕ್, ಪಿ.ಎಸ್.ಐ. ಎನ್.ವಿಜಯಕೃಷ್ಣ, ಸಿಬ್ಬಂದಿಗಳಾದ ಪಿಸಿ
500 ದಿನೇಶ, ಪಿಸಿ 312 ಮಹೇಶ, ಪಿಸಿ 150 ಬಸವರಾಜು, ಪಿಸಿ 483 ಮೋಹನಕುಮಾರ, ಪಿಸಿ 328 ಸುನೀಲ್‌ಕುಮಾರ, ಪಿಸಿ 572
ಮಂಜುನಾಥ, ಹೆಚ್.ಸಿ. 89 ಸುರೇಶ, ಹೆಚ್.ಸಿ. 334 ಸಣೇಗೌಡ, ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಪೀರ್‌ಖಾನ್
ಚಾಲಕರಾದ ಎಹೆಚ್ಸಿ 108 ಜಗನ್ನಾಥ್, ಎಹೆಚ್ಸಿ ಗಂಗಾಧರ ಇವರುಗಳ ಕಾರ್ಯವನ್ನು ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಯವರು
ಪ್ರಶಂಶಿಸಿ ವಿಶೇಷ ಬಹುಮಾನ ಘೋಷಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ