ಹಾಸನ: ಶುಂಠಿ ಬೆಲೆ ಕುಸಿತ ಹಿನ್ನೆಲೆ ಚೀಲಕ್ಕೆ ಕನಿಷ್ಠ 1500/- ಬೆಂಬಲ ಬೆಲೆ ನಿಗದಿ ಮಾಡುವಂತೆ ಹೆಚ್.ಯೋಗಾರಮೇಶ್ ಸರ್ಕಾರಕ್ಕೆ ಒತ್ತಾಯ.
ಹಾಸನ: ಶುಂಠಿ ಬೆಲೆ ಕುಸಿತ ಹಿನ್ನೆಲೆ ಚೀಲಕ್ಕೆ ಕನಿಷ್ಠ 1500/- ಬೆಂಬಲ ಬೆಲೆ ನಿಗದಿ ಮಾಡುವಂತೆ ಹೆಚ್.ಯೋಗಾರಮೇಶ್ ಸರ್ಕಾರಕ್ಕೆ ಒತ್ತಾಯ. ರೈತರು ತಮ್ಮ ಒಡವೆಗಳನ್ನು ಅಡ ಇಟ್ಟು, ಬಡ್ಡಿ ಸಾಲ ಮಾಡಿ ಶುಂಠಿ ವ್ಯವಸಾಯಕ್ಕೆ ಹಣ ತಂದು ಹಾಕಿದ್ದಾರೆ. ಕಳಪೆ ಮಟ್ಟದ ಬೀಜದಿಂದ ಶುಂಠಿ ಹಾಕಿದ ಎರಡು ಮೂರು ತಿಂಗಳಲ್ಲಿ ಕಾಯಿಲೆಗೆ ತುತ್ತಾಗಿ ಈಗಾಗಲೇ %50 ಬೆಳೆ ನಷ್ಟ ಆಗಿದೆ. ಇನ್ನೊಂದೆಡೆ ಬೆಲೆ ಕುಸಿದು ಶುಂಠಿ ಬೆಲೆ 60 ಕೆ.ಜಿ. ಚೀಲಕ್ಕೆ 300/- ರಿಂದ 350/- 400/- ರುಪಾಯಿಗೆ ಇಳಿದಿದೆ. ಅದನ್ನು ಕೇಳುವರು ಇಲ್ಲದಾಗಿದ್ದಾರೆ. ರೈತರು ತಮ್ಮ ಜಮೀನಿನಲ್ಲೇ ಶುಂಠಿ ಬೆಳೆ ನಾಶ ಮಾಡುವ ಮನಸ್ಥಿತಿಗೆ ಬಂದಿದ್ದಾರೆ. ಸರ್ಕಾರ ತಕ್ಷಣವೇ ಶುಂಠಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು. ಇರುವ ಶುಂಠಿಗೂ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಮತ್ತು ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಬೀಜವನ್ನು ಸರ್ಕಾರದ ವತಿಯಿಂದಲೇ ನೀಡಬೇಕು, ಮಾರುಕಟ್ಟೆ ವ್ಯವಸ್ಥೆ ಹಾಗೂ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಬೇಕು ಎಂದು ಅರಕಲಗೂಡು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಹೆಚ್.ಯೋಗಾರಮೇಶ್ ಸರ್ಕಾರಕ್ಕೆ TV9 ಮತ್ತು ಕಸ್ತೂರಿ ನ್ಯೂಸ್ ಮಾಧ್ಯಮದ ಮೂಕಲ ಒತ್ತಾಯಿಸಿದ್ದಾರೆ.