ಅರಕಲಗೂಡು ತಾಲ್ಲೂಕು ಕಛೇರಿ ಆವರಣದಲ್ಲಿ ಕೋವಿಡ್-19 ಸೊಂಕಿನಿಂದ ಮೃತಪಟ್ಟ 44 ಕುಟುಂಬದ ವಾರಸುದಾರರಿಗೆ ತಲಾ ಒಂದು ಲಕ್ಷದ ಚೆಕ್ ಅನ್ನು ಶಾಸಕರಾದ ಎ.ಟಿ.ರಾಮಸ್ವಾಮಿ ಅವರು ನೀಡಿದರು.

ಅರಕಲಗೂಡು ತಾಲ್ಲೂಕು ಕಛೇರಿ ಆವರಣದಲ್ಲಿ ಕೋವಿಡ್-19 ಸೊಂಕಿನಿಂದ ಮೃತಪಟ್ಟ 44 ಕುಟುಂಬದ ವಾರಸುದಾರರಿಗೆ ತಲಾ ಒಂದು ಲಕ್ಷದ ಚೆಕ್ ಅನ್ನು ಶಾಸಕರಾದ ಎ.ಟಿ.ರಾಮಸ್ವಾಮಿ ಅವರು ನೀಡಿದರು.

ಎ.ಟಿ.ರಾಮಸ್ವಾಮಿ ಮಾತನಾಡಿ ಕೋವಿಡ್ -೧೯ ಸೊಂಕಿನಿಂದ ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟ ತಾಲ್ಲೂಕಿನ 44 ಕುಟುಂಬದ ವಾರಸುದಾರರಿಗೆ 44 ಲಕ್ಷದ ಚೆಕ್ ಗಳನ್ನು ಸರ್ಕಾರದ ವತಿಯಿಂದ  ನೀಡಲಾಗುತ್ತಿದೆ‌.
ನೆನ್ನೆ ಅಸೆಂಬ್ಲಿ ಮುಗಿಯಿತು. ಮಲಗೋದು ರಾತ್ರಿ ಒಂದು ಗಂಟೆ ಆಗಿದೆ , ರಜಾ ದಿನವಾದ ಇಂದು ಸಹ ಕೆಲಸ ಮಾಡಬೇಕು ಹಣಕ್ಕಿಂತ ಕಾಲಕ್ಕೆ ಹೆಚ್ಚಿನ ಮಹತ್ವ ಕೊಟ್ಟು ನೊಂದ ಕುಟುಂಬಕ್ಕೆ ನೆರವಾಗಬೇಕು ಎಂದು ರಜಾ ದಿನವಾದ ಇಂದು ಸಹ ಕಾರ್ಯಕ್ರಮ ಇಟ್ಟುಕೊಂಡು ಚೆಕ್ ವಿತರಿಸಲಾಗುತ್ತಿದೆ. ನೆನ್ನೆ  ಸದನದಲ್ಲಿ ಇದ್ದಾಗ ನನ್ನ ಸ್ನೇಹಿತರು ಹೇಳಿದ್ರು ಇಂತಹ ಕಾಲದಲ್ಲಿ ನಿಮ್ಮಂತಹ ರಾಜಕಾರಣಿಗಳು ಆಯ್ಕೆಯಾಗುವುದು ಹೆಮ್ಮೆಯ ವಿಷಯ ಎಂದರು. ಈ ಹೆಮ್ಮೆ ನನಗಲ್ಲ, ನನ್ನನ್ನು ಆಯ್ಕೆ ಮಾಡಿದ ಜನರಿಗೆ ಈ ಮಹತ್ವ ಸಲ್ಲಬೇಕು ಎಂದಿದ್ದೇನೆ ಎಂದರು. 

ಜನ ತಾಲ್ಲೂಕು ಕಛೇರಿಗೆ ಅಲೆದು ಅಲೆದು ಜನ ಸುಸ್ತು ಆಗಿದ್ದಾರೆ. ಕಂದಾಯ ಅದಾಲತ್ ಮಾಡಿ, ಸಣ್ಣ ಪುಟ್ಟ ಕೆಲಸಕ್ಕೆ ಜನರನ್ನು ಅಲೆಯದ ಹಾಗೆ ಮಾಡಿ ಆಗ ಜನ ನಿಮ್ಮನ್ನು ಪೂಜ್ಯ ಭಾವನೆಯಿಂದ ನೋಡುತ್ತಾರೆ. ಎಂದು ತಹಶಿಲ್ದಾರ್ ಅವರಿಗೆ ಕಿವಿಮಾತು ಹೇಳಿದರು. ಬೇರೆಯವರಿಗೆ ಅರಕಲಗೂಡು ತಾಲ್ಲೂಕು  ಮಾದರಿ ತಾಲ್ಲೂಕು ಆಗಬೇಕು ಎಂದರು.

ಇನ್ನು ಕೆಲವು ಜನರಿಗೆ ಹಣ ಮಂಜೂರು ಆಗಬೇಕು. ಕೆಲವು ದಾಖಲೆಯ ಕೊರತೆಯಿಂದ ಇನ್ನೂ ಕೆಲವರಿಗೆ ಈ ಸೌಲಭ್ಯ ದೆರೆತಿಲ್ಲ. ಕೊವಿಡ್ ಇಂದ ಮೃತಪಟ್ಟ ಪ್ರತಿ ಕುಟುಂಬಕ್ಕೆ ಯಾವುದೇ ರೀತಿಯ ಅನ್ಯಾಯ ಆಗದ  ರೀತಿಯಲ್ಲಿ ಕೆಲಸ ಮಾಡಿ ಎಂದರು. 

ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಹಾಗೂ ಮನೆಯಲ್ಲಿ ದುಡಿಯುವ ಯಜಮಾನ ಆಕಸ್ಮಿಕವಾಗಿ ಮೈತಪಟ್ಟರೆ ಅಂತಹ ಕುಟುಂಬಕ್ಕೆ ಅನ್ಯಾಯ ಆಗದ ರೀತಿಯಲ್ಲಿ ನೋಡಿಕೊಳ್ಳಿ ಎಂದರು.

ತಹಶಿಲ್ದಾರ್ ಶ್ರೀನಿವಾಸ್  ಮಾತನಾಡಿ ಸರ್ಕಾರದ ವತಿಯಿಂದ ಒಂದು ಲಕ್ಷದ ಚೆಕ್ ವಿತರಿಸಲಾಗುತ್ತದೆ ಎಂದರು. ಈಡೀ ಕರ್ನಾಟಕದಲ್ಲಿ ಪ್ರಾಮಾಣಿಕತೆ ಸಜ್ಜನಿಕೆಗೆ ಪಾತ್ರರಾದ ಶಾಸಕರು ಎಂದರೆ ಎ.ಟಿ.ರಾಮಸ್ವಾಮಿ ಅವರು. ನಮ್ಮ ಜಿಲ್ಲಾಧಿಕಾರಿ ಸಹ ಅಷ್ಟು ವರದಿ ತೆಗೆದುಕೊಳ್ಲುವುದಿಲ್ಲ ಅಷ್ಟು ವರದಿ ತೆಗೆದುಕೊಳ್ಳುತ್ತಾರೆ‌. ಇದು ನಿಜಕ್ಕೂ ಶಾಸಕರಿಗೆ ಕ್ಷೇತ್ರದ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ,  ಬೆಂಗಳೂರಿನಲ್ಲಿ ಭೂ ಕಬಳಿಕೆಯಲ್ಲಿ ಕೋಟ್ಯಾಂತರ ಬೆಲೆ ಬಾಳುವ ಭೂಮಿ ಸರ್ಕರಕ್ಕೆ ಉಳಿಸಿದ್ದಾರೆ ಎಂದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಥೂ.. ನಿಮ್ ಯೋಗ್ಯತೆಗಿಷ್ಟು ಬೆಂಕಿ ಹಾಕ. ಸಚಿವ ಸುದಾಕರ್ ಗೆ ಮಹಿಳಾ ಛೀಮಾರಿ.