ಅರಕಲಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಹಾಗೂ ನೂತನ ಕೆಪಿಸಿಸಿ ಸದಸ್ಯ ಹೆಚ್.ಟಿ.ಮಂಜುನಾಥ್ ಸೇರಿದಂತೆ ಕಾಂಗ್ರೆಸ್ ಮುಖಂಡರಿಂದ ಪತ್ರಿಕಾಗೋಷ್ಠಿ.
ಅರಕಲಗೂಡು ತಾಲ್ಲೂಕಿಗೆ ಬ್ಲಾಕ್ ಕಾಂಗ್ರೆಸ್ ನ ಕೆಪಿಸಿಸಿ ಸದಸ್ಯರಾಗಿ ಆಯ್ಕೆಯಾದ ಹೆಚ್.ಟಿ. ಮಂಜುನಾಥ್ ಮಾತನಾಡಿ ನಾನು ನನ್ನನ್ನು ಆಯ್ಕೆ ಮಾಡಿದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಹಾಗೂ ಕೆಪಿಸಿಸಿ ಸದಸ್ಯರಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ನಂತರ ಮಾತನಾಡಿ ನಾನು ಆಯ್ಕೆಯಾಗಿ ಕಾಂಗ್ರೆಸ್ ಪಕ್ಷದ ಬಲವರ್ಧನೆ ಗಾಗಿ ಹೋರಾಟ ಮಾಡಿ , ಸಂಘಟನೆ ಮಾಡಿ ವಿರೋಧ ಪಕ್ಷದ ಲೋಪ ದೋಶಗಳನ್ನು ಎತ್ತಿ ಹಿಡಿದು ಪಕ್ಷ ಸಂಘಟನೆ ಮಾಡುವಂತೆ ರಾಜ್ಯ ನಾಯಕರು ಸೂಚಿಸಿದ್ದಾರೆ . ಅದರಂತೆಯೇ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತೇನೆ. ಸದ್ಯಕ್ಕೆ ನರೇಂದ್ರ ಮೋದಿ ಸರ್ಕಾರ ಎಪಿಎಂಸಿ ಕಾಯ್ದೆ ಜಾರಿಮಾಡಿ ರೈತರನ್ನು ಬೀದಿಗೆ ತಂದಿದೆ. ಮೂರು ನಾಲ್ಕು ತಿಂಗಳಿಂದ ರೈರರು ಬೀದಿಯಲ್ಲಿ ಹೋರಾಟ ಮಾಡಿ ನೂರಾರು ರೈತರು ಇದರಿಂದ ಜೀವ ಕಳೆದುಕೊಂಡಿದ್ದಾರೆ. ಆದರೂ ಸಹ ಕೇಂದ್ರ ಸರ್ಕಾರ ತಮಗೆ ಸಂಭಂಧವೇ ಇಲ್ಲ ಎಂಬಂತೆ ಬೇಜವಬ್ದಾರಿ ತೋರಿಸುತ್ತಿದೆ. ಇನ್ನೊಂದೆಡೆ ಪೆಟ್ರೋಲ್ ಡೀಸೆಲ್ , ಗ್ಯಾಸ್ ಏರಿಕೆಯಂದ ಜನ ಕಂಗಾಲಾಗಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ ಉಳಿದ ಎಲ್ಲಾ ವಸ್ತುಗಳ ಬೆಲೆ ಏರತೊಡಗಿದೆ. ಇದರಿಂದ ಜನ ಸಾಮಾನ್ಯರ ಬದುಕು ಕಷ್ಟದ ಸ್ಥಿತಿಗೆ ಬಂದಿದೆ. ಇಂತಹ ವಿಷಯಗಳ ಬಗ್ಗೆ ಪ್ರತಿಭಟನೆ ಮಾಡುವ ಮೂಲಕ ಪಕ್ಷ ಸಂಘಟನೆಯ ಕೆಲಸದಲ್ಲಿ ನಿರಂತರವಾಗಿ ಕೆಲಸ ಮಾಡುವುದಾಗಿ ಹೇಳಿದರು.
ಅರಕಲಗೂಡು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ ಅರಕಲಗೂಡು ತಾಲ್ಲೂಕಿಗೆ ಬ್ಲಾಕ್ ಕಾಂಗ್ರೆಸ್ ಕೆಪಿಸಿಸಿ ಸದಸ್ಯರಾಗಿ ಹೆಚ್.ಟಿ. ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ ಇದರಿಂದ ಪಕ್ಷ ಸಂಘಟನೆಗೆ ಹೆಚ್ಚಿನ ಶಕ್ತಿ ಬಂದಿದೆ. ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಜನಗಳನ್ನು ಯಾಮಾರಿಸಿ ಟೋಪಿ ಹಾಕುತ್ತಿದ್ದೆ. ನಿಜವಾದ ಬಿಜೆಪಿಯ ಬಣ್ಣವನ್ನು ಸದನದಲ್ಲಿ ಸಿದ್ದರಾಮಯ್ಯ ಅವರು ಬಯಲು ಮಾಡುತ್ತಿದ್ದಾರೆ. ಮೋದಿ ನಂಬಿ ಜನ ಓಟು ಹಾಕಿದ್ದಕ್ಕೆ ಬೆಲೆ ಏರಿಕೆಯ ಗಿಫ್ಟ್ ಕೊಟ್ಟಿದ್ದಾರೆ. ಅಕ್ಕ ಪಕ್ಕದ ದೇಶಗಳಲ್ಲಿ ಈ ರೀತಿ ಬೆಲೆ ಏರಿಕೆ ಇಲ್ಲ. ಇದು ನಮ್ಮ ದೇಶದಲ್ಲಿ ಮಾತ್ರ ಬೆಲೆ ಏರಿಕೆ ಯಾಗಿತ್ತಿದೆ ಎಂದು ವ್ಯಂಗ್ಯವಾಡಿದರು. ರಾಜ್ಯ ನಾಯಕರ ಸಲಹೆಯಂತೆ ಮುಂದಿನ ದಿನಗಳಲ್ಲಿ ರಾಜ್ಯ ನಾಯಕರನ್ನು ಕರೆತರುವ ಮೂಲಕ ಜನ ಧ್ವನಿ ಕಾರ್ಯಕ್ರಮ ಮೂಲಕ ಜನರ ಸಮಸ್ಯೆಗಳ ವಿರುದ್ದ ಹೋರಾಟ ಮಾಡುವುದಾಗಿ ತಿಳಿಸಿದರು.
ಕೆಪಿಸಿಸಿ ಸದಸ್ಯ ಮಂಜುನಾಥ್ ಅವರ ನೇತ್ರತ್ವದಲ್ಲಿ ತಾಲ್ಲೂಕಿನಾದ್ಯಂತ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಗ್ರಾಮ ಪಂಚಾಯತಿ ಸದಸ್ಯರುಗಳನ್ನು ಪಕ್ಷಕ್ಕೆ ಕರೆತರುವ ಮೂಲಕ ಪಕ್ಷ ಸಂಘಟನೆ ಮಾಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಶಫಿ ಅಹಮದ್ , ಗಣೇಶ್ ವೇಲಾಪುರಿ, ಮಕ್ಕಳ ತಜ್ಞ ದಿನೇಶ್, ಸಲೀಂ ಅಹಮದ್, ಪಟ್ಟಣ ಪಂಚಾಯತಿ ಸದಸ್ಯ ಪ್ರದೀಪ್ ಕುಮಾರ್, ಸುಬಾನ್ ಷರೀಫ್ ಹಾಗು ಅನಿಕೇತನ್ ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ