ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ‌ ನೀಡಿದ ಶಾಸಕ ಎ.ಟಿ.ರಾಮಸ್ವಾಮಿ

ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ ಶಾಸಕ  ಎ.ಟಿ.ರಾಮಸ್ವಾಮಿ

ಅರಕಲಗೂಡು:  ಹೇಮಾವತಿ ಜಲಾಶಯದಿಂದ  ತಾಲೂಕಿನ ಬಲ ಮೇಲ್ದಂಡೆ  ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಕ್ಷೇತ್ರ ಶಾಸಕರಾದ ಎ.ಟಿ.ರಾಮಸ್ವಾಮಿ ಶನಿವಾರ  ಚಾಲನೆ ನೀಡಿದರು. 

 ಇದೆ ಸಂದರ್ಭದಲ್ಲಿ ಮಾತನಾಡಿದ ಶಾಸಕರು , ಈ ಬಾರಿ ಜಲಾಶಯದಲ್ಲಿ ನೀರು ಸಂಗ್ರಹ  ಉತ್ತಮವಾಗಿರುವ ಕಾರಣ ಮುಂಚಿತವಾಗಿಯೆ ನಾಲೆಗಳಿಗೆ ನೀರು ಹರಿಸಲಾಗಿದೆ,  ಕಳೆದ ಮೂರು  ವರ್ಷಗಳಿಂದ  ಈ ಕ್ರಮ ನಡೆಸಲಾಗುತ್ತಿದೆ.  ಜಲಾಶಯದ  ಎಡ ಮತ್ತು ಬಲ ದಂಡೆ ನಾಲೆಗಳಿಗಿಂತ ಬಲ ಮೇಲ್ದಂಡೆ ನಾಲೆ ಎತ್ತರದಲ್ಲಿದೆ. ಹೀಗಾಗಿ 15 ದಿನ ಮುಂಚಿತವಾಗಿ ಈ ನಾಲೆಯಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. 

 96.8 ಕಿ ಮೀ ಉದ್ದದ ಬಲ ಮೇಲ್ದಂಡೆ ನಾಲೆಯಲ್ಲಿ  907 ಕ್ಯೂಸೆಕ್ಸ್ ನೀರಿನ ಹರಿವಿನ ಸಾಮರ್ಥ್ಯ  ಇದ್ದು, 56 ಸಾವಿರ  ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ.  6 ಸಾವಿರ  ಎಕರೆ ಭತ್ತದ ಬೆಳೆಗೆ  ಹಾಗೂ 50 ಸಾವಿರ ಎಕರೆಯಲ್ಲಿ ಅರೆ ನೀರಾವರಿ  ಬೆಳೆಗಳಿಗೆ ನಿರೊದಗಿಸುವ ಯೋಜನೆ ರೂಪಿಸಲಾಗಿದೆ.  ನಾಲಾ ವ್ಯಾಪ್ತಿಯಲ್ಲಿ 41 ವಿತರಣಾ ನಾಲೆಗಳು ಇದ್ದು 210 ಕೆರೆಗಳಿವೆ.  ಬಲ ಮೇಲ್ದಂಡೆ ನಾಲಾ ವ್ಯಾಪ್ತಿಯಲ್ಲಿ  146, ಅಡಿಕೆ ಬೊಮ್ಮನಹಳ್ಳಿ ಏತ ನೀರಾವರಿ ಯೋಜನೆಯಲ್ಲಿ 25,ಅಲ್ಲಾ ಪಟ್ಟಣ ಏತ ನೀರಾವರಿ ಯೋಜನೆಯಲ್ಲಿ 7,ಹಳ್ಳಿ ಮೈಸೂರು ಏತನೀರಾವರಿ ಯೋಜನೆಯಲ್ಲಿ 32 ಕೆರೆಗಳಿದ್ದು ಇವುಗಳನ್ನು  ತುಂಬಿಸಲು ಕ್ರಮ ಕೈಗೊಳ್ಳಾಗುವುದು ಎಂದರು. 
ನಾಲೆಯ ಆಧುನೀಕರಣ ಕಾಮಗಾರಿ ನಡೆದ ಬಳಿಕ ನೀರಿನ ಹರಿವಿನ ಸಾಮಾರ್ಥ್ಯ ಹೆಚ್ಚಾಗಿದೆ. ವ್ಯಾಪ್ತಿಯ  ಎಲ್ಲ 210 ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು. ಮೊದಲ ದಿನ 100 ಕ್ಯೂಸೆಕ್ಸ್ ನೀರು ಹರಿಸಲಾಗಿದ್ದು ಇದನ್ನು ಹಂತ, ಹಂತವಾಗಿ ಏರಿಕೆ ಮಾಡಲಾಗುವುದು. ನಾಲೆಯ ಕೊನೆಯ ಹಂತದ ರೈತರ ಜಮೀನಿಗೂ ನೀರು ಸರಾಗವಾಗಿ ಹರಿಯುವಂತೆ  ಗಮನ ಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ರೈತರು ನೀರನ್ನು ಪೋಲು ಮಾಡದಂತೆ ವ್ಯವಸ್ಥಿತ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ  ಉತ್ತಮ ಬೆಳೆ ಬೆಳೆಯುವಂತೆ  ಸಲಹೆ ಮಾಡಿದರು. 

 ಈ ಸಂದರ್ಭದಲ್ಲಿ ವಿಜಾಪುರ  ಅರಣ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಲಲಿತಮ್ಮ, ಹೇಮಾವತಿ ಬಲಮೇಲ್ದಂಡೆ ನಾಲಾ ವಿಭಾಗದ ಕಾರ್ಯಪಾಲಕ  ಎಂಜಿನಿಯರ್ ಜಯಕುಮಾರ್, ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಉಪಸ್ಥಿತರಿದ್ದರು.

ಸಂಪಾದಕ: ರಘು.ಬಿ.ಎ
                 ಅರಕಲಗೂಡು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಥೂ.. ನಿಮ್ ಯೋಗ್ಯತೆಗಿಷ್ಟು ಬೆಂಕಿ ಹಾಕ. ಸಚಿವ ಸುದಾಕರ್ ಗೆ ಮಹಿಳಾ ಛೀಮಾರಿ.