ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ಲಾಟ್ ಪಾರಂಗಳನ್ನು ರೈತರು ಉಪಯೋಗಿಸಿಕೊಳ್ಳುವಂತೆ ಶಾಸಕ ಎ.ಟಿ.ರಾಮಸ್ವಾಮಿ ಸಲಹೆ.

ರಾಮನಾಥಪುರ-  ಗ್ರಾಮೀಣ ಪ್ರದೇಶದಲ್ಲಿ ಇಂತಹ ಕೃಷಿ ಮಾರುಕಟ್ಟೆಗಳು ಅತ್ಯವಶ್ಯವಾಗಿದೆ. ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಇಲ್ಲಿಯ ಫ್ಲಾಟ್ ಪಾರಂನ್ನು ಉಪಯೋಗ ಪಡೆದುಕೊಳ್ಳುವಂತೆ ಶಾಸಕ ಡಾ. ಎ.ಟಿ. ರಾಮಸ್ವಾಮಿ ಮನವಿ ಮಾಡಿದರು.

ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ
ಗ್ರಾಮ ಪಂಚಾಯತಿ ಅವರಣದಲ್ಲಿ ನರ್ಬಾಡ್ ಯೋಜನೆಯ ವತಿಯಿಂದ  75 ಲಕ್ಷ ರೂ ವೆಚ್ಚದಲ್ಲಿ  3 ಪ್ಲಾಟ್ ಪಾರಂಗಳು ಕೃಷಿ ಉತ್ಮನ್ನ ಮಾರುಕಟ್ಟೆವತಿಯಿಂದ
ನಿರ್ಮಾಣದ ಉದ್ಘಾಟನಾ  ಪ್ರಾರಂಭದಲ್ಲಿ ಮಾತನಾಡಿದ ಅವರು ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ಇಲ್ಲಿ ವ್ಯವಸ್ಥೆ ಮಾಡುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.

 ತಮ್ಮ  ದೈನಂದಿನ ಜೀವನದಲ್ಲಿ 
ಹಬ್ಬಗಳು ಎಂದರೆ ಸಂಭ್ರಮ, ಸಂತೋಷ, ಒಂದೊಂದು ಹಬ್ಬವು ನಮ್ಮ ಹಿರಿಯರು ಹಾಕಿಕೊಟ್ಟ ಹಿನ್ನಲೆಯಲ್ಲಿ ಅಯಾ ಋತು ಮಾನಗಳ ಹೊಂದಿಕೆಗೆ ಅನುಗುಣವಾಗಿ ದೈನಂದಿನ  ಬದುಕಿನ ಬದುಕಿನ‌ ಜೊತೆಗೆ ಬಿಡುವಿನ ವೇಳೆಯಲ್ಲಿ ರೈತರು ತಾವು ಬೆಳೆದಿರುವ ತರಕಾರಿ, ಹಣ್ಣು ಹಪ್ಪಲಗಳನ್ನು ಎಂತಹ ಕೃಷಿ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡುವ ಮೂಲಕ ಉತ್ತಮ ಅದಾಯದ ಮೂಲಕ  ಹವ್ಯಾಸ ಗುಣಗಳನ್ನು ಅಳವಡಿಸಿಕೊಳ್ಳಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷರು ಸವೀತಾರಾಮ್,  ತಹಸಿಲ್ದಾರ್ ವೈ.ಎಂ. ರೇಣುಕುಮಾರ್, ಕಾರ್ಯನಿರ್ವಾಣಧಿಕಾರಿ ರವಿಕುಮಾರ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರಾಜಶೇಖರ್, ನೀರಾವರಿ ಇಲಾಖೆ ಇಂಜಿನಿಯರ್ ಜಯರಾಂ,  ಎಪಿಎಂಸಿ. ಅಧಿಕಾರಿ ಸೋಮಶೇಖರ್, ವೆಂಕಟೇಶ್, ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್, ಕಾರ್ಯದರ್ಶಿ ನಿಂಗಣ್ಣ, ಉಪತಹಸಿಲ್ದಾರ್ ಜಿ.ಸಿ. ಚಂದ್ರು. ಅರ್.ಐ. ಸ್ವಾಮಿ, ಅ.ಭಾ.ಸಂ.ರಾಜ್ಯಧ್ಯಕ್ಷ ಬಿ.ಅರ್. ನಾರಾಯಣಸ್ವಾಮಿ, ಎ.ಪಿ.ಎಂ.ಸಿ. ಮಾಜಿ. ಉಪಾಧ್ಯಕ್ಷರು ನಾಗರಾಜು, ಗ್ರಾ.ಪಂ. ಮಾಜಿ ಅಧ್ಯಕ್ಷರು ಕಾಳೇಗೌಡ, ಚಿಕ್ಕಣ್ಷಶೆಟ್ಟಿ, ಯೋಗೇಶ್, ಮಾಜಿ ಸದಸ್ಯರು ದಿವಾಕರ್, ತಿಪ್ಪೇಗೌಡ, ಮುಖಂಡರು ಉಪ್ಪಾರಿಕೇಗೌಡ., ಹನ್ಯಾಳು ಮಂಜು, ರವೀಶ್. ಗೋವಿಂದರಾಜು, ಬಿ.ಎಂ. ಪುಟ್ಟರಾಜು, ಗೋವಿಂದೇಗೌಡ,  ದ್ಯಾವಯ್ಯ, ಸ್ವಾಮಿಗೌಡ ಮುಂತಾದವರು ಭಾಗವಹಿಸಿದ್ದರು.


ರಘು.ಅರಕಲಗೂಡು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಥೂ.. ನಿಮ್ ಯೋಗ್ಯತೆಗಿಷ್ಟು ಬೆಂಕಿ ಹಾಕ. ಸಚಿವ ಸುದಾಕರ್ ಗೆ ಮಹಿಳಾ ಛೀಮಾರಿ.