ಪೋಸ್ಟ್‌ಗಳು

ಜುಲೈ, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅರಕಲಗೂಡು: ಮಲ್ಲಿಪಟ್ಟಣ ಗ್ರಾ.ಪಂ ಅಧ್ಯಕ್ಷ ಎಂ.ಆರ್.ರಂಗಸ್ವಾಮಿ ನೇತೃತ್ವದಲ್ಲಿ ಸಭೆ.

ಇಮೇಜ್
ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಗ್ರಾಪಂ ವತಿಯಿಂದ ಗ್ರಾಮಸಭೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರು ವಿವಿಧ ಸವಲತ್ತುಗಳನ್ನು ಕೋರಿ ಅರ್ಜಿ ಸಲ್ಲಿಸಿದರು. ಮಲ್ಲಿಪಟ್ಟಣದಲ್ಲಿ ಗ್ರಾಪಂ ವಾಣಿಜ್ಯ ಮಳಿಗೆಗಳ ಹರಾಜು ನಡೆಸಿ ಹಲವಾರು ವರ್ಷಗಳೇ ಕಳೆದಿದೆ. ಕೆಲವರು ಮಳಿಗೆಗಳನ್ನು ಹೆಚ್ಚು ಬಾಡಿಗೆ ವಸೂಲಿ ಮಾಡಿ ಪಂಚಾಯಿತಿ ಕಡಿಮೆ ಬಾಡಿಗೆ ಹಣ ಪಾವತಿಸುತ್ತಿದ್ದಾರೆ. ಇದರಿಂದ ಪಂಚಾಯಿತಿಗೆ ಬರಬೇಕಾದ ಲಾಭ ಕೈತಪ್ಪುತ್ತಿದೆ. ಮಳಿಗೆಗಳ ಮರು ಹರಾಜು ನಡೆಸಬೇಕು ಎಂದು ಗ್ರಾಮಸ್ಥರು ಸಭೆಯಲ್ಲಿ ಆಗ್ರಹಿಸಿದರು. ಗ್ರಾಪಂ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಮಾತನಾಡಿ, ಕಳೆದ ಬಾರಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿತ್ತು. ಕರೊನಾ ಕಾರಣದಿಂದಾಗ ಮಳಿಗಳ ವರ್ತಕರು ವ್ಯಾಪಾರವಾಗದೆ ನಷ್ಟದಲ್ಲಿದ್ದ ಕಾರಣ ಹರಾಜು ನಡೆಸುವುದನ್ನು ಕೈ ಬಿಡಲಾಯಿತು. ಮುಖ್ಯ ರಸ್ತೆಯ ಕೊಡ್ಲಿಪೇಟೆ ಇಲ್ಲವೇ ಶನಿವಾರ ಸಂತೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಲಿದೆ. ಇಂದಿಗೂ ಯಾವ ಮಾರ್ಗದಲ್ಲಿ ಹೈವೆ ಮಾರ್ಗ ನಿರ್ಮಾಣವಾಗಲಿದೆ ಎನ್ನುವ ಸ್ಪಷ್ಟ ಮಾಹಿತಿ ಇಲ್ಲ. ರಸ್ತೆ ನಿರ್ಮಾಣವಾದರೆ ಮಳಿಗೆಗಳನ್ನು ತೆರವುಗೊಳಿಸಬೇಕಾಗುತ್ತದೆ. ಹೀಗಾಗಿ ಹರಾಜು ನಡೆಸಲು ಸಾಧ್ಯವಾಗಿಲ್ಲ. ಈ ಕುರಿತು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು. ತೋಟಗಾರಿಕೆ ಇಲಾಖೆ ಅಧಿಕಾರಿ ಧನಂಜಯ ಮಾತನಾಡಿ, ಕೇಂದ್ರ ಮತ್...