ಅಂಬೇಡ್ಕರ್‌ಗೆ ಗೌರವ ತಂದುಕೊಟ್ಟ ಏಕೈಕಾ ಪ್ರಧಾನಿ ನರೇಂದ್ರಮೋದಿ, ದಲಿತರು ಬಿಜೆಪಿಯನ್ನು ಬೆಂಬಲಿಸಿ : ಕೆ.ಶಿವರಾಮ್ ಮನವಿ.
ಅಂಬೇಡ್ಕರ್‌ಗೆ ಗೌರವ ತಂದುಕೊಟ್ಟ ಏಕೈಕಾ ಪ್ರಧಾನಿ ನರೇಂದ್ರಮೋದಿ, ದಲಿತರು ಬಿಜೆಪಿಯನ್ನು ಬೆಂಬಲಿಸಿ : ಕೆ.ಶಿವರಾಮ್ ಮನವಿ.
ಅರಕಲಗೂಡು : ಸ್ವಾತಂತ್ರö್ಯ ಭಾರತದಲ್ಲಿ ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಗೌರವ ತಂದುಕೊಟ್ಟ ಏಕೈಕಾ ಪ್ರಧಾನಿ ಹೆಮ್ಮೆಯ ನರೇಂದ್ರಮೋದಿಜೀ ಆಗಿದ್ದು,ದಲಿತ ಸಮಾಜದವರು ಬಿಜೆಪಿ ಪಕ್ಷವನ್ನು ಬೆಂಬಲಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ರಾಜ್ಯ ಬಿಜೆಪಿ ಮುಖಂಡ ಕೆ.ಶಿವರಾಮ್ ಮನವಿ ಮಾಡಿದರು.
ಪಟ್ಟಣದ ಶ್ರೀಗುರು ವಿಜಯಸಿದ್ದ ಶಿವದೇವಾ ಮಂಗಳ ಮಂದಿರ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ಎಸ್‌ಸಿ,ಎಸ್ಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಪರಿಶಿಷ್ಟರಿಗೆ ನಿಜವಾದ ದೇವರು ಅಂಬೇಡ್ಕರ್ ಆಗಿದ್ದಾರೆ.ನಮ್ಮ ಆರಾಧ್ಯ ದೇವ ಅವರೇ ಆಗಿದ್ದಾರೆ.ಈ ಇತಿಹಾಸದಲ್ಲಿ ನಾವು ಎಷ್ಟು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದ್ದೇವೆ.ಬಾಬಾ ಸಾಹೇಬರಿಗೆ ಯಾರು ಗೌರವ ಕೊಡುತ್ತಾರೋ ಅವರಿಗೆ ನಮ್ಮ ಬೆಂಬಲ ಕೊಡಬೇಕಿದೆ.ಮೋದಿ ಅವರ ಸರಕಾರ ಬಂದ ಮೇಲೆ ದೇಹಲಿಯಲ್ಲಿ ಅಂಬೇಡ್ಕರ್ ಅವರ ಹೆಸರಿನಲ್ಲಿ ಅಂರರಾಷ್ಟಿçÃಯ ಕೇಂದ್ರ ಸ್ಥಾಪನೆ.ಅಂಬೇಡ್ಕರ್ ಅವರ ಸಮಾಧಿ,ವಾಸ ಮಾಡಿದ ಸ್ಥಳ,ದೀಕ್ಷಾ ಭೂಮಿ,ಸಂವಿಧಾನ ಬರೆದ ಸ್ಥಳ,ಓದಿದ ಸ್ಥಳವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.೬೦ವರ್ಷ ಸರಕಾರ ಮಾಡಿದ ಕಾಂಗ್ರೆಸ್‌ಗೆ ಯಾಕೆ ಈ ಸ್ಥಳಗಳನ್ನು ಅಭಿವೃದ್ಧಿಗೊಳಿಸಲಿಲ್ಲ.ಕೇವಲ ಓಟಿಗಾಗಿ ಮಾತ್ರ ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಈ ರಾಜ್ಯದಲ್ಲಿ ಬಿಜೆಪಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಿದೆ.ಕೇಂದ್ರದಲ್ಲಿ ಕಳೆದ ೯ವರ್ಷಗಳಿಂದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಮೋದಿ ಮತ್ತು ಸರಕಾರ ಹಾಗೂ ರಾಜ್ಯದಲ್ಲಿನ ಯಡಿಯೂರಪ್ಪ,ಬಸವರಾಜ ಬೊಮ್ಮಾಯಿ ಅವರ ಸರಕಾರ ಹೆಚ್ಚು ಶೋಷಿತರು,ಹಿಂದುಳಿದವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಸಮಾಜದ ಮುಖ್ಯವಾಹಿನಿಗೆ ತಂದಿದ್ದಾರೆ.ಇದು ಮತ್ತೊಮ್ಮೆ ಮುಂದುವರಿದರೇ ಮತ್ತೊಷ್ಟು ಅನುಕೂಲಗಳು ನಮ್ಮ ಬಿಜೆಪಿ ಪಕ್ಷದ ಸರಕಾರದಿಂದ ದೊರೆಯಲಿವೆ.ಕಳೆದ ೬೦ವರ್ಷಗಳಿಂದಲೂ ಮತಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ದಲಿತರು,ಹಿಂದುಳಿದವರು,ಇತರೆ ಶೋಷಿತ ವರ್ಗದವರನ್ನು ಬಳಕೆ ಮಾಡಿಕೊಂಡಿವೆ ಅಷ್ಟೆ,ಈ ಎರಡು ಪಕ್ಷಗಳ ಇತ್ತೀಚಿನ ಚುನಾವಣೆ ಪ್ರಣಾಳಿಕೆಗಳನ್ನು ಅವಲೋಕಿಸಿದರೇ ಅವುಗಳು ಸಂಪೂರ್ಣವಾಗಿ ಮೋಸ ಮತ್ತು ಸುಳ್ಳಿನಿಂದ ಕೂಡಿವೆ.ಇವರಿಗೆ ಹಿಂದೆ ಸರಕಾರ ನಡೆಸುವ ವೇಳೆ ಬಡವರ,ಹಿಂದುಳಿದವರ ಕಷ್ಟಗಳು ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ,ರಾಜ್ಯ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರಬಾಬು ಅವರು,ಈ ರಾಜ್ಯದಲ್ಲಿ ಶೇ.೫೦ರಷ್ಟು ಹಿಂದುಳಿದ ವರ್ಗಗಳು ಇವೆ.ಇಷ್ಟು ದೊಡ್ಡಸಂಖ್ಯೆಯಲ್ಲಿದ್ದರೂ ಕೂಡ ರಾಜಕೀಯ ಅಧಿಕಾರ ಸಿಕ್ಕಿರಲಿಲ್ಲ.ಆದರೆ ನಮ್ಮ ಡಬಲ್ ಇಂಜಿನ್ ಸರಕಾರ ಅಧಿಕಾರಕ್ಕೆ ಬಂದಮೇಲೆ ದಲಿತರು,ಹಿಂದುಳಿದವರಿಗೆ ಎಲ್ಲಾ ರೀತಿಯ ಅವಕಾಶಗಳು ದೊರೆಯುತ್ತಿವೆ.ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಒಂದು ರೀತಿಯ ಹಬ್ಬದ ರೀತಿ ಆಗಬೇಕೆಂದು ತಜ್ಞರು ಹೇಳಿದ್ದು,ಅದು ನಮ್ಮ ಸರಕಾರದಲ್ಲಿ ಸಹಕಾರಗೊಳ್ಳುತ್ತಿದೆ.೫ನಿಮಿಷ ನಿಂತ್ತು ಯೋಚನೆ ಮಾಡಿ ಮತವನ್ನು ಹಾಕಿ,ನಂತರ ೫ವರ್ಷ ಅವಧಿಯಲ್ಲಿ ಮತನೀಡಿದ ಸರಕಾರ ಎಲ್ಲವನ್ನು ನೀಡುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಈಗಾಗಲೇ ವೀರಶೈವ ಅಭಿವೃದ್ಧಿನಿಗಮ.ಒಕ್ಕಲಿಗರ ಅಭಿವೃದ್ಧಿ ನಿಗಮ.ವಿಶ್ವಕರ್ಮ ಅಭಿವೃದ್ಧಿನಿಗಮ,ಮರಾಠ ಅಭಿವೃದ್ಧಿ ನಿಗಮ ಆಗಿವೆ.ಈ ಸಂದರ್ಭದಲ್ಲಿ ಸಣ್ಣಪುಟ್ಟ ವರ್ಗಗಳ ಅಭಿವೃದ್ಧಿ ನಿಗಮಗಳು ಸ್ಥಾಪನೆಗೊಂಡರೇ ಸಣ್ಣಪುಟ್ಟ ಸಮುದಾಯಗಳಿಗೆ ಅನುಕೂಲವಾಗಲಿದೆ.ಈ ನಿಟ್ಟಿನಲ್ಲಿ ಬಿಜೆಪಿ ಸರಕಾರ ಬದ್ದವಾಗಿದೆ.ಯಾವುದೇ ಆಮಿಷಗಳಿಗೆ ಒಳಗಾಗದೇ ಸ್ಥಿರವಾದ ಸರಕಾರ ನಿರ್ಮಾಣಕ್ಕೆ ಎಲ್ಲಾ ಹಿಂದುಳಿದವರು,ದಲಿತರು ಮತನೀಡುವ ಮೂಲಕ ಬೆಂಬಲಿಸೋಣ ಎಂದು ವಿನಂತಿ ಮಾಡಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹೆಚ್.ಯೋಗರಮೇಶ್ ಮಾತನಾಡಿ,ಕ್ಷೇತ್ರದಲ್ಲಿ ಇದುವರೆಗೂ ಹಾಲಿ ಶಾಸಕ ರಾಮಸ್ವಾಮಿ,ಮಾಜಿ ಶಾಸಕ ಮಂಜು ಅವರು ಕೇವಲ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಕ್ಷೇತ್ರವನ್ನು ಹಿಂದುಳಿಯುವAತೆ ಮಾಡಿದ್ದಾರೆ.ಈಗ ಈ ಇಬ್ಬರು ರಾಜಕಾರಣಿಗಳು ಅಧಿಕಾರ,ಅವಕಾಶಕೊಟ್ಟ ಪಕ್ಷಗಳನ್ನು ತಮ್ಮ ಸ್ವಾರ್ಥಕೋಸ್ಕರ ತ್ಯಜಿಸಿ ಪಕ್ಷಾಂತರ ಮಾಡಿದ್ದಾರೆ.ಇದುವರೆಗೂ ಕ್ಷೇತ್ರದಲ್ಲಿ ದಲಿತರು,ಹಿಂದುಳಿದವರಿಗೆ ಸುಸಜ್ಜಿತವಾದ ಸಮುದಾಯ ಭವನ ನಿರ್ಮಿಸಿಕೊಟ್ಟಿಲ್ಲ.ಕೇವಲ ಮತ ಪಡೆಯುತಿದ್ದಾರೆ ಅಷ್ಟೆ.ಇವರನ್ನು ಈ ಬಾರಿ ಚುನಾವಣೆಯಲ್ಲಿ ಸೋಲಿಸುವ ಮೂಲಕ ನಮ್ಮ ಬಿಜೆಪಿಗೆ ಬೆಂಬಲ ನೀಡಿ ಎಂದರು.
ದೇಶದ ಸಂಸ್ಕೃತಿ,ಚಿAತನೆ,ಅಭಿವೃದ್ಧಿ ಬಗ್ಗೆ ಕಾಳಜಿ ಉಳ್ಳವರು ಸ್ವಯಂಪ್ರೇರಿತವಾಗಿ ಬಿಜೆಪಿ ಪಕ್ಷ ಸೇರ್ಪಡೆಗೊಂಡು ಬೆಂಬಲ ನೀಡುತ್ತಿದ್ದಾರೆ.ಸಾಮಾನ್ಯರಾದ ನಾವುಗಳು ಸಹ ದೇಶ ಮೊದಲು ಎಂಬ ಭಾವನೆಯನ್ನು ಇಟ್ಟುಕೊಂಡು ಬಿಜೆಪಿಗೆ ಮತನೀಡುವ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೈಜೋಡಿಸೋಣ ಎಂದು ಕೈಮುಗಿದು ಮನವಿ ಮಾಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ