ಟಿ.ನರಸೀಪುರ:ವಿಪಕ್ಷ ನಾಯಕರಾದ ಸಿದ್ದರಾಮಯ್ಯ ದಲಿತರಿಗೆ ಹೆಚ್ಚಿನ ಸ್ಥಾನಮಾನ ನೀಡಿರುವುದು ರಾಜ್ಯ ಹಾಗೂ ರಾಷ್ಟ್ರದ ಜನತೆಗೆ ತಿಳಿದಿದೆ.
ಟಿ.ನರಸೀಪುರ:ವಿಪಕ್ಷ ನಾಯಕರಾದ ಸಿದ್ದರಾಮಯ್ಯ ರವರು ದಲಿತರಿಗೆ ಹೆಚ್ಚಿನ ಸ್ಥಾನಮಾನ ನೀಡಿರುವುದು ರಾಜ್ಯ ಹಾಗೂ ರಾಷ್ಟ್ರದ ಜನತೆಗೆ ತಿಳಿದಿದೆ. ದಲಿತರ ಪರವಾಗಿಯೇ ಕಳೆದ ೭೫ ವರ್ಷಗಳಿಂದ ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದು,ನಮ್ಮ ನಾಯಕರು, ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ರವರು ದಲಿತರಿಗೆ ಹೆಚ್ಚಿನ ಸ್ಥಾನಮಾನ ನೀಡಿರುವುದು ರಾಜ್ಯ ಹಾಗೂ ರಾಷ್ಟ್ರದ ಜನತೆಗೆ ತಿಳಿದಿದೆ.ಪಕ್ಷ ಹಾಗೂ ಸಿದ್ದರಾಮಯ್ಯ ರವರ ಬಗ್ಗೆ ಮಾತನಾಡಿರುವ ಛಲವಾದಿ ನಾರಾಯಣಸ್ವಾಮಿ ರವರ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ್ ತಿರುಗೇಟು ನೀಡಿದರು. ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಭಾರತೀಯ ಜನತಾ ಪಕ್ಷ ಹಾಗೂ ಅದರ ನಾಯಕರು ದಲಿತರನ್ನು ಹೇಗೆ ನೆಡೆಸಿಕೊಳ್ಳುತ್ತಿದ್ದಾರೆಂದು ರಾಜ್ಯ ಹಾಗೂ ರಾಷ್ಟ್ರದ ಜನತೆ ನೋಡುತ್ತಿದ್ದಾರೆ. ದಲಿತ ಶಾಸಕರು,ಸಂಸದರನ್ನು ಬಿಜೆಪಿ ಹಾಗೂ ಅದರ ನಾಯಕರು ಹೇಗೆ ನೆಡೆಸಿಕೊಂಡಿದ್ದಾರೆ,ಅವರಿಗೆ ಏನೆಲ್ಲಾ ಸ್ಥಾನ ಮಾನ ನೀಡಿದ್ದಾರೆಂದು ದಲಿತರು ಸೇರಿದಂತೆ ಪ್ರಜ್ಞಾವಂತರು ಗಮನಿಸುತ್ತಿದ್ದಾರೆಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಭ್ರಷ್ಟಾಚಾರ ಆರೋಪವನ್ನು ಹೊತ್ತಿರುವವರು ಎಷ್ಟೋ ಮಂದಿ ನಿಮ್ಮ ಪಕ್ಷದಲ್ಲೇ ಇದ್ದಾರೆ.ಮತ್ತೆ ಕೆಲವು ಸಂಸ್ಥೆಗಳಲ್ಲಿ ಕ್ರಿಮಿನಲ್ ಆರೋಪ ಹೊತ್ತಿರುವವರು ಇದ್ದರೂ ಸಹ...