ಪಟ್ಟಣದಲ್ಲಿ ಮದ್ಯದ ಅಂಗಡಿ ತೆರೆಯದಂತೆ ಮಹಿಳೆಯರಿಂದ ಶಾಸಕ ಎ.ಟಿ. ರಾಮಸ್ವಾಮಿಗೆ ಮನವಿ.

ಅರಕಲಗೂಡು : ಪಟ್ಟಣದಲ್ಲಿ ಸರ್ಕಾರಿ ಮದ್ಯ ಅಂಗಡಿ ( MSIL)  ತೆರೆಯದಂತೆ  ಒತ್ತಯಿಸಿ ಗೃಹಿಣಿ ಯರು ತಾಲ್ಲೂಕು ಅಬಕಾರಿ ಇಲಾಖೆ ಹಾಗೂ ಶಾಸಕ ಎ ಟಿ ರಾಮಸ್ವಾಮಿಗೆ ಮನವಿ ಸಲ್ಲಿಸಿದರು
ಪಟ್ಟಣದ ಎರಡನೇ ವಾಡ್೯ನ  ಮಲ್ಲಿಪಟ್ಟಣ ರಸ್ತೆಯಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ಮಳಿಗೆಯಲ್ಲಿ ಸರ್ಕಾರದ MSIl ಮದ್ಯ ಅಂಗಡಿ ತೆರೆಯಲಾಗುತ್ತದೆ ಎಂಬ ಗಾಳಿ ಸುದ್ದಿಗೆ ಎಚ್ಚತ್ತ ವಾಡ್೯ ನ ಮಹಿಳೆಯರು ತಾಲ್ಲೂಕು ಅಬಕಾರಿ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಮತ್ತು ಸ್ಥಳೀಯ ಶಾಸಕ ಎ ಟಿ ರಾಮಸ್ವಾಮಿಯವರಿಗೆ ಮನವಿ ನೀಡುವ ಮುಖಾಂತರ ಮದ್ಯ ಅಂಗಡಿ ಪ್ರಾರಂಭಿಸಲು ಅವಕಾಶ ನೀಡಬಾರದು ಎಂದು ಕೇಳಿಕೊಡರು 
  ಮಲ್ಲಿಪಟ್ಟಣ ರಸ್ತೆಯಲ್ಲಿ ಈಗಾಗಲೇ ನಿವೇದಿತಾ ವಿದ್ಯಾ ಸಂಸ್ಥೆ ಹಾಗೂ ಕಂಚೀರಾಯ ಪ್ರೌಢಶಾಲೆ ಕಾರ್ಯ ನಡೆಸುತ್ತಿದ್ದು‌ ರಸ್ತೆಗೆ ಹೊಂದಿಕೊಂಡಂತೆ ಪುರಾತನ ಇತಿಹಾಸವುಳ್ಳ  ಕೋಟೆ ಕೊತ್ತಲು ಗಣಪತಿ ದೇವಸ್ಥಾನ ಅಮೃತೇಶ್ವರ ದೇವಸ್ಥಾನ ಹಾಗೂ ಲಕ್ಷ್ಮೀ ನರಸಿಂಹ ದೇವಾಲಯಗಳ ಜಾತ್ರೆ ಮತ್ತು ದಿನನಿತ್ಯ ಪೂಜೆಕೈಕಾರ್ಯ ಜರುಗುತ್ತಿರುವ ಸ್ಥಳಗಳಲ್ಲಿ  ಮದ್ಯ ಅಂಗಡಿ ತೆರೆಯುವುದು ಕಾನೂನು ಬಾಹಿರ ಎಂದು ‌ವಾರ್ಡ್ ನ  ಮಹಿಳೆಯರು  ಸಾರ್ವಜನಿಕವಾಗಿ ಪ್ರಶ್ನೆಸುತ್ತಿರುವುದು ಕಂಡು ಬಂತು  ವಾಡ್೯ನ ಪಟ್ಟಣ ಪಂಚಾಯತಿ  ಸದಸ್ಯೆ ಸುಮಿತ್ರಾ ಮಾತನಾಡಿ ರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚು ಕಡು ಬಡವರು   ವಾಸಿಸುತ್ತಿದ್ದು  ಇಂತಹ ಸ್ಥಳದಲ್ಲಿ MSIL  ಮದ್ಯ ಅಂಗಡಿ ಅಥವಾ ಅಕ್ರಮ ಚಟುವಟಿಕೆ ನಡೆಸುವ ಯಾವುದೇ ಮಳಿಗೆ ಅವಕಾಶವನ್ನು  ಸರ್ಕಾರ ಮತ್ತು ಅಧಿಕಾರಿಗಳು ನೀಡಬಾರದು ಎಂದರು 
ಮಹಿಳೆಯರ ಹೆಸರು ವೀಣಾ ಮಲೇಶ್ , ಗೀತ,  ಶಾರದಮ್ಮ ಸುಶೀಲಾ ,ಮಮತ, ನಲ್ಲೂರಮ್ಮ, ಸುನೀತ,ನೇತ್ರ ಮತ್ತಿತರರು ಹಾಜರಾಗಿದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಅರಕಲಗೂಡು ತಾಲ್ಲೂಕು ಕಛೇರಿ ಆವರಣದಲ್ಲಿ ಕೋವಿಡ್-19 ಸೊಂಕಿನಿಂದ ಮೃತಪಟ್ಟ 44 ಕುಟುಂಬದ ವಾರಸುದಾರರಿಗೆ ತಲಾ ಒಂದು ಲಕ್ಷದ ಚೆಕ್ ಅನ್ನು ಶಾಸಕರಾದ ಎ.ಟಿ.ರಾಮಸ್ವಾಮಿ ಅವರು ನೀಡಿದರು.