ಶುಂಠಿ ಬೆಲೆ ಕುಸಿತ: ರೈತರ ಹಿತ ಕಾಪಾಡುವಂತೆ ಹೆಚ್.ಯೋಗಾರಮೇಶ್ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ.
ಅರಕಲಗೂಡು: ಹೆಚ್.ಯೋಗಾರಮೇಶ್ ನೇತೃತ್ವದಲ್ಲಿ ಪೊಟ್ಯಾಟೋ ಕ್ಲಬ್ ಕಛೇರಿಯಲ್ಲಿ ಇಂದು ನಡೆದ ಶುಂಠಿ ಬೆಳೆಗಾರರ ರೈತರ ಸಂವಾದದಲ್ಲಿ ಶುಂಠಿ ಬೆಳೆಗಾರರ ರೈತರ ಸಂಕಷ್ಟದ ಬಗ್ಗೆ ರೈತರೊಂದಿಗೆ ಸಮಸ್ಯೆಗಳನ್ನು ಚರ್ಚಿಸಲಾಯಿತು. ಶುಂಠಿ ಬೆಳೆಯಲು ಅನುಸರಿಸಬೇಕಾದ ವೈಜ್ಞಾನಿಕ ಕ್ರಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲಾಯಿತು.
ಅರಕಲಗೂಡು ಪೊಟ್ಯಾಟೋ ಕ್ಲಬ್ ಅಧ್ಯಕ್ಷರಾದ ಹೆಚ್ ಯೋಗಾರಮೇಶ್ ಮಾತನಾಡಿ ರೈತರು ಅರ್ಥಿಕವಾಗಿ ಸ್ವಲ್ಪ ಹಣ ಗಳಿಸಬಹುದು ಎಂದು ಪ್ರತಿ ವರ್ಷವೂ ಶುಂಠಿ ಬೆಳೆ ಬೆಳೆಯುತ್ತಿದ್ದಾರೆ. ಶುಂಠಿ ಔಷದೀಯ ಜೊತೆಗೆ ಆಹಾರಕ್ಕಾಗಿ ಹೆಚ್ಚಾಗಿ ಬಳಕೆ ಆಗುತ್ತಿದೆ.
ಒಂದು ವರ್ಷ ಶುಂಠಿಗೆ ಒಳ್ಳೆಯ ಬೆಲೆ ಬಂದರೆ ಆ ವರ್ಷ ಶುಂಠಿಗೆ ಕಾಯಿಲೆ ಬಂದು ಉತ್ತಮ ಬೆಳೆ ಬಂದಿರುವುದಿಲ್ಲ. ಇದಕ್ಕೆ ಒಳ್ಳೆಯ ದೃಢೀಕೃತ ಬೀಜ ಇಲ್ಲದಿರುವುದೇ ಆಗಿದೆ. ಇದರಿಂದ ರೈತರು ಆರ್ಥಿಕವಾಗಿ ಪ್ರತಿ ವರ್ಷವೂ ಸಂಕಷ್ಟ ಎದುರಿಸುವಂತಾಗಿದೆ ಎಂದರು.
ತಾಲ್ಲೂಕಿನಲ್ಲಿ ಪ್ರತಿ ಗ್ರಾಮದಲ್ಲೂ ಕನಿಷ್ಠ 50 ರಿಂದ 100 ಜನ ಶುಂಠಿ ಬೆಳೆಗಾರರು ಇದ್ದಾರೆ. ಇವರಿಗೆ ಒಂದೊಂದು ರೈತರಿಗೆ 2-3 ಲಕ್ಷ ನಷ್ಟ ಎಂದು ಅಂದಾಜು ಮಾಡಿದರೂ ಒಂದು ಗ್ರಾಮದಲ್ಲಿ 1 ರಿಂದ 2-3 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ತಾಲ್ಲೂಕಿನಲ್ಲಿ ಸಾವಿರಾರು ಕೋಟಿಗೂ ಅಧಿಕ ನಷ್ಟ ರೈತರಿಗೆ ಉಂಟಾಗಿದೆ.
ಈ ವರ್ಷ ಶುಂಠಿ ಬೆಲೆ ಕುಸಿತ ಹಿನ್ನೆಲೆ ರೈತರು ಕಂಗಾಲಾಗಿದ್ದಾರೆ. ರೈತರು ತಮ್ಮ ಒಡವೆಗಳನ್ನು ಅಡ ಇಟ್ಟು, ಬಡ್ಡಿ ಸಾಲ ಮಾಡಿ, ಬ್ಯಾಂಕ್ ಸಾಲ ತಂದು ಶುಂಠಿ ವ್ಯವಸಾಯಕ್ಕೆ ಹಣ ಹಾಕಿದ್ದಾರೆ. ಕಳಪೆ ಮಟ್ಟದ ಬೀಜದಿಂದ ಶುಂಠಿ ಹಾಕಿದ ಎರಡು ಮೂರು ತಿಂಗಳಲ್ಲಿ ಕಾಯಿಲೆಗೆ ತುತ್ತಾಗಿ ಈಗಾಗಲೇ %50 ಬೆಳೆ ನಷ್ಟ ಆಗಿದೆ. ಅಲ್ಲದೇ ಈಗ ಶುಂಠಿ ಬೆಳೆಯಲು ಖರ್ಚು ಬೀಜ, ಗೊಬ್ಬರ , ಔಷದೀಯ ಬೆಲೆ ಹತ್ತು ಪಟ್ಟು ಹೆಚ್ಚಾಗಿದೆ ಒಂದು ಎಕರೆಯಲ್ಲಿ ಶುಂಠಿ ಬೆಳೆಯಲು 1.5 ಲಕ್ಷದಿಂದ 2 ಲಕ್ಷದ ವರೆಗೆ ಖರ್ಚು ಬರುತ್ತಿದೆ.
ಇನ್ನೊಂದೆಡೆ ಬೆಲೆ ಕುಸಿದು ಶುಂಠಿ ಬೆಲೆ 60 ಕೆ.ಜಿ. ಚೀಲಕ್ಕೆ 300/- ರಿಂದ 350/- 400/- ರುಪಾಯಿಗೆ ಇಳಿದಿದೆ. ಒಂದು ಚೀಲ ಶುಂಠಿ ಕೀಳಲು 200 ರಿಂದ 300 ರೂ ವೆಚ್ಚವಾಗುತ್ತದೆ. ಇದರಿಂದ ಬೇಸತ್ತ ರೈತರು ತಮ್ಮ ಜಮೀನಿನಲ್ಲೇ ಶುಂಠಿ ಬೆಳೆ ನಾಶ ಮಾಡುವ ಮನಸ್ಥಿತಿಗೆ ಬಂದಿದ್ದಾರೆ. ಬೇರೆ ಬೆಳೆಗಳನ್ನು ಬೆಳೆದರೂ ಅದಕ್ಕೂ ಬೆಲೆ ಇಲ್ಲ.
ಪ್ರತಿ ವರ್ಷ ರೈತರ ಆರ್ಥಿಕ ಪರಿಸ್ಥಿತಿ ಹೀಗಾದರೆ ರೈತರ ಸ್ಥಿತಿ ಏನಾಗಬೇಕು ಎಂದು ಆತಂಕ ವ್ಯಕ್ತಪಡಿಸಿದರು.
ಇವತ್ತು ಬೆಲೆ ಏರಿಕೆಯ ಕಡೆಗೆ ಗಮನ ನೀಡುವುದನ್ನು ಬಿಟ್ಟು ರೈತರು ಬೆಳೆದ ಬೆಳೆಗಳಿಗೆ ಬೆಲೆ ಕುಸಿತ ಕಂಡಿರುವ ಕಡೆಗೆ ಹಾಗೂ ಬೆಲೆ ಇಳಿಕೆಯ ಕಡೆಗೆ ಸರ್ಕಾರ ಮತ್ತು ವಿರೋಧ ಪಕ್ಷದವರು ಗಮನ ಹರಿಸಬೇಕು ಎಂದು ಮನವಿ ಮಾಡಿದರು
ಸರ್ಕಾರ ತಕ್ಷಣವೇ ಶುಂಠಿಗೆ 1500/- ಬೆಂಬಲ ಬೆಲೆ ಘೋಷಣೆ ಮಾಡಬೇಕು. ಮತ್ತು ಮುಂದಿನ ದಿನಗಳಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ದೃಢೀಕೃತ ಬೀಜವನ್ನು ಸರ್ಕಾರದ ವತಿಯಿಂದಲೇ ನೀಡಬೇಕು.
ಇದುವರೆಗೂ ಯಾವ ಯುನಿವರ್ಸಿಟಿಗಳು ಸಹ ಒಂದೇ ಒಂದು Kg ದೃಢೀಕೃತ ಬಿತ್ತನೆ ಶುಂಠಿ ಬೀಜವನ್ನು ಉತ್ಪಾ ಮಾಡುತ್ತಿಲ್ಲ. ಶುಂಠಿ ಬಗ್ಗೆ ಇದುವರೆಗೂ ಯಾವುದೇ ಅಧ್ಯಯನ ನಡೆಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು
ಬೆಳೆದ ಶುಂಠಿಯನ್ನು ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಹಾಗೂ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಬೇಕು. ಸರ್ಕಾರ ತಕ್ಷಣವೇ ಶುಂಠಿಗೆ ಬೆಳೆ ನಷ್ಟ ಪರಿಹಾರನೀಡಬೇಕು. ಈ ಮೂಲಕ ಸರ್ಕಾರ ಶುಂಠಿ ಬೆಳೆಗಾರರ ಹಿತ ಕಾಪಾಡಬೇಕು ಎಂದು ತಾಲ್ಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಸರ್ಕಾರವನ್ನು ಒತ್ತಾಯಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಶುಂಠಿ ಬೆಳೆದ ರೈತರು, ಪೊಟ್ಯಾಟೋ ಕ್ಲಬ್ ಸದಸ್ಯರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ