ಅರಸೀಕಟ್ಟೆಯನ್ನು ಪ್ರವಾಸಿ ತಾಣವಾಗಿ ಮಾಡಲಾಗುವುದು

ಅರಕಲಗೂಡು:  ತಾಲ್ಲೂಕಿನ ಅರಸಿಕಟ್ಟೆ ಅಮ್ಮ ದೇವಾಲಯವನ್ನು ಪ್ರವಾಸಿಗರ ತಾಣವಾಗಿ ಅಭಿವೃದ್ಧಿ ಪಡಿಸಲು ಶಾಸಕ ಎ. ಟಿ. ರಾಮಸ್ವಾಮಿ ನಕ್ಷತ್ರ ವನ ಹಾಗೂ ನವಗ್ರಹ ವನ ನಿರ್ಮಾಣಕ್ಕೆ ಧಾರ್ಮಿಕ ಸಂಕೇತವಾದ ಅತ್ತಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು

ನಂತರ ಮಾತನಾಡಿದ ಅವರು ತಾಲ್ಲೂಕಿನ ಶಕ್ತಿ ದೇವತೆಯಲ್ಲಿ ಒಂದಾದ  ಅರಸಿಕಟ್ಟೆ ಅಮ್ಮ ದೇವಾಲಯವು ರಾಜ್ಯಾದ್ಯಂತ ಭಕ್ತಾದಿಗಳನ್ನು ಹೊಂದಿದ್ದು ದೇವಾಲಯಕ್ಕೆ ಪ್ರತಿ ದಿನ ಸಾವಿರಾರು ಜನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಪೂಜೆ ಸಲ್ಲಿಸಿ ಪ್ರಸಾದ ತಯಾರಿಸಿ ದೇವರಿಗೆ ನೈವೇದ್ಯ ನೀಡಿ ನಂತರ ತಮ್ಮ ಕುಟುಂಬ ನೆಂಟರುಗಳ ಜೊತೆ ಕುಡಿ ಊಟ ಸೇವಿಸುವ ರೂಢಿಯಲ್ಲಿದೆ ಅದರಿಂದ ದೇವಾಲಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚತವಾಗಿ ಹಾಗೂ ಸುಂದರವಾದ ತಾಣವಾಗಿ ನಿರ್ಮಾಣ ಮಾಡುವ ಸದ್ದುಉದೇಶದಿಂದ ದೇವಸ್ಥಾನ ಸುತ್ತಲಿನ ಪ್ರದೇಶದಲ್ಲಿ ವಿವಿಧ ಬಗ್ಗೆ ಹೂವಿನ ಗಿಡ ಹಾಗೂ ಬಗ್ಗೆಯ  ಹಣ್ಣಿನ ಗಿಡ ನೆಡಲಾಗಿದೆ ಜೊತೆಗೆ ಧಾರ್ಮಿಕ ಕ್ಷೇತ್ರದ ಸಂಕೇತವಾದ ನಕ್ಷತ್ರ ವನ ಹಾಗೂ ನವಗ್ರಹ ವನ  ನಿರ್ಮಾಣ ಮಾಡಲು ಅರಣ್ಯ ಇಲಾಖೆ ವತಿಯಿಂದ ಅಗತ್ಯ ವಿವಿಧ  9 ನಮೂನೆಯ ಗಿಡಗಳನ್ನು ಇಂದು ನೆಡಲಾಯಿತ್ತು ಮತ್ತು ಕುಡಿಯುವ ನೀರು ವ್ಯವಸ್ಥೆ ಊಟ ತಯಾರಿಸಲು ಕೊಠಡಿಗಳು ಮತ್ತು ಹೈಟೆಕ್ ಶೌಚಾಲಯ ನಿರ್ಮಿಸಲು ಚಾಲನೆ ಮಾಡಲಾಗಿದೆ ಎಂದು ತಿಳಿಸಿದರು  ಜಿಲ್ಲಾ ವಲಯ ಅರಣ್ಯಾಧಿಕಾರಿ ಶಿವರಾಮ್ ಬಾಬು ಮಾತನಾಡಿ ನಕ್ಷತ್ರ ವನ ಮತ್ತು ನವಗ್ರಹ ವನ ದ  ಗಿಡಗಳ ಸಂರಕ್ಷಣೆ ಸಲುವಾಗಿ  ಇಲಾಖೆ ವತಿಯಿಂದ ಅರಣ್ಯ ಕಾವಲುಗಾರ ನೇಮಕ ಮಾಡಲಾಗಿದ್ದು ದಿನನಿತ್ಯ ಗಿಡಗಳ ಪೋಷಣೆಯ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿಭಾಯಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು 
ಕಾರ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಲಕ್ಷ್ಮಿ ನಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವನಂಜೇಗೌಡ, ಕಾವೇರಿ ನೀರಾವರಿ  ನಿಯಮಿತ ನಿಗಮದ ಇಂಜಿನಿಯರ್ ತಿಮ್ಮಪ್ಪ,  ಜಿಲ್ಲಾ ಪಂಚಾಯತ್ ಇಂಜಿನಿಯರ್ ರಾಜಶೇಖರ,ಗುತ್ತಿಗೆದಾರ H C ವೆಂಕಟೇಶ ಮತ್ತಿತರರು ಹಾಜರಾಗಿದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಅರಕಲಗೂಡು ತಾಲ್ಲೂಕು ಕಛೇರಿ ಆವರಣದಲ್ಲಿ ಕೋವಿಡ್-19 ಸೊಂಕಿನಿಂದ ಮೃತಪಟ್ಟ 44 ಕುಟುಂಬದ ವಾರಸುದಾರರಿಗೆ ತಲಾ ಒಂದು ಲಕ್ಷದ ಚೆಕ್ ಅನ್ನು ಶಾಸಕರಾದ ಎ.ಟಿ.ರಾಮಸ್ವಾಮಿ ಅವರು ನೀಡಿದರು.