ಅರಕಲಗೂಡಿನ ಹಿರಿಯ ವೈದ್ಯರಾಗಿದ್ದ ಡಾ. ಎ.ವಿ ಗುಂಡಪ್ಪ ಇಂದು ಸಂಜೆ ನಿಧನರಾಗಿದ್ದಾರೆ
ಮಾಜಿ ಪುರಸಭಾ ಸದಸ್ಯರಾಗಿದ್ದ ಇವರು ಸೀತಾ ರಾಘವ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಜೇಸೀಸ್ ಅಧ್ಯಕ್ಷ ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಇವರ ಪತ್ನಿ ವಿಶಾಲಾಕ್ಷಮ್ಮ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ. ಇವರಿಗೆ ನಾಲ್ವರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಬಿಟ್ಟು ಅಗಲಿದ್ದಾರೆ
ಯಾವುದೇ ಕಾಯಿಲೆ ಇದ್ದರೂ ಗುಂಡೂಡಾಕ್ಟರ್ ಹತ್ತಿರ ಇಂಜೆಕ್ಷನ್ ತಗೊ ಗುಣಆಗುತ್ತೆ ಅನ್ನುವ ಕಾಲವಿತ್ತು ಅರಕಲಗೂಡಿನಲ್ಲಿ... ಎಂತಹ ಕಾಯಿಲೆಗೂ ಗುಂಡೂಡಾಕ್ಟರ್ ಇಂಜೆಕ್ಷನ್ ದಿವ್ಯೌಷಧ ವಾಗಿತ್ತು.. ಹಲವಾರು ವರುಷ ವೈದ್ಯಕೀಯ ಸೇವೆ ಯನ್ನು ಡಾ. ಗುಂಡಪ್ಪ ನವರು ಅರಕಲಗೂಡಿನಲ್ಲಿ ಸಲ್ಲಿಸಿದ್ದಾರೆ.. ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.. ಇವರು ಇಂದು ವಯೋಸಹಜ ಹಾಗೂ ಅನಾರೋಗ್ಯ ದಿಂದ ಮೃತರಾಗಿದ್ದಾರೆ.. ಮೃತರಿಗೆ ಅಂತಿಮ ನಮನಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ