ರಾಮದುರ್ಗ:ಸರ್ಕಾರದ ನಿಯಮ ಪಾಲನೆ ಮಾಡದ ಬನ್ನೂರು ಗ್ರಾಮ ಪಂಚಾಯತಿ PDO.
ಹೌದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬನ್ನೂರು ಗ್ರಾಮ ಪಂಚಾಯಿತಿಯಲ್ಲಿ ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ಮಂತ್ರಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಮುಂಜಾನೆ 8 ಗಂಟೆ ಒಳಗಡೆ ಮಾಡುವ ಪೂಜೆಯನ್ನು 11ಗಂಟೆ ಆದರೂ ಪೂಜೆಯನ್ನು ಮಾಡಿರಲಿಲ್ಲ.11 ಗಂಟೆಗೆ ಬನ್ನೂರು ಗ್ರಾಮ ಪಂಚಾಯಿತಿಗೆ ಪಾತ್ರಕರ್ತರು ಹೋಗಿ ಎಚ್ಚರಿಸಿದಾಗ ಮತ್ತು ಪತ್ರಕರ್ತರೇ ಎಲ್ಲರನ್ನೂ ಕೂಡಿಸಿ ಗಾಂಧೀಜಿ ಅವರ ಫೋಟೋ ಪೂಜೆ ಮಾಡಲಾಯಿತು. ಹಾಗಾದರೆ ಪತ್ರಕರ್ತರು ಹೋಗಿ ಚರ್ಚೆ ಮಾಡದೆ ಇದ್ದರೆ ಬನ್ನೂರು ಗ್ರಾಮ ಪಂಚಾಯತಿಯಲ್ಲಿ ಗಾಂಧೀ ಜಯಂತಿಯ ಆಚರಣೆ ಆಗ್ತಾ ಇರಲಿಲ್ಲ. ಹೀಗಿರುವಾಗ ಈ ಗ್ರಾಮಪಂಚಾಯತಿಯ PDO ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಈ ಗ್ರಾಮ ಪಂಚಾಯಿತಿಗೆ ಇದ್ದೂ ಇಲ್ಲದಂತಾಗಿದೆ. ಹಾಗೂ ಗ್ರಾಮ ಪಂಚಾಯತಿ ಸಾರ್ವಜನಿಕರ ಯಾವುದೇ ಒಂದು ಕೊಂದು ಕೊರತೆಗಳನ್ನು ಕೇಳದೆ ಇರುವ PDO ಅಧಿಕಾರಿ. ಮತ್ತು ಪಂಚಾಯತಿಗೆ ಸಂಬಂಧಪಟ್ಟ ಕಾರ್ಯಗಳ ಬಗ್ಗೆ ಮತ್ತು ಕೆಲಸಗಳ ಬಗ್ಗೆ ಆರಿಸಿಬಂದಂತ ಸರ್ವ ಸದಸ್ಯರು PDO ಅಧಿಕಾರಿಗೆ ಚರ್ಚಿಸಿದಾಗ ಸರಿಯಾಗಿ ಮಾಹಿತಿ ಕೊಟ್ಟಿರುವುದಿಲ್ಲ. ವಾರದಲ್ಲಿ ಒಂದು ಸಾರಿ ಮಾತ್ರ ಪಂಚಾಯತಿಗೆ ಹಾಜರಾಗುತ್ತಾ ಸರ್ವ ಸದಸ್ಯರಿಗೆ ಕೆಲಸಗಳನ್ನು ಕೇಳಲು ತೊಂದರೆ ಕೊಡುವ PDO ಅಧಿಕಾರಿ. ಮತ್ತು ಸರ್ಕಾರದಿಂದ ಬರುವಂತಹ ಎಲ್ಲ ಕೆಲಸಗಳ ಬಗ್ಗೆ ಮಾಹಿತಿ ಕೊಡದೇ ಇರದಂತಹ ಅಧಿಕಾರಿಗಳು. ಇಂತಹ ಅಧಿಕಾರಿ ಪಂಚಾಯತಿಗೆ ಬೇಕೇ? ಇದರ ಬಗ್ಗೆ ಪಂಚಾಯತಿಯ ಉಪಾಧ್ಯಕ್ಷರು ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅವರಿಗೆ ಇದರ ಬಗ್ಗೆ ಮಾಹಿತಿ ನೀಡಿರುತ್ತಾರೆ. ಈ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರು ಮಹಿಳಾ ಆಗಿರುತ್ತಾರೆ ಮತ್ತು ಸದಸ್ಯರು ಕೂಡ ಮಹಿಳೆಯರು ಇದ್ದಾರೆ ಆದರೆ ಇಲ್ಲಿ ಶೌಚಾಲಯ ಇದ್ದರೂ ಇಲ್ಲದಂತಿದೆ. ಅದಕ್ಕೆ ಬಾಕಲಗಳು ಕೂಡ ಇಲ್ಲ. ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ಇದ್ದರೂ ಕೆಟ್ಟುಹೋದ ಸ್ಥಿತಿಯಲ್ಲಿದೆ. ಹೆಣ್ಣುಮಕ್ಕಳಿಗೆ ಎಷ್ಟು ತೊಂದರೆಯಾಗುತ್ತದೆ ಇದು PDO ಅಧಿಕಾರಿಗೆ ಗಮನಕ್ಕೆ ಬಂದಿಲ್ಲವೇ. ಹಾಗೂ ಈ ಪಂಚಾಯತಿಯ ಸುತ್ತಮುತ್ತಲು ಕಸ ಕಡ್ಡಿಗಳು ಬಿದ್ದಿದೆ ಮತ್ತು ಕಸದ ಗಿಡಗಳು ಹಾಗೇ ಇವೆ. ತಮ್ಮ ಗ್ರಾಮ ಪಂಚಾಯತಿಯೇ ಸ್ವಚ್ಛವಾಗಿಲ್ಲ ಹಾಗಾದರೆ ಊರು ಹೇಗೆ ಸ್ವಚ್ಛ ಇಡುತ್ತಾರೆ. ಇದು ಸಾರ್ವಜನಿಕರಿಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ಅದಕ್ಕಾಗಿ ಈ ಗ್ರಾಮಪಂಚಾಯಿತಿಗೆ ಉತ್ತಮ PDO ಅಧಿಕಾರಿಯ ಅವಶ್ಯಕತೆ ಇದೆ. ಆದಷ್ಟು ಬೇಗನೆ ಮೇಲಾಧಿಕಾರಿಗಳು ಬನ್ನೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕ್ರಮ ತೆಗೆದುಕೊಳ್ಳುತ್ತಾರೋ ಅಥವಾ ಇಲ್ಲವೆಂದು ಕಾದುನೋಡಬೇಕಾಗಿದೆ.
ವರದಿ..✍️🙏ಎಂ ಕೆ ಯಾದವಾಡ ರಾಮದುರ್ಗ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ