ಕೊಟ್ಟಿಗೆ ಮೇಲ್ಛಾವಣಿ ಕುಸಿದು ಮೃತಪಟ್ಟ ಹಸು.

ಕೊಟ್ಟಿಗೆ ಮೇಲ್ಛಾವಣಿ ಕುಸಿದು ಹಸು ಸಾವು.
ಕೊಣನೂರು ಸಮೀಪದ ಬಿಸಲಹಳ್ಳಿಯಲ್ಲಿ ಕೊಟ್ಟಿಗೆಯಲ್ಲಿ ಚಾವಣಿ ಕುಸಿದು ಹಸು ಮೃತಪಟ್ಟಿದ್ದು ಸ್ಥಳಕ್ಕೆ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ಕೊಣನೂರು: ಕೊಟ್ಟಿಗೆ ಮೇಲ್ಛಾವಣಿ ಕುಸಿದು ಹಸುವೊಂದು ಮೃತಪಟ್ಟಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ. 
ಕೊಣನೂರು ಹೋಬಳಿಯ ಬಿಸಲಹಳ್ಳಿ ಗ್ರಾಮದ ನಂಜುಡಪ್ಪ ಎಂಬುವರಿಗೆ ಸೇರಿದ ಕೊಟ್ಟಿಗೆಯು ಶನಿವಾರ ತಡರಾತ್ರಿ ಕುಸಿದಿದ್ದು  ಹಸು ಮರಣಹೊಂದಿದೆ.
ಕೊಟ್ಟಿಗೆಯಲ್ಲಿದ್ದ 3 ಹಸು, 2 ಕರುಗಳು, 1 ಎಮ್ಮೆ ಮತ್ತು ಒಂದುನಾಯಿ ಪ್ರಾಣಾಪಾಯದಿಂದ ಪಾರಾಗಿವೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಹಸುವಿನ ಮಾಲೀಕನಿಗೆ ಗರಿಷ್ಠಮಟ್ಟದ ಪರಿಹಾರವನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ಕಂದಾಯ ನಿರೀಕ್ಷಿಕ ಕಿರಣ್ ಕುಮಾರ್, ಗ್ರಾಮಲೆಕ್ಕಿಗ ಪುನೀತ್ ಕುಮಾರ್ ಸ್ಥಳದಲ್ಲಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಅರಕಲಗೂಡು ತಾಲ್ಲೂಕು ಕಛೇರಿ ಆವರಣದಲ್ಲಿ ಕೋವಿಡ್-19 ಸೊಂಕಿನಿಂದ ಮೃತಪಟ್ಟ 44 ಕುಟುಂಬದ ವಾರಸುದಾರರಿಗೆ ತಲಾ ಒಂದು ಲಕ್ಷದ ಚೆಕ್ ಅನ್ನು ಶಾಸಕರಾದ ಎ.ಟಿ.ರಾಮಸ್ವಾಮಿ ಅವರು ನೀಡಿದರು.