ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಗಂಟೆಗೊಂದು ಆದೇಶ
*ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಗ್ಗೆ 10ರ ತನಕ ವ್ಯಾಪಾರಕ್ಕೆ ಅವಕಾಶ. ಉಳಿದಂತೆ ಭಾನುವಾರ, ಮಂಗಳವಾರ, ಗುರುವಾರ, ಶನಿವಾರ ಹಾಸನ ಸಂಪೂರ್ಣ ಲಾಕ್ ಡೌನ್.* ಆದೇಶವನ್ನು ಇಂದಿನ ಸಭೆಯಲ್ಲಿ ನೀಡಲಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವರಿಂದ ಆದೇಶ.
ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಾಲ್ಕು ದಿನ ಲಾಕ್ ಡೌನ್ ಆದೇಶ ರದ್ದು ಮಾಡಿದ್ದು, ಜಿಲ್ಲೆಯ ಶಾಸಕರ ಮನವಿ ಆಗ್ರಹ ಸಲಹೆಗಳಿಗೆ ಕೊಂಚವು ಕಿಮ್ಮತ್ತು ಸಿಕ್ಕಿಲ್ಲ, ಜೆಡಿಎಸ್ ಪಕ್ಷದ ಎಲ್ಲ ಶಾಸಕರು ಮಂತ್ರಿಗಳ ಸಭೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ನಿರ್ವಹಣೆ ಮಾಡಲು ಲಾಕ್ ಡೌನ್ ಮಾಡಿ ಎಂದು ಹೇಳಿದ್ದರಿಂದ ಮಾಡಿದ್ದ ನಾಲ್ಕು ದಿನಗಳ ಲಾಕ್ ಡೌನ್ ಆದೇಶವನ್ನು ಒಂದು ಗಂಟೆಯ ನಂತರ ಸಚಿವರು ವಾಪಸ್ ಪಡೆದಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಸಭೆಯಲ್ಲಿ ಕೈಗೊಂಡ ಲಾಕ್ ಡೌನ್ ಆದೇಶವನ್ನು ರದ್ದು ಮಾಡಿದ್ದು, ಮುಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆದೇಶ ಬರುವವರೆಗು ಈಗ ಇರುವ ಪರಿಸ್ಥಿತಿಯನ್ನು ಮುಂದುವರೆಸಲಾಗಿದೆ ಎಂದರು. ಬೆಂಗಳೂರಿನಲ್ಲಿ ಸಿಎಂ ಜೊತೆ ಚರ್ಚಿಸಿ ಕೇಂದ್ರದ ಆದೇಶ ನೋಡಿಕೊಂಡು ಮುಂದಿನ ತೀರ್ಮಾನ ಎಂದು ಹೇಳಿಕೆ ನೀಡಿದರು. ಇದರಿಂದ ಎಲ್ಲ ಜನಪ್ರತಿನಿಧಿಗಳ ಹೋರಾಟ ಹಾರಾಟಗಳೆಲ್ಲ ಮೂಲೆಗುಂಪಾಗಿದ್ದು, ಅವರ ಮಾತುಗಳಿಗೆ ಯಾವುದೇ ಬೆಲೆಯಿಲ್ಲದಂತೆ ಆಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ