ಟಿ.ನರಸೀಪುರ:ಮೇಕೆದಾಟು ವಿಚಾರವಾಗಿ ತಮಿಳುನಾಡು ಸರ್ಕಾರ ವಿರೋಧ ಮಾಡದೆ ಸಹಕಾರ ನೀಡಬೇಕು ಎಂದ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ.

ಟಿ.ನರಸೀಪುರ:ಮೇಕೆದಾಟು ವಿಚಾರವಾಗಿ ತಮಿಳುನಾಡು ಸರ್ಕಾರ ವಿರೋಧ ಮಾಡದೆ ಸಹಕಾರ ನೀಡಬೇಕೆಂದ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ.

ಜನಾಶೀರ್ವಾದ ಯಾತ್ರೆಗೆ ಟಿ.ನರಸೀಪುರಕ್ಕೆ ಆಗಮಿಸಿದ ಭಾರತ ಸರ್ಕಾರದ ಸಚಿವೆ ಶೋಭಕರಂದ್ಲಾಜೆಯವರನ್ನು ತಾಲ್ಲೂಕು ಬಿಜೆಪಿ ಘಟಕ ಪೂರ್ಣ ಕುಂಭ ಸ್ವಾಗತದೊಂದಿಗೆ ಸ್ವಾಗತಿಸಿದರು.ಮಹಾಲಕ್ಷ್ಮಿ ಸಮೇತ ಗುಂಜಾನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವೇದಿಕೆಗೆ ಆಗಮಿಸಿದ ಸಚಿವರು ರಾಷ್ಟ್ರನಾಯಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ,ನ್ಯಾಯಾಧಿಕರಣದ ಮೂಲಕ ರಾಜ್ಯದಿಂದ ಸಮಯಕ್ಕೆ ಸರಿಯಾಗಿ ನೀರಿದ್ದಾಗ,ನೀರಿಲ್ಲದಾಗ ತಮಿಳುನಾಡಿಗೆ ಕರ್ನಾಟಕದಿಂದ ನೀರು ಬಿಡುತ್ತಿದ್ದು, ಮೇಕೆದಾಟು ವಿಚಾರವಾಗಿ ತಮಿಳುನಾಡು ಸಹಕರಿಸುವಂತೆ ಒತ್ತಾಯಿಸಿದರು.
ಬಿಜೆಪಿ ಸರ್ಕಾರ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಧಿಕಾರ ನೆಡೆಸುತ್ತಿದ್ದು ನರೇಂದ್ರಮೋದಿಯವರು ದೇಶದ ಜನರ ಹಿತ ಕಾಪಾಡುವಲ್ಲಿ ಶ್ರಮಿಸಿತ್ತಿದ್ದಾರೆಂದರು.ಪ್ರಮುಖವಾಗಿ ನಮ್ಮದು ರೈತ ಪ್ರಧಾನ ದೇಶ.ಆರಂಭದಲ್ಲಿ ಅಧಿಕಾರಕ್ಕೆ ಬಂದವರು ರೈತರನ್ನು ಮರೆತು ದೊಡ್ಡ,ದೊಡ್ಜ ಉದ್ಯಮಗಳ ಮೊರೆ ಹೋದರು.ಇಂದು ಆ ಉದ್ಯಮಗಳೆಲ್ಲಾಮುಚ್ಚಿ ಹೋಗಿವೆ.ರಾಜ್ಯದ ಒನ್ಜಿಎಫ್,ಎಚ್.ಎಂ.ಟಿ,ಸೇರಿ ಯಾವ್ಯಾವ ಉದ್ಯಮಗಳಿಗೆ ಹಣ ಹೂಡಿಕೆ ಮಾಡಿದ್ದರೊ ಅವೆಲ್ಲವೂ ಬಂದ್ ಆಗಿವೆ ಒಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದರು.
ದೇಶದಲ್ಲಿ ರೈತರ ಹೆಸರೇಳಿಕೊಂಡು ಯಾರಿಗೆ ಲಾಭ,ನಷ್ಟವಾಗುವ ಭಯವಿದೆಯೋ ಅವರು ಮಾತ್ರ ಹೋರಾಟ ಮಾಡುತ್ತಿದ್ದಾರೆ.ಕಳೆದ ಹತ್ತು ತಿಂಗಳಿಂದ ದೆಹಲಿಯ ಪ್ರಮುಖರಸ್ತೆಗಳಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆಂದು ಅದು ಯಾವ ಪ್ರಯೋಜನವನ್ನು ತರುವುದಿಲ್ಲವೆಂಬಂತೆ ಪರೋಕ್ಷವಾಗಿ ತಿಳಿಸಿದರು.
ಎಲ್ಲಾ ಜಾತಿ,ವರ್ಗ,ಪ್ರದೇಶಗಳನ್ನು ಗುರುತಿಸಿ ರಾಜ್ಯ ಮಂತ್ರಿಮಂಡಲ ರಚಿಸಲಾಗಿದೆ.ಭಾರತೀಯ ಜನತಾ ಪಾರ್ಟಿಯಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ.ಅದಕ್ಕೆ ನಾನು ಭಾರತ ಸರ್ಕಾರದಲ್ಲಿ ಮಂತ್ರಿ ಆಗಿರುವುದೇ ಸಾಕ್ಷಿ ಎಂದರು.
ಶಾಸಕ ನಾಗೇಂದ್ರ ,ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ,ತಾಲ್ಲೂಕು ಅಧ್ಯಕ್ಷ ಲೋಕೇಶ್ ನಾಯಕ್,ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ದಾಸಪ್ಪ ,ಹಿರಿಯ ಮುಖಂಡ ಕರೋಹಟ್ಟಿ ಮಹದೇವಯ್ಯ, ಪುರಸಭೆ ಸದಸ್ಯರುಗಳಾದ ಎಸ್.ಕೆ.ಕಿರಣ್,ಅರ್ಜುನ್ ರಮೇಶ್,ಶಿವಕುಮಾರ್, ಲಕ್ಮೀ,ಸುಜಾತ,
ದಯಾನಂದ ಪಟೇಲ್ ಸೇರಿದಂತೆ ಮತ್ತಿತರರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಥೂ.. ನಿಮ್ ಯೋಗ್ಯತೆಗಿಷ್ಟು ಬೆಂಕಿ ಹಾಕ. ಸಚಿವ ಸುದಾಕರ್ ಗೆ ಮಹಿಳಾ ಛೀಮಾರಿ.