ಅರಕಲಗೂಡು: ಕಾಲು ಬಾಯಿ ಜ್ವರಕ್ಕೆ ಪಶುಗಳ ಮಾರಣಹೋಮ..! ಕಣ್ಮುಚ್ಚಿ ಕುಳಿತ ಪಶು ಇಲಾಖೆ ಮತ್ತು ಸರ್ಕಾರ..!

ಅರಕಲಗೂಡು: ಕಾಲು ಬಾಯಿ ಜ್ವರಕ್ಕೆ ಪಶುಗಳ ಮಾರಣಹೋಮ..! ಕಣ್ಮುಚ್ಚಿ ಕುಳಿತ ಪಶು ಇಲಾಖೆ ಮತ್ತು ಸರ್ಕಾರ..!
ಅರಕಲಗೂಡು ತಾಲ್ಲೂಕಿನ ಪಾರಸನಹಳ್ಳಿ ಗ್ರಾಮದಲ್ಲಿ ಇಂದು ಕಾಲು-ಬಾಯಿ ಜ್ವರಕ್ಕೆ ಕರು ಬಲಿಯಾಗಿದ್ದು ಇನ್ನೊಂದು ಗರ್ಭಪಾತವಾಗಿದೆ

ಕಾಲು ಬಾಯಿ ಸೊಂಕಿನ ಬಗ್ಗೆ ಪೊಟ್ಯಾಟೋ ಕ್ಲಬ್ ಅಧ್ಯಕ್ಷರಾದ ಹೆಚ್ ಯೋಗಾರಮೇಶ್ ಅವರು ಪಾರಸನಹಳ್ಳಿ ಗ್ರಾಮಕ್ಕೆ ಬೇಟಿ ನೀಡಿ ಸಮಸ್ಯೆಯ ಬಗ್ಗೆ  ಮಾಧ್ಯಮದ ಮೂಲಕ ತಾಲ್ಲೂಕು ಆಡಳಿತ ಹಾಗೂ ಪಶು ಇಲಾಖೆ ಹಾಗೂ ಸರ್ಕಾರದ ಗಮನಕ್ಕೆ ತಂದರೂ ಇದುವರೆಗೆ ಲಸಿಕೆ ಮತ್ತು ಔಷಧ ನೀಡುವಂತಹ ಯಾವುದೇ ಕ್ರಮ ಕೈಗೊಂಡಿಲ್ಲ. 

ತಕ್ಷಣಕ್ಕೆ ಸಹಾಯ ಆಗುವಂತೆ ಅರಕಲಗೂಡು ಪೊಟ್ಯಾಟೋ ಕ್ಲಬ್ ವತಿಯಿಂದ ಕಾಲು ಬಾಯಿ ಜ್ವರಕ್ಕೆ ಪಾರಸನಹಳ್ಳಿ ಮತ್ತು ಮುತ್ತಿಗೆ ಗ್ರಾಮದ ಜಾನುವಾರುಗಳಿಗೆ ಉಚಿತವಾಗಿ ಔಷಧಿಯನ್ನು ನೀಡಲಾಗಿದೆ. 

ಇಲಾಖೆಯ ನಿರ್ಲಕ್ಷ್ಯದಿಂದ ಸಮಯಕ್ಕೆ ಸರಿಯಾಗಿ ಲಸಿಕೆ ಮತ್ತು ಔಷಧೀಯಗಳು ಸಿಗದ ಕಾರಣ  ಇದುವರೆಗೆ ಇಪ್ಪತ್ತಕ್ಕೂ ಹೆಚ್ಚು ಹಸುಗಳು ಕಾಲು ಬಾಯಿ ರೋಗಕ್ಕೆ ತುತ್ತಾಗಿದ್ದು ಇನ್ನೂ ಕೆಲವು ಜಾನುವಾರುಗಳು ಕಾಲು ಬಾಯಿ ಜ್ವರದಿಂದ ನರಳುತ್ತಿದ್ದಾವೆ. ಪಶು ಇಲಾಖೆಯ ನಿರ್ಲಕ್ಷ್ಯ ಹೀಗೆ ಮುಂದುವರೆದರೆ ಪಶುಗಳ ಮಾರಣ ಹೋಮವೇ ನಡೆಯುವುದರಲ್ಲಿ ಅನುಮಾನವೇ ಇಲ್ಲ.

ಕೆಂದ್ರ ಸರ್ಕಾರದ ಯೋಜನೆಯ ಅಡಿಯಲ್ಲಿ ಜಾನುವಾರುಗಳಿಗೆ ಇದುವರೆಗೆ ಪ್ರತಿ ಆರು ತಿಂಗಳಿಗೊಮ್ಮೆ ಲಸಿಕೆ ನೀಡಲಾಗುತ್ತಿತ್ತು. ಆದರೇ ಕಳೆದ ಎರಡು ವರ್ಷಗಳಿಂದ ಯಾವುದೇ ಲಸಿಕೆ ನೀಡಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉಡಾಫೆ ಉತ್ತರ ನೀಡುವುದನ್ನು ಬಿಟ್ಟು ಜಾನುವಾರುಗಳನ್ನು ಉಳಿಸಬೇಕಿದೆ.

 ಈ ಕಾಲು-ಬಾಯಿ ಸೊಂಕು ಸುತ್ತ ಮುತ್ತಲಿನ ಎಲ್ಲಾ ಜಾನುವಾರುಗಳಿಗೆ ಹಬ್ಬುವ ಭೀತಿ ಇದ್ದು ರೈತರು ಆತಂಕದಲ್ಲಿದ್ದಾರೆ. 
ಜಾನುವಾರುಗಳನ್ನು ಕಳೆದುಕೊಂಡು ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೀಗೆ ಮುಂದುವರೆದರೆ ರೈತರ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಕ್ಷೀಣಿಸಲಿದೆ

ಸರ್ಕಾರ ತಕ್ಷಣವೇ  ಎಚ್ಚೆತ್ತು ಎಲ್ಲಾ ಜಾನುವಾರುಗಳಿಗೆ ಲಸಿಕೆ ನೀಡಿ ಜಾನುವಾರುಗಳನ್ನು ಸಾವಿನ ದವಡೆಯಿಂದ ಕಾಪಾಡಬೇಕಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಅರಕಲಗೂಡು ತಾಲ್ಲೂಕು ಕಛೇರಿ ಆವರಣದಲ್ಲಿ ಕೋವಿಡ್-19 ಸೊಂಕಿನಿಂದ ಮೃತಪಟ್ಟ 44 ಕುಟುಂಬದ ವಾರಸುದಾರರಿಗೆ ತಲಾ ಒಂದು ಲಕ್ಷದ ಚೆಕ್ ಅನ್ನು ಶಾಸಕರಾದ ಎ.ಟಿ.ರಾಮಸ್ವಾಮಿ ಅವರು ನೀಡಿದರು.