ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಅಂಬೇಡ್ಕರ್ ಧಾರವಾಹಿ ಪ್ರಚಾರ ಜಾಗೃತಿಗೆ ಅರಕಲಗೂಡಿನಲ್ಲಿ ಫ್ಲೆಕ್ಸ್ ಬ್ಯಾನರ್ ಅಳವಡಿಸಿದರು
ಅರಕಲಗೂಡು ::
ಮಹಾನಾಯಕ ಧಾರವಾಹಿಯನ್ನು ಪ್ರಸಾರ ಮಾಡುತ್ತಿರುವ ಜೀ ಕನ್ನಡ ವಾಹಿನಿಯ ಎಲ್ಲಾ ಸಿಬ್ಬಂಧಿಗೂ ಹಾಗೂ ಕಾರ್ಯಕ್ರಮ ಪ್ರಧಾನ ಸಂಪಾಧಕರಾದ ರಾಘವೇಂದ್ರ ಹುಣುಸೂರ್ ರವರಿಗೂ ನಾಡಿನ ಸಮಸ್ತ ನಾಗರೀಕರ ಪರವಾಗಿ ಕೃತಜ್ಞತೆ ಅರ್ಪಿಸಿದ ಅಂಬೇಡ್ಕರ್ ಆಟೋ ಮಾಲೀಕರು ಮತ್ತು ಚಾಲಕರ ಸಂಘದಿಂದ
ಬಾಬಾಸಾಹೇಬ್ ಅಂದರೇ...
ಕ್ರಾಂತಿ ಹೋರಾಟ ಬಾಬಾಸಾಹೇಬರು ತನ್ನ ತತ್ವ ಸಿದ್ಧಾಂತಗಳ ವಿರುದ್ಧ ಎಂದೂ ಎಲ್ಲಿಯೂ ಯಾರಿಗೂ
ರಾಜಿಯಾದವರಲ್ಲ ಅವರೂ ಏಕಾಂಗಿಯಾಗಿ
ಹೋರಾಟ ಮಾಡಿದರೂ ಕೂಡಾ ಎಂದಿಗೂ ಮಾರಾಟವಾಗಲಿಲ್ಲ ಆದ್ದರಿಂದ ವಿಶ್ವವೇ ತಿರುಗಿ ನೋಡುವಂತ ಪರಿವರ್ತನಾ ಕ್ರಾಂತಿ ಮಾಡಿದರೆಂದ .
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಅಂಬೇಡ್ಕರ್ ಧಾರವಾಹಿ ಪ್ರಚಾರ ಜಾಗೃತಿಗೆ ಫ್ಲೆಕ್ಸ್ ಬ್ಯಾನರ್ ಅಳವಡಿಸುವಿಕೆ ಸಂಧರ್ಭದಿ ಮಾತನಾಡಿದ ಅವರು ಯಾವುದೇ ಧರ್ಮ ಜಾತಿ ಮೀರಿದ ಪ್ರಜ್ಞಾವಂತರು ಅಂಬೇಡ್ಕರ್ ಕುರಿತು ವಾಸ್ತವ ನೈಜ ಸತ್ಯ ಮಾತನಾಡುತ್ತಾರೆ ಇದಕ್ಕೆ ಜೀ ಕನ್ನಡ ವಾಹಿನಿ ಸರಿಗಮಪ ಕಾರ್ಯಕ್ರಮದಲ್ಲಿ ಸ್ವರಸಾಮ್ರಾಟ್ ಹಂಸಲೇಖರವರು ಬಾಬಾ ಸಾಹೇಬರ ಬಗ್ಗೆ ಆಡಿದ ಮಾತುಗಳೇ ಸಾಕ್ಷಿ ಎಂದ ಅವರು ಇದುವರೆಗೂ ಕಾಲ್ಪನಿಕ ಕಟ್ಟು ಕಥೆ ರಂಜನೀಯ ಕಥೆಗಳ ಧಾರವಾಹಿ ನೀಡಿದ ವಾಹಿನಿಯು ಪ್ರಥಮಭಾರಿಗೆ ಕಿರುತೆರೆಯಲ್ಲೇ ಒಬ್ಬ ಸಾಧಕನ ನೈಜ ಬದುಕನ್ನು ಧಾರವಾಹಿಯಾಗಿ ಪ್ರಸಾರ ಮಾಡುತ್ತಿರುವ ಜೀ ವಾಹಿನಿಯ ಎಲ್ಲಾ ಸಿಬ್ಬಂಧಿಗೂ ಕಾರ್ಯಕ್ರಮ ಸಂಪಾದಕರಾದ ರಾಘವೇಂದ್ರ ಹುಣುಸೂರ್ ರವರಿಗೂ ನಾಡಿನ ನಾಗರೀಕರ ಪರವಾಗಿ ಕೃತಜ್ಞತೆ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ