ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಬುಧವಾರ ಭವಿಷ್ಯ ನುಡಿದರು
ನ್ಯಾಯಾಲಯದಲ್ಲಿನ ನ್ಯಾಯ ದೇವತೆ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚಿಗೊಂಡಿದ್ದಾಳೆ, ಜ್ಞಾನ ಜ್ಯೋತಿ ಹಚ್ಚಿಸುವಳು, ಲೋಕ ಸಮೃದ್ಧವಾಗುತ್ತದೆ ಎಂದು ಹಾಸನ ಜಿಲ್ಲೆಯ ಆರಸಿಕೇರಿ ತಾಲೂಕಿನ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಬುಧವಾರ ಭವಿಷ್ಯ ನುಡಿದರು.
ಅವರು ಪಟ್ಟಣದ ಇಂದುಪೆಟ್ರೋಲ್ ಬಂಕ್ ಮಾಲೀಕ ಬಿಎಂ.ರ‍್ರಿಸ್ವಾಮಿ ತಂದೆ ಕುಮಾರಸ್ವಾಮಿ ರವರ ಮನೆಯಲ್ಲಿ ಹಮ್ಮಿಕೊಂಡಿದ್ದ ಕೋಡಿಮಠದ ಶ್ರೀಗಳ ಪಾದಪೂಜೆ ಕಾರ್ಯಕ್ರಮದ ನಂತರ ಮಾತನಾಡಿದರು.
ಕುರುಗೋಡು ತಾಲೂಕಿನಲ್ಲಿ ಉತ್ತಮ ಮಳೆಯಾಗಿ ಮೆಣಸಿನಕಾಯಿ ಬೆಳೆಗಳು ಸಮೃದ್ಧಿಯಾಗಿ ಬೆಳೆದು ಉತ್ತಮ ಫಸಲು ಹಾಗೂ ಮಾರುಕಟ್ಟೆಯಲ್ಲಿ ಹೆಚ್ಚಿನ ಧರ ದೊರೆಯುತ್ತದೆ. ಇಲ್ಲಿನ ರೈತರು ಅಭಿವೃದ್ಧಿ ಹೊಂದುತ್ತಾರೆ ಎಂದರು.
ಪ್ರಾರAಭದಲ್ಲಿ ಶ್ರೀಗಳಿಗೆ ಪಾದಪೂಜೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳಿಂದ ಭಕ್ತಿಯಿಂದ ಪೂಜೆ ಸಲ್ಲಿಸದರು. ನಂತರ ಕುರುಗೋಡು ಸೇರಿದಂತೆ ಸುತ್ತಮುತ್ತಲಿನ ಭಕ್ತರು ಶ್ರೀಗಳು ದರ್ಶನ ಪಡೆದು ಪುನೀತರಾದರು.
ಈ ಸಂದರ್ಭದಲ್ಲಿ ಬಿಎಂ.ರ‍್ರಿಸ್ವಾಮಿ, ಬಿಎಂ.ಜಡೇಸ್ವಾಮಿ, ಗಣೇಶ್ ಸ್ವಾಮಿ ಸೇರಿದಂತೆ ಕುರುಗೋಡು ಸೇರಿದಂತೆ ಸುತ್ತಮುತ್ತಲಿನ ಭಕ್ತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ