ಹಿರಿಯಣ್ಣಕುಮಾರ್ ಮತ್ತು ಸಹ ಶಿಕ್ಷಕಿ ವೀಣಾ ಇವರಿಬ್ಬರನ್ನು ಕಡ್ಡಾಯವಾಗಿ ಶಣವಿನಕುಪ್ಪೆ ಶಾಲೆಯಲ್ಲಿಯೇ ಮುಂದುವರಿಸಬೇಕು.BEO ಗೆ ಪೋಷಕರ ಮನವಿ

ಹಿರಿಯಣ್ಣಕುಮಾರ್ ಮತ್ತು ಸಹ ಶಿಕ್ಷಕಿ ವೀಣಾ ಇವರಿಬ್ಬರನ್ನು ಕಡ್ಡಾಯವಾಗಿ ಶಣವಿನಕುಪ್ಪೆ ಶಾಲೆಯಲ್ಲಿಯೇ ಮುಂದುವರಿಸಬೇಕು.ಇಲ್ಲವಾದರೇ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ.ಇದಕ್ಕೆ ಅವಕಾಶ ಮಾಡಿ ಕೊಡಬಾರದು. BEO ಗೆ ಪೋಷಕರ ಮನವಿ.
ಅರಕಲಗೂಡು : ತಾಲೂಕಿನ ಶಣವಿನಕುಪ್ಪೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿದ್ದು,ಕೂಡಲೇ ಅಗತ್ಯಶಿಕ್ಷಕರನ್ನು ನೇಮಿಸಬೇಕೆಂದು ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ.
ಕರ್ತವ್ಯಲೋಪ ಹಿನ್ನೆಲೆ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಹಿರಿಯಣ್ಣಕುಮಾರ್ ಅವರ ವರ್ಗಾವಣೆಗೆ ಗ್ರಾಪಂ ಸದಸ್ಯರು ಕ್ಷೇತ್ರಶಿಕ್ಷಣಾಧಿಕಾರಿಗೆ ದೂರು ನೀಡಿದ್ದರು.ಇದರ ಅನ್ವಯ ಬಿಇಒ ಶಾಲೆಗೆ ಭೇಟಿನೀಡಿ ವಿದ್ಯಾರ್ಥಿಗಳು.ಪೋಷಕರುಗಳ ಸಭೆ ನಡೆಸಿ ವಾಸ್ತವತೆಯನ್ನು ತಿಳಿದುಕೊಂಡಿದ್ದಾರೆ.ಇದಾದ ಬಳಿಕ ಹಿರಿಯಣ್ಣಕುಮಾರ್ ರಜೆ ಮೇಲೆ ಹೋಗಿದ್ದಾರೆ.ಇರುವ ಇಬ್ಬರು ಶಿಕ್ಷಕರಿಂದ ೯೦ಮಕ್ಕಳಿಗೆ ಪಾಠಪ್ರವಚನ ಸರಿಯಾಗಿ ಆಗುತ್ತಿಲ್ಲ.ಮಕ್ಕಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ಪ್ರಭಾರಿ ಮುಖ್ಯಶಿಕ್ಷಕರಾದ ಹಿರಿಯಣ್ಣಕುಮಾರ್ ಮತ್ತು ಸಹ ಶಿಕ್ಷಕಿ ವೀಣಾ ಅವರುಗಳು ನೀಡುತಿದ್ದಾರೆ.ಇವರಿಬ್ಬರನ್ನು ಕಡ್ಡಾಯವಾಗಿ ಶಣವಿನಕುಪ್ಪೆ ಶಾಲೆಯಲ್ಲಿಯೇ ಮುಂದುವರಿಸಬೇಕು.ಇಲ್ಲವಾದರೇ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ.ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಪೋಷಕರು ಗುರುವಾರ ಬಿಇಒಗೆ ನೀಡಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪ್ರಭಾರ ಮುಖ್ಯಶಿಕ್ಷಕರ ಕರ್ತವ್ಯಲೋಪ ದೂರು ಹಿನ್ನೆಲೆ ಪರಿಶೀಲನೆ ಮಾಡಿ ಮೇಲಾಧಿಕಾರಿಗೆ ವರದಿ ಮಾಡಲಾಗಿದೆ.ಅದೇ ಶಿಕ್ಷಕರು ಬೇಕು ಎಂದರೇ ಶಾಲಾಭಿವೃದ್ಧಿ ಸಮಿತಿ ಸಭೆಯಲ್ಲಿ ತೀರ್ಮಾನಿಸಿ ಲಿಖಿತವಾಗಿ ಮಾಹಿತಿ ನೀಡಿದರೇ ಅದನ್ನು ಸಹ ಪರಿಗಣಿಸಲಾಗುವುದು ಎಂದು ಬಿಇಒ ಮನಮೋಹನ್ ಪೋಷಕರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರಾದ ಶಿವಕುಮಾರ್,ರವಿಕುಮಾರ್,ಚಂದ್ರಶೇಖರ್,ಸಾಕಮ್ಮ,ಗೀತಾ,ಪಾರ್ವತಿ ಇತರರು ಹಾಜರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಥೂ.. ನಿಮ್ ಯೋಗ್ಯತೆಗಿಷ್ಟು ಬೆಂಕಿ ಹಾಕ. ಸಚಿವ ಸುದಾಕರ್ ಗೆ ಮಹಿಳಾ ಛೀಮಾರಿ.