ರಾಮನಾಥಪುರ ತಂಬಾಕು ಮಂಡಳಿಯಲ್ಲಿ ವಿದೇಶಿ ಕಂಪನಿಗಳು ನೇರವಾಗಿ ರೈತರಿಂದ ತಂಬಾಕು ಖರೀದಿ ಮಾಡಬೇಕು. ಹೆಚ್ ಯೋಗಾರಮೇಶ್ ಒತ್ತಾಯ.

ಅರಕಲಗೂಡು: ವಿದೇಶಿ ಕಂಪನಿಗಳು ರಾಮನಾಥಪುರ ತಂಬಾಕು ಮಂಡಳಿಯಲ್ಲಿ ನೇರವಾಗಿ ಪಾಲ್ಗೊಂಡು ರೈತರಿಂದ ಹೊಗೆಸೊಪ್ಪು ಖರೀದಿಸಬೇಕೆಂದು ಹೆಚ್ ಯೋಗಾರಮೇಶ್ ಒತ್ತಾಯ.
ರಾಮನಾಥಪುರ ತಂಬಾಕು ಮಂಡಳಿಗೆ ಪೊಟ್ಯಾಟೋ ಕ್ಲಬ್ ಅಧ್ಯಕ್ಷರಾದ ಯೋಗಾರಮೇಶ್ ಬೇಟಿ ನೀಡಿ ರೈತರ ಸಮಸ್ಯೆಯನ್ನು ಆಲಿಸಿ, ನಂತರ ಮಾತನಾಡಿ  ರೈತರು ಬೆಳೆದ ತಂಬಾಕಿಗೆ ಸರಿಯಾದ ಬೆಲೆ ನೀಡದೆ ವಂಚಿಸಲಾಗುತ್ತಿದೆ‌. ITC ಕಂಪನಿಯೊಂದಿಗೆ ತಂಬಾಕು ಮಂಡಳಿ ಮತ್ತು ಸರ್ಕಾರ ಒಳ‌ಒಪ್ಪಂದ ಮಾಡಿಕೊಂಡು ಇರುವ ಆರೋಪಗಳಿಗೆ. ಇಲ್ಲಿ ಬಂದಿರುವ ಎಲ್ಲಾ ಕಂಪನಿಯು ITC ಕಂಪನಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿವೆ. ITC ಕಂಪನಿ  ತಂಬಾಕು ಮಂಡಳಿಯನ್ನು ಹಿಡಿತದಲ್ಲಿ ಇಟ್ಟುಕೊಂಡಿದೆ. ಇದರಿಂದ ರೈತರಿಗ ಅನ್ಯಾಯ ಮಾಡಲಾಗುತ್ತಿದೆ.
ವಿದೇಶಿ ಕಂಪನಿಗಳು ತಂಬಾಕು ಮಂಡಳಿಯಲ್ಲಿ ನೇರವಾಗಿ ಪಾಲ್ಗೊಂಡು ರೈತರಿಂದ ಹೊಗೆಸೊಪ್ಪು ಖರೀದಿಸಬೇಕು. ಹತ್ತು ಗ್ರಾಂ ಇರುವ ಒಂದು ಸಿಗರೇಟ್ ಪ್ಯಾಕ್ ಬೆಲೆ ₹165 ಇದೆ.ಆದರೆ ಒಂದು ಕೆ.ಜಿ. ಹೊಗೆಸೊಪ್ಪು ಬೆಲೆ 100 ರಿಂದ 165 ರೂ ಇದೆ.  ಒಂದು Kg ಹೊಗೆಸೊಪ್ಪಿನಿಂದ ಸಾವಿರಾರು ಸಿಗರೇಟ್ ಮಾಡಿ ಮಾರಾಟ ಮಾಡಿ ಮಾರಾಟಗಾರರು ಆದಾಯ ಮಾಡಿಕೊಳ್ಳುತ್ತಿದ್ದಾರೆ. ಇದು ಯಾವ ರೀತಿಯ ನ್ಯಾಯ ಎಂದರು.

ಆದರೆ ರೈತರು ಬೆಳೆದ  ಹೊಗೆಸೊಪ್ಪಿಗೆ ಮಾತ್ರ ಉತ್ತಮ‌ ಬೆಲೆ ನೀಡದೆ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು ಎನ್ನುತ್ತಾರೆ. ಆದರೆ ತಂಬಾಕು ಮಂಡಳಿ ರಚನೆ ಮಾಡಿಕೊಂಡು ರೈತರನ್ನು ಬಂದಿ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಇದನ್ನು ಸರ್ಕಾರ ತಕ್ಷಣವೇ ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ತಂಬಾಕು ಮಂಡಳಿ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ರೈತರಿಗೆ ಅನ್ಯಾಯ ಆಗದ ರೀತಿಯಲ್ಲಿ ತಂಬಾಕಿಗೆ ಬೆಲೆ ನೀಡಬೇಕು. ಕಂಪನಿಯೊಂದಿಗೆ ಯಾವುದೇ ರೀತಿಯ ಒಳ ಒಪ್ಪಂದದ ಮಾಡಿಕೊಳ್ಳಬಾರದು. ಕೆಲವು ದಳ್ಳಾಳಿಗಳು ಕಂಪನಿಗಳೊಂದಿಗೆ ಭಾಗಿಯಾಗಿ ರೈತರಿಂದ ಕಡಿಮೆ ಬೆಲೆಗೆ ತಂಬಾಕು ಖರೀದ  ಮಾಡಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ದಳ್ಳಾಳಿಗಳ ಹಾವಳಿ ತಡೆಯಬೇಕು.ತಂಬಾಕು  ಮಂಡಳಿ ರೈತರ ಪರವಾಗಿ ಕೆಲಸ ಮಾಡಬೇಕು ಒಂದು Kg ತಂಬಾಕಿಗೆ ಕನಿಷ್ಟ ‌250 ರಿಂದ 300 ರೂ ನೀಡಬೇಕು. ಇಲ್ಲದಿದ್ದರೆ ಮುಂದಿನ‌ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಅರಕಲಗೂಡು ತಾಲ್ಲೂಕು ಕಛೇರಿ ಆವರಣದಲ್ಲಿ ಕೋವಿಡ್-19 ಸೊಂಕಿನಿಂದ ಮೃತಪಟ್ಟ 44 ಕುಟುಂಬದ ವಾರಸುದಾರರಿಗೆ ತಲಾ ಒಂದು ಲಕ್ಷದ ಚೆಕ್ ಅನ್ನು ಶಾಸಕರಾದ ಎ.ಟಿ.ರಾಮಸ್ವಾಮಿ ಅವರು ನೀಡಿದರು.