ತಂಬಾಕು ಮನೆಗೆ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಮನೆ
ಮಲ್ಲಾಪುರ ಗ್ರಾಮದ ಮಲ್ಲೇಶ್ ರವರಿಗೆ ಸೇರಿದ ತಂಬಾಕು ಬ್ಯಾರನ್ ಮನೆಗೆ ಹೊಗೇಸಪ್ಪು ಬೇಯಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಸಂಪೂರ್ಣ ಸುಟ್ಟು ಬಸ್ಮವಾಗಿದೆ.
ಹೊಗೆಸೊಪ್ಪು ಬ್ಯಾರನ್ ಮನೆಗೆ ಬೆಂಕಿ ಬಿದ್ದ ಪರಿಣಾಮ ಬೇಯಿಸುತ್ತಿದ್ದ ಹೋಗೆಸಪ್ಪು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅಲ್ಲದೇ ತಂಬಾಕು ಮನೆಯಲ್ಲಿದ್ದ ಕಡ್ಡಿ ಫೋಲ್ಸ್ ಹಾಗೂ ಮನೆಯ ಮೇಲ್ಛಾವಣಿಯು ಸಹ ಸಂಪೂರ್ಣವಾಗಿ ಹಾನಿಯಾಗಿದೆ .
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಆಗಲೇ ಮನೆ ಸಂಪೂರ್ಣವಾಗಿ ಸುಟ್ಟ ಹೋಗಿದೆ. ಇದರಿಂದ ಮಲ್ಲೇಶ್ ಎಂಬುವರಿಗೆ ಸುಮಾರು 6 ರಿಂದ 7 ಲಕ್ಷಗಳಷ್ಟು ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.
ತಂಬಾಕು ಮನೆ ಸುಟ್ಟು ಹೋಗಿದ್ದರಿಂದ ಅಲ್ಪ ಸ್ವಲ್ಪ ಪರಿಹಾರ ಬರುತ್ತದೆ ಆದರೂ ಇದು ಸಂಪೂರ್ಣವಾಗಿ ರೈತರ ನಷ್ಟವನ್ನು ತುಂಬಲು ಸಾಧ್ಯವಿಲ್ಲ ಎಂಬುದು ನೋವಿನ ಸಂಗತಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ