ರಾಮದುರ್ಗ:ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಾತ್ರ ಜನರು ನೆಮ್ಮದಿ ಬದುಕು ಸಾಧ್ಯ. ಮಾಜಿ ಶಾಸಕ ಅಶೋಕ ಪಟ್ಟಣ.

ರಾಮದುರ್ಗಃ ಮಹಾತ್ಮಾ ಗಾಂಧಿವರ ಕನಸು ಗ್ರಾಮಗಳ ಅಭಿವೃದ್ಧಿ ಆಗಬೇಕು ಜನರಿಗೆ ಸ್ಥಳದಲ್ಲಿಯೇ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಅವರ ಪರಿಕಲ್ಪನೆ ನೆನಸಾಗಬೇಕಾದರೆ ಎಲ್ಲರೂ ಒಂದಾಗಿ ಗ್ರಾಮಗಳ ಅಭಿವೃದ್ಧಿಗೆ ಶ್ರಮೀಸಬೇಕು ಅಂದರೆ ಮಾತ್ರ ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ಯಕ್ಕೆ ಕಾರ್ಯಕ್ರಮಕ್ಕೆ ಒಂದು ಅರ್ಥ ಬರುತ್ತದೆ ಎಂದು ಮಾಜಿ ಶಾಸಕ ಅಶೋಕ ಪಟ್ಟಣ ಹೇಳಿದರು.
ಸ್ಥಳಿಯ ಅಶೋಕ ಪಟ್ಟಣ ಅವರ ತೋಟದ ಮನೆಯಲ್ಲಿ ಮಹಾತ್ಮಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮದ ಪೂರ್ವಭಾವಿ ಸಾಮಾಜೀಕ ಜಾಲತಾಣ ಹಾಗೂ ಮುಖಂಡರ ಮತ್ತು ಭೂತÀ ಏಜಂಟರು, ಪದಾಧಿಕಾರಿಗಳ ಸಭೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ಪರಿಷ್ಕರಣೆ ಮತ್ತು  ಶಿಕ್ಷಕರ ಹಾಗೂ ಪದವೀಧರರ ಚುನಾವಣೆಯ ಕುರಿತು ಪೂರ್ವಭಾವಿ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿಯವರು ಪ್ರತಿ ಗ್ರಾಮಗಳ ಜನರು ಸ್ವಾವಲಂಬಿಗಳಾಗಬೇಕು, ಭಾರತದ ಭವಿಷ್ಯ ಹಳ್ಳಿಗಳಲ್ಲಿ ಅಡಗಿದೆ. ಸಾಮಾಜೀಕ, ರಾಜಕೀಯ, ಅರ್ಥಿಕ, ಪ್ರಜಾಪ್ರಭುತ್ವದ ಅಭಿವೃದ್ದಿಯನ್ನು ತಳ ಮಟ್ಟದಿಂದ ಬಲಿಷ್ಠವಾಗಿ ಗ್ರಾಮ ಪಂಚಾಯತ ರಾಜ್ ವ್ಯವಸ್ಥೆಯಲ್ಲಿ ಜನರಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸುವ ಕಲ್ಪನೆ ಒಂದು ಕಡೆಯಾದರೆ ಎಲ್ಲರೂ ಸಮಾನತೆಯಿಂದ ಇರಬೇಕು ಎಂದು ಮಹದಾಸೆಯಾಗಿತ್ತು ಆದ್ದರಿಂದ ಎಲ್ಲರೂ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗಬೇಕಿದೆ. ಹಿಂದನಿಂದಲೂ ದೇಶದ ಅಭಿವೃದ್ದಿಗೆ ಯಾರು ಶ್ರಮಿಸಿದ್ದಾರೆ ಅವರಿಗೆ ಬೆಂಬಲ ನೀಡಬೇಕು ಎಂದು ಹೇಳಿದರು.

ಪಂಚಾಯತಿ ರಾಜ್ಯ ಸಂಘಟನೆಯ ರಾಜ್ಯ ಸಂಚಾಲಕ ಉಮೇಶ ಬಾಳಿ ಮಾತನಾಡಿ ಅಕ್ಟೋಬರ್ ೨ ರಿಂದ ಮಹಾತ್ಮಾ ಗಾಂಧಿಜೀಯವರ ಜನ್ಮದಿನದ ಅಂಗವಾಗಿ ತಿಂಗಳ ಪೂರ್ತಿ ೩೭ ಗ್ರಾಮ ಪಂಚಾಯತಿ ಮಟ್ಟದಲ್ಲಿ ಬರುವ ಎಲ್ಲ ಗ್ರಾಮಗಳ ಜನರನ್ನು ಸೇರಿಸಿ “ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ಯ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು.

 ಮುಂಬರು ಚುನಾವಣೆಯಲ್ಲಿ ಎಲ್ಲರೂ ಪಕ್ಷದ ಅಭ್ಯರ್ಥಿಗಳಿಗೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ನಿಂಗಪ್ಪ ದಂಡಿನದುರ್ಗಿ ಅವರು ಮಾತನಾಡಿ ಪ್ರತಿ ಗ್ರಾಮೀಣ ಭಾಗದಲ್ಲಿ ಪಕ್ಷವನ್ನು ಹೆಚ್ಚು ಸಂಘಟನೆಗೆ ಗಮನ ಹರಿಸಬೇಕು. ಬಿಜೆಪಿ ಪಕ್ಷ ಸುಳ್ಳುಗಳನ್ನು ಹೇಳುತ್ತಾ ಜನರಿಗೆ ಮಂಕು ಎರಚುತ್ತಿದ್ದಾರೆ ಜನರು ನೆಮ್ಮದಿಯಿಂದ ಬದುಕಬೇಕಾದರೆ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕು  ಅಂದರೆ ಮಾತ್ರ ಸಾಧ್ಯ ಎಂದು ಹೇಳಿದರು.

ಬ್ಲಾಕ್ ಅಧ್ಯಕ್ಷರಾದ ಜಿ.ಬಿ.ರಂಗನಗೌಡ, ಸೋಮಶೇಖರ ಸಿದ್ದಿಲಿಂಗಪ್ಪನವರ ಜಿಲ್ಲಾ ಮುಖಂಡ ಇಮ್ರಾನ್ ತಫಕೀರ, ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಜಯಕುಮಾರ ರಾಠೋಡ, ಕೃಷ್ಣಗೌಡ ಪಾಟೀಲ, ಕಲ್ಲಣ್ಣ ವಜ್ರಮಟ್ಟಿ ಜಯಪ್ರಕಾಶ  ಶಿಂಧೆ  ಬಿ.ಎಸ್.ನಾಯ್ಕ ಸೋಮು ಲಮಾಣಿ ನವೀನ ಗದಗ ಜಿಲ್ಲಾ ಪಂಚಾಯತ ಸದಸ್ಯರಾದ ಜಹೂರ ಹಾಜಿ. ಕೃಷ್ಣಾ ಲಮಾಣಿ, ರಾಜಶೇಖರ ತೋಳಗಟ್ಟಿ, ರಮೇಶ ಅಣ್ಣಿಗೇರಿ,ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸುರೇಖಾ ಎಂ ಸೋಮಗೊಂಡ, ಗಾಯತ್ರಿದೇವಿ ದೇವಾಂಗಮಠ ಮಾಜಿ ತಾಪಂ ಅಧ್ಯಕ್ಷೆ ಮಂಜುಳಾ ದೇವರಡ್ಡಿ, ಪುರಸಭೆಯ ಸದಸ್ಯರಾದ ರಾಜೇಶ್ವರಿ ಮೆಟಗುಡ್ಡ, ಪಾರ್ವತಿ ನಾಯ್ಕ ಕಾಂಗ್ರೆಸ್ ಮುಖಂಡರಾದ ಶಫಿ ಬೆಣ್ಣಿ, ಪುರಸಭೆ ಮಾಜಿ ಅಧ್ಯಕ್ಷ ಬಾಷಾ ಮೊರಬ,ಸೇರಿದಂತೆ ಮುಂತಾದವರು ಉಪಸ್ಥಿರಿದ್ದರು. ಕಾಂಗ್ರೆಸ್ ಮುಖಂಡ ಸಿದ್ದಲಿಂಗಪ್ಪ ಶಿಂಗಾರಗೊಪ್ಪ ಕಾರ್ಯಕ್ರಮ ನಿರೂಪಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಬಿ.ರಂಗನಗೌಡರ ಸ್ವಾಗತಿಸಿ ವಂದಿಸಿದರು.
ವರದಿ :ಯಾದವಾಡ ರಾಮದುರ್ಗ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಥೂ.. ನಿಮ್ ಯೋಗ್ಯತೆಗಿಷ್ಟು ಬೆಂಕಿ ಹಾಕ. ಸಚಿವ ಸುದಾಕರ್ ಗೆ ಮಹಿಳಾ ಛೀಮಾರಿ.