ಅರಕಲಗೂಡು ಪೇಟೆ ಮಾಚಗೌಡನಹಳ್ಳಿ ಬಳಿ ರಸ್ತೆ ಅಪಘಾತ.
ಅರಕಲಗೂಡು ಪೇಟೆ ಮಾಚಗೌಡನಹಳ್ಳಿ ಬಳಿ ಕೆಟ್ಟು
ನಿಂತಿದ್ದ ಲಾರಿಗೆ ಬೈಕ್ ಸವಾರ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಹೆಚ್ಚಿನ ಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೇ ಬೈಕ್ ಸವಾರ ಪ್ರಜ್ಞೆ ತಪ್ಪಿದ್ದಾನೆ.
ನಿಂತಿದ್ದ ಲಾರಿಗೆ ಬೈಕ್ ಸವಾರ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಹೆಚ್ಚಿನ ಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೇ ಬೈಕ್ ಸವಾರ ಪ್ರಜ್ಞೆ ತಪ್ಪಿದ್ದಾನೆ.
ಅರಕಲಗೂಡು ಪಟ್ಟಣದಲ್ಲಿ ಇರುವ ಅಂಚೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಂಜುಶೆಟ್ಟಿ ಎಂದು ಗುರುತಿಸಲಾಗಿದೆ. ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆಯ ಗ್ರಾಮದವರು. ಎಂದು ಹೇಳಲಾಗಿದೆ.
ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಮಂಜು ಶೆಟ್ಟಿ ರವರನ್ನು ಹಾಸನ ಜಿಲ್ಲಾಸ್ಪತ್ರೆ ಇಂದ ರವಾನಿಸಲಾಗಿದೆ.
ಪಂಕ್ಚರ್ ಆಗಿದ್ದ ಲಾರಿಯನ್ನು ಮಧ್ಯಾಹ್ನದಿಂದಲೂ ತೆರವುಗೊಳಿಸದೇ ರಸ್ತೆಯಲ್ಲಿ ನಿಲ್ಲಿಸಿಕೊಂಡಿದ್ದ ಎಂದು ಸ್ಥಳಿಯರು ಹೇಳುತ್ತಿದ್ದು
ಲಾರಿಯ ಹಿಂಬದಿಯಲ್ಲಿ ಯಾವುದೇ ರೇಡಿಯಂ ಪಲಕ ಹಾಕದೇ ಇದ್ದುದ್ದರಿಂದಲೇ
ರಾತ್ರಿ ಸಮಯದಲ್ಲಿ ನಿಂತಿದ್ದ ಲಾರಿಯನ್ನು ಗುರುತಿಸಲು ಸಾಧ್ಯವಾಗಿಲ್ಲ. ಆದ್ದರಿಂದಲೇ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಪೋಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಅಪಘಾತಕ್ಕೆ ಸಂಬಂದಿಸಿದಂತೆ ಅರಕಲಗೂಡು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಾಗಿರುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ