ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣ ಗ್ರಾಮದಲ್ಲಿ ಕಲುಷಿತ ನೀರಿನ ಸರಬರಾಜು ಆರೋಪಿಸಿ ಗ್ರಾಮಸ್ಥರ ಆಕ್ರೋಶ.

ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣ ಗ್ರಾಮದಲ್ಲಿ ಕಲುಷಿತ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ ಎಂದು ಆರೋಪಿಸಿ  ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತ್ ಕೇಂದ್ರ ಸ್ಥಾನವಾದ ಬಸವಾಪಟ್ಟಣ ಗ್ರಾಮಕ್ಕೆ ಕಾವೇರಿ ನದಿಯಿಂದ ಕಲುಷಿತ ನೀರಿನ ಸರಬರಾಜು  ಕಂಡು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರಿನ ಸರಬರಾಜು ಅವಸ್ಥೆಯನ್ನು ಕಂಡು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಿಂದ ಸ್ವಲ್ಪ ದೂರದಲ್ಲಿ ಹರಿಯುವ ಕಾವೇರಿ ನದಿಯಿಂದ  ನೀರಿನ ಪೂರೈಕೆ ಮಾಡುವ ಸ್ಥಳವು ಕಲುಷಿತಗೊಂಡಿದ್ದು ಅದೇ ಸ್ಥಳದಿಂದ ನೀರನ್ನು ಪೂರೈಸುತ್ತಿರುವುದು ವಿಷಾದನೀಯ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಕನಿಷ್ಟ ಮೂಲಭೂತ ಸೌಲಭ್ಯವನ್ನು ಒದಗಿಸದಿರುವುದು ಗ್ರಾಮ ಪಂಚಾಯಿತಿ ಆಡಳಿತ ವೈಫಲ್ಯಕ್ಕೆ ಸಾಕ್ಷಿ ಎಂದು ಅಭಿಪ್ರಾಯಪಟ್ಟಿದ್ದಾರೆ ನೀರನ್ನು ಪಂಪ್ ಮಾಡುವ ಸ್ಥಳ ಶಿಥಿಲಗೊಂಡಿದ್ದು ಅಲ್ಲದೆ ಕೊಳಚೆ ಪ್ರದೇಶವಾಗಿದೆ ಇದೇ ಸ್ಥಳದಿಂದ ಗ್ರಾಮಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದ್ದು  ನಲ್ಲಿಗಳಲ್ಲಿ ಕಲುಷಿತ  ನೀರು ಬರುತ್ತಿರುವುದು ಗೃಹಿಣಿಯರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಹೊಡೆದು ವರ್ಷದಿಂದ ಗ್ರಾಮದೇವತೆ ದೇವಸ್ಥಾನದ ಹತ್ತಿರ ಇರುವ  ಗದ್ದೆಗಳಲ್ಲಿ ನೀರು ತುಂಬಿಕೊಂಡಿರುವುದು ಅಸಮರ್ಪಕ ವ್ಯವಸ್ಥೆಗೆ ಕೈಗನ್ನಡಿಯಾಗಿದೆ. ಇಂತಹ ವ್ಯವಸ್ಥೆ ಇರುವುದು ಅಭಿವೃದ್ಧಿಯ ಹಿನ್ನಡೆ ಅಲ್ಲದೆ ಮತ್ತೇನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಆಡಳಿತ ವರ್ಗಕ್ಕೆ ದೂರದೃಷ್ಟಿತದ ಕೊರತೆಯಿರುವುದು ಸಾಬೀತಾಗಿದೆ. ಯಾವುದೇ ಸದಸ್ಯರು ಆಯ್ಕೆಯಾದರೂ ಯಾವ ಅಭಿವೃದ್ಧಿ ಕಾರ್ಯಗಳು  ನಡೆಯುವುದಿಲ್ಲ ಎಂಬುದು ಗ್ರಾಮಸ್ಥರ  ಅನುಭವದ ಮಾತಾಗಿದೆ. ಅಲ್ಲದೆ ಇಂದಿಗೂ ಕೂಡ ಪ್ರತಿನಿತ್ಯ ನೀರು ಸರಬರಾಜು ಮಾಡುವ ವ್ಯವಸ್ಥೆ ಇಲ್ಲದೇ ಇರುವುದು ವಿಪರ್ಯಾಸವೇ ಸರಿ ಇದರ ಜೊತೆಗೆ ನೀರಿನ ಘಟಕ ಕೂಡ ಸರಿಯಾದ ಪ್ರಮಾಣದಲ್ಲಿ ನೀರನ್ನು ಸರಬರಾಜು ಮಾಡದಿರುವುದು ಅಸಮರ್ಪಕ ನಿರ್ವಹಣೆಗೆ ಮೈಲಿಗಲ್ಲು ಎಂದೇ ಭಾವಿಸಬಹುದು. ಈ ಎಲ್ಲ ಕಾರಣಗಳಿಂದ ಗ್ರಾಮದಲ್ಲಿ ಸಮರ್ಪಕವಾದ ನೀರಿನ ಸರಬರಾಜು ವ್ಯವಸ್ಥೆ ಇಲ್ಲದೆ ಇರುವುದು ಇಲ್ಲಿನ ಜನರ ಚಿಂತೆಯಾಗಿದೆ.  ಗ್ರಾಮ ಪಂಚಾಯತ್ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳದಿದ್ದರೆ ಗ್ರಾಮಸ್ಥರು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಥೂ.. ನಿಮ್ ಯೋಗ್ಯತೆಗಿಷ್ಟು ಬೆಂಕಿ ಹಾಕ. ಸಚಿವ ಸುದಾಕರ್ ಗೆ ಮಹಿಳಾ ಛೀಮಾರಿ.