ಸೋಮವಾರದಿಂದ ಅನಗತ್ಯವಾಗಿ ರಸ್ತೆಗಿಳಿದರೆ ಕಠಿಣ ಕ್ರಮ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ.
ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮೇ 10ರಿಂದ 24ರವರೆಗೆ
ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದು, ಸೋಮವಾರದಿಂದ
ರಸ್ತೆಗಳಲ್ಲಿ ಅನಗತ್ಯವಾಗಿ ಜನರು ಓಡಾಟ ನಡೆಸಿದರೆ ಅರೆಸ್ಟ್
ಮಾಡುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್
ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿಗೆ
ತಂದಿದೆ. ಸಾರ್ವಜನಿಕರು ಜವಾಬ್ದಾರಿಯಿಂದ ನಿಯಮ ಪಾಲನೆ
ಮಾಡಬೇಕು ಹೊರತು ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಟ
ನಡೆಸಬಾರದು. ಅಗತ್ಯ ವಸ್ತುಗಳ ಖರೀದಿಗಾಗಿ
ಖರೀದಿಗಾಗಿ ಬೆಳಿಗ್ಗೆ
6ಗಂಟೆಯಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. 10
ಗಂಟೆಯ ಬಳಿಕ ಯಾರೊಬ್ಬರೂ ಮನೆಯಿಂದ ಹೊರಬರುವಂತಿಲ್ಲ.
ಅನಗತ್ಯವಾಗಿ ರಸ್ತೆಗಿಳಿದವರ ವಿರುದ್ಧ ಕಾನೂನು ಕ್ರಮ
ಕೈಗೊಳ್ಳಲಾಗುವುದು ಎಂದು ಹೇಳಿದರು.
ಬೇಕಾಬಿಟ್ಟಿಯಾಗಿ ಓಡಾಡುವ, ಅನಗತ್ಯವಾಗಿ ರಸ್ತೆಗಿಳಿಯುವ
ವಾಹನಗಳನ್ನು ಸೀಜ್ ಮಾಡಲಾಗುವುದು ಮಾತ್ರವಲ್ಲ ಕೋವಿಡ್
ನಿಯಮ ಉಲ್ಲಂಘನೆ ಮಾಡುವವರನ್ನು ಬಂಧಿಸಲಾಗುವುದು.
ಮೆಡಿಕಲ್ ಎಮರ್ಜನ್ಸಿ ಹೊರತಾಗಿ ಯಾವುದೇ ಕೆಲಸಕ್ಕೂ
ಹೊರಬರುವಂತಿಲ್ಲ. ನಗರದಾದ್ಯಂತ ಪೊಲೀಸರನ್ನು
ನಿಯೋಜಿಸಲಾಗಿದ್ದು, ಸಂಪೂರ್ಣ ತಪಾಸಣೆ ನಡೆಸಲಿದ್ದಾರೆ
ಎಂದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ