ಪೋಸ್ಟ್‌ಗಳು

ಹತ್ತಿ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಹತ್ತಿ ಬೆಂಕಿಗಾಹುತಿ

ಇಮೇಜ್
ಅರಕಲಗೂಡು ಪಟ್ಟಣದ ವಿನಾಯಕ ನಗರದ ಗದ್ದೆ ಹಳ್ಳ ಮುಖ್ಯರಸ್ತೆಯಲ್ಲಿರುವ ಮಂಜುನಾಥ ರವರ ಬಿಲ್ಡಿಂಗ್ ನಲ್ಲಿ ಬಾಡಿಗೆಗೆ ಇದ್ದ ರಿಜ್ವಾನ್ ರವರಿಗೆ ಸೇರಿದ ಹಾಸಿಗೆ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿದ್ದು ಲಕ್ಷಾಂತರ ಮೌಲ್ಯದ ಹತ್ತಿ ಬೆಂಕಿಗೆ ಆಹುತಿ ಆಗಿದೆ.  ಅಂಗಡಿ ಮಾಲಿಕ ಬೆಳಗ್ಗೆ ಹತ್ತಿ ಅಂಗಡಿ ಬಾಗಿಲು ಹಾಕಿಕೊಂಡು ಸಂಜೆ ಆರು ಗಂಟೆ ವೇಳೆಗೆ ಹೊರಗಡೆ ಹೊಗಿದ್ದಾರೆ. ಸಂಜೆ ಸುಮಾರು 7 ಗಂಟೆಯ ವೇಳೆಗೆ ಹತ್ತಿ ಅಂಗಡಿಯಿಂದ ಹೊಗೆ ಬರುತ್ತಿದ್ದನ್ನು ಕಂಡ ಸ್ಥಳೀಯರು ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿ ತಿಳಿಸಿದ್ದಾರೆ.  ವಿಷಯ ತಿಳಿದು  ಸ್ಥಳಕ್ಕೆ ಆಗಮಿಸಿದ  ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದಾರೆ.

ಜಿಲ್ಲಾಧಿಕಾರಿಗಳ‌ ನಡೆ ಹಳ್ಳಿಯ ಕಡೆ. ಅರಕಲಗೂಡು ತಾಲ್ಲೂಕಿನ ಹಂಪಾಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯ.

ಇಮೇಜ್
ಜಿಲ್ಲಾಧಿಕಾರಿಗಳ‌ ನಡೆ ಹಳ್ಳಿಯ ಕಡೆ. ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿ ಹಂಪಾಪುರ ಗ್ರಾಮದಲ್ಲಿ  ಜಿಲ್ಲಾಧಿಕಾರಿಗಳು  20/03/2021 ರಂದು ವಾಸ್ತವ್ಯ ಹೂಡಲಿದ್ದು ಸಾರ್ವಜನಿಕರು ಅವರ ಕುಂದು ಕೊರತೆಗಳ ಅವಹಾಲನ್ನು ಸಲ್ಲಿಸುವ ಮೂಲಕ ಪರಿಹಾರ ಪಡೆದುಕೊಳ್ಳಬಹುದು. ಹೆಚ್ಚಿನ‌ ಸಂಖ್ಯೆಯಲ್ಲಿ  ಸಾರ್ವಜನಿಕರು ಬಂದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅರಕಲಗೂಡು ತಹಶಿಲ್ದಾರರಾದ ವೈ. ಎಂ.ರೇಣುಕುಮಾರ್ ತಿಳಿಸಲಾಗಿದೆ.  ಜಿಲ್ಲಾಧಿಕಾರಿಗಳ‌ ನಡೆ ಹಳ್ಳಿಯ ಕಡೆ. ಸರಕಾರದ ಸೂಚನೆಯ ಮೇರೆಗೆ ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ತಾಲ್ಲೂಕಿನ ಒಂದು ಹಳ್ಳಿಯಲ್ಲಿ  ವಾಸ್ತವ್ಯ ಮಾಡಬೇಕು. ಅದರಂತೆ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿ ಹಂಪಾಪುರ ಗ್ರಾಮದಲ್ಲಿ  ಜಿಲ್ಲಾಧಿಕಾರಿಗಳು   20/03/2021 ರಂದು ಗ್ರಾಮ‌ ವಾಸ್ತವ್ಯ ಮಾಡಲಿದ್ದಾರೆ. ಇದಕ್ಕಾಗಿ ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಕಾರ್ಯ ನಿರ್ವಹಿಸಿತ್ತಿದ್ದಾರೆ. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ತಾಲ್ಲೂಕು ಆಡಳಿತ ಎಲ್ಲಾ ರೀತಿಯ ಸಲಕ ಸಿದ್ದತೆ ಮಾಡಿಕೊಂಡಿದೆ. ಬೆಳಗ್ಗೆ 8 ಗಂಟೆಯಿಂದ 11 ಗಂಟೆಗಳ ವರೆಗೆ ಸಾರ್ವಜನಿಕರಿಂದ ಅರ್ಜಿ ಸ್ವೀಕಾರ  ನಡೆಸಲಿದ್ದು ಸಾರ್ವಜನಿಕರು ಅವರ ಕುಂದು ಕೊರತೆಗಳ ಅವಹಾಲನ್ನು ಸಲ್ಲಿಸುವ ಮೂಲಕ ಪರಿಹಾರ ಪಡೆದುಕೊಳ್ಳಬಹುದು. ಹೆಚ್ಚಿನ‌ ಸಂಖ್ಯೆಯಲ್ಲಿ  ಸಾರ್ವಜನಿಕರು ಬಂದು ಈ ಅವಕಾಶವನ್ನು ಸದ

ಸರ್ಕಾರಿ ಶಾಲೆಗೆ ಚೇರ್ ಗಳನ್ನು ಕೊಡುಗೆಯಾಗಿ ನೀಡಿದ ಪೊಟ್ಯಾಟೋ ಕ್ಲಬ್ ಅಧ್ಯಕ್ಷರಾದ ಹೆಚ್ ಯೋಗಾರಮೇಶ್

ಇಮೇಜ್
ಅರಕಲಗೂಡು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಹೆಚ್ ಯೋಗಾರಮೇಶ್ ಅವರ ತಂದೆ ದಿ|| ಶ್ರೀ ಹೊ.ತಿ. ಹುಚ್ಚಪ್ಪನವರು ದತ್ತು  ಪಡೆದಿದ್ದ ಹೊನ್ನವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಯೋಗಾರಮೇಶ್ ಬೇಟಿ ನೀಡಿ ಶಾಲೆಯ ಬೇಡಿಕೆಗೆ ಸ್ಪಂದಿಸಿ ಮಕ್ಕಳು ಕುಳಿತುಕೊಳ್ಳುವ ಚೇರ್ ಗಳನ್ನು ಉಚಿತವಾಗಿ ನೀಡುವ ಮೂಲಕ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಹಕಾರಿಯಾಗಿದ್ದಾರೆ. ಯೋಗಾರಮೇಶ್ ಅವರು ಅರಕಲಗೂಡಿನಲ್ಲಿ ಪೊಟ್ಯಾಟೋ ಕ್ಲಬ್ ಸ್ಥಾಪಿಸಿ ರೈತಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದು ಈಗ ಇಂತಹ ಸಮಾಜ ಸೇವಾ ಕೆಲಸಗಳಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಸಣ್ಣನಿಂಗಯ್ಯ, ಶಾಲಾ ಶಿಕ್ಷಕರಾದ ಲತಾಮಣಿ, ಲೀಲಾ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ನಿಂಗರಾಜು ಮುಖಂಡರಾದ ರಾಜೇಗೌಡರು, ಪ್ರಕಾಶ್, ಗೋಪಾಲ್, ಮೋಹನ್ ಹಾಗೂ ಗ್ರಾಮಸ್ಥರು ಜೊತೆಯಲ್ಲಿ ಇದ್ದರು.

ಅರಕಲಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಹಾಗೂ ನೂತನ ಕೆಪಿಸಿಸಿ ಸದಸ್ಯ ಹೆಚ್.ಟಿ.ಮಂಜುನಾಥ್ ಸೇರಿದಂತೆ ಕಾಂಗ್ರೆಸ್ ಮುಖಂಡರಿಂದ ಪತ್ರಿಕಾಗೋಷ್ಠಿ.

ಇಮೇಜ್
ಅರಕಲಗೂಡು ತಾಲ್ಲೂಕಿಗೆ ಬ್ಲಾಕ್ ಕಾಂಗ್ರೆಸ್ ನ ಕೆಪಿಸಿಸಿ ಸದಸ್ಯರಾಗಿ ಆಯ್ಕೆಯಾದ  ಹೆಚ್.ಟಿ. ಮಂಜುನಾಥ್ ಮಾತನಾಡಿ ನಾನು  ನನ್ನನ್ನು ಆಯ್ಕೆ ಮಾಡಿದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಹಾಗೂ ಕೆಪಿಸಿಸಿ ಸದಸ್ಯರಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ನಂತರ ಮಾತನಾಡಿ ನಾನು ಆಯ್ಕೆಯಾಗಿ ಕಾಂಗ್ರೆಸ್ ಪಕ್ಷದ ಬಲವರ್ಧನೆ ಗಾಗಿ ಹೋರಾಟ ಮಾಡಿ , ಸಂಘಟನೆ ಮಾಡಿ ವಿರೋಧ ಪಕ್ಷದ ಲೋಪ ದೋಶಗಳನ್ನು ಎತ್ತಿ ಹಿಡಿದು ಪಕ್ಷ ಸಂಘಟನೆ ಮಾಡುವಂತೆ ರಾಜ್ಯ ನಾಯಕರು ಸೂಚಿಸಿದ್ದಾರೆ . ಅದರಂತೆಯೇ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತೇನೆ. ಸದ್ಯಕ್ಕೆ ನರೇಂದ್ರ ಮೋದಿ ಸರ್ಕಾರ ಎಪಿಎಂಸಿ ಕಾಯ್ದೆ ಜಾರಿಮಾಡಿ ರೈತರನ್ನು ಬೀದಿಗೆ ತಂದಿದೆ.  ಮೂರು ನಾಲ್ಕು ತಿಂಗಳಿಂದ ರೈರರು  ಬೀದಿಯಲ್ಲಿ ಹೋರಾಟ ಮಾಡಿ  ನೂರಾರು ರೈತರು ಇದರಿಂದ ಜೀವ ಕಳೆದುಕೊಂಡಿದ್ದಾರೆ. ಆದರೂ ಸಹ ಕೇಂದ್ರ ಸರ್ಕಾರ ತಮಗೆ ಸಂಭಂಧವೇ ಇಲ್ಲ ಎಂಬಂತೆ ಬೇಜವಬ್ದಾರಿ ತೋರಿಸುತ್ತಿದೆ. ಇನ್ನೊಂದೆಡೆ ಪೆಟ್ರೋಲ್ ಡೀಸೆಲ್ , ಗ್ಯಾಸ್ ಏರಿಕೆಯಂದ ಜನ ಕಂಗಾಲಾಗಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ ಉಳಿದ ಎಲ್ಲಾ ವಸ್ತುಗಳ ಬೆಲೆ ಏರತೊಡಗಿದೆ. ಇದರಿಂದ ಜನ ಸಾಮಾನ್ಯರ ಬದುಕು ಕಷ್ಟದ ಸ್ಥಿತಿಗೆ ಬಂದಿದೆ. ಇಂತಹ ವಿಷಯಗಳ ಬಗ್ಗೆ ಪ್ರತಿಭಟನೆ ಮಾಡುವ‌ ಮೂಲಕ‌ ಪಕ್ಷ‌ ಸಂಘಟನೆಯ ಕೆಲಸದಲ್ಲಿ ನಿರಂತರವಾಗಿ ಕೆಲಸ‌ ಮಾಡುವುದಾಗಿ ಹೇಳಿದರು.

ಅರಕಲಗೂಡು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಬ್ಲಾಕ್ ಕಾಂಗ್ರೆಸ್ ನ ನೂತನ ಕೆಪಿಸಿಸಿ ಸದಸ್ಯರಾಗಿ ಹೆಚ್.ಟಿ. ಮಂಜುನಾಥ್ ನೇಮಕ

ಇಮೇಜ್
ಅರಕಲಗೂಡು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬ್ಲಾಕ್ ಕಾಂಗ್ರೆಸ್‌ ನ ಕೆಪಿಸಿಸಿ ನೂತನ ಸದಸ್ಯರಾಗಿ  ಹೆಂಟಿಗೆರೆ ಕೊಪ್ಪಲು ತಿಮ್ಮೇಗೌಡರ ಮಗ  ಮಂಜುನಾಥ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ನೇಮಕ ಮಾಡಿದ್ದಾರೆ.  ಮಂಜುನಾಥ್ ಅವರು ಹುಟ್ಟು ರಾಜಕೀಯ ಕುಟುಂಬದಿಂದ ಬಂದವರಾಗಿದ್ದು ಇವರ ತಂದೆ ಪಟ್ಟಣ ಪಂಚಾಯತಿ ಅಧ್ಯಕ್ಷರಾಗಿದ್ದರು. ಮಂಜುನಾಥ್ ಅವರಿಗೆ  ಅರಕಲಗೂಡು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಇದ್ದು ಮುಂದಿನ ದಿನಗಳಲ್ಲಿ ಅರಕಲಗೂಡು ಬ್ಲಾಕ್ ಕಾಂಗ್ರೆಸ್ ಅನ್ನು ಬಲವರ್ಧನೆ ಮಾಡುವ  ಮಾಡುವ ಗುರಿ ಹೊಂದಿದ್ದಾರೆ ಎನ್ನಲಾಗಿದೆ. ಮಂಜುನಾಥ್ ಅವರಿಗೆ ಹಾಸನ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ನ ಮಾರ್ಗದರ್ಶನದಲ್ಲಿ ಅರಕಲಗೂಡು ತಾಲ್ಲೂಕಿನ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಲಾಗಿದೆ. 

ಆಲೂಗಡ್ಡೆ ಮಂಡಳಿ ಸ್ಥಾಪಿಸುವಂತೆ ಸರ್ಕಾರಕ್ಕೆ ಹೆಚ್.ಯೋಗಾರಮೇಶ್ ಒತ್ತಾಯ

ಇಮೇಜ್
ಹಾಸನ: ರಾಜ್ಯದಲ್ಲೇ ಶೇ. 50 ಆಲೂಗೆಡ್ಡೆ ಬೆಳೆಯುವ ಹಾಸನ ಜಿಲ್ಲೆಯಲ್ಲಿ ಆಲೂಗೆಡ್ಡೆ ಮಂಡಳಿ ಸ್ಥಾಪಿಸಿ, ಅದಕ್ಕೆ ಈ ಬಾರಿಯ ಬಜೆಟ್ನಲ್ಲಿ 100 ಕೋಟಿ ರೂ. ಅನುದಾನ ಮೀಸಲಿಡುವಂತೆ ಪೊಟಾಟೋ ಕ್ಲಬ್ ಅಧ್ಯಕ್ಷ ಯೋಗಾರಮೇಶ್ ಒತ್ತಾಯಿಸಿದರು.  ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಮೂಲಕ ಜಿಲ್ಲೆಯ ಆಲೂಗೆಡ್ಡೆ ಬೆಳೆಗಾರರಿಗೆ ರಾಜ್ಯ ಸರ್ಕಾರ ನೆರವಾಗಬೇಕು ಎಂದು ಮನವಿ ಮಾಡಿದರು. ಈಗಾಗಲೇ ಕಾಫಿ, ತಂಬಾಕು ಮತ್ತು ತೆಂಗು ಮಂಡಳಿ ತೆರೆಯಲಾಗಿದೆ. ಅದರಂತೆ ಆಲೂಗೆಡ್ಡೆ ಅಭಿವೃದ್ಧಿಗೂ ಮಂಡಳಿ ರಚನೆ ಮಾಡಬೇಕು ಎಂದು ಯೋಗಾ ರಮೇಶ್ ಒತ್ತಾಯಿಸಿದರು. ಆಲೂಗೆಡ್ಡೆ ಮಂಡಳಿ ಸ್ಥಾಪನೆಯಿಂದ ಸ್ಥಳೀಯ ಆಲೂಗೆಡ್ಡೆಯನ್ನೇ ಬಿತ್ತನೆ ಬೀಜ ಎಂದು ಮಾರಾಟ ಮಾಡುವ ಅಕ್ರಮಕ್ಕೆ ಬ್ರೇಕ್ ಬೀಳಲಿದೆ ಎಂದರು. ಹಾಸನ ಜಿಲ್ಲೆ ಸೇರಿದಂತೆ ಆಲೂಗೆಡ್ಡೆ ಬೆಳೆಯುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಬೆಳಗಾವಿ, ಧಾರವಾಡ ಮೊದಲಾದ ಜಿಲ್ಲೆಗಳಲಿ ಆಲೂಗೆಡ್ಡೆ ಬೆಳೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ  ಆಲೂಗೆಡ್ಡೆ ಬೆಳೆಗಾರರಿಗೆ ಸಬ್ಸಿಡಿ ದರದಲಿ ದೃಢೀಕೃತ ಬಿತ್ತನೆ ಬೀಜ ನೀಡುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು. ಇದೇ ಜಿಲ್ಲೆಯ ಹಲವು ಕಡೆಗಳಲ್ಲಿ ಮಿತಿ ಮೀರಿರುವ ಕಾಡಾನೆ ಸಮಸ್ಯೆಗೆ ಕಡಿವಾಣ ಹಾಕುವ ಕೆಲಸ ತುರ್ತಾಗಿ ಆಗಬೇಕಿದೆ. ವಿಷಯದಲ್ಲಿ ಪಕ್ಷ ರಾಜಕೀಯ ಬೇಡ. ಕಳೆದ ಹಲವು ದಶಕಗಳಿಂದ ಮಲೆನಾಡು ಭಾಗದ ಜನರನ್ನು ಕಾಡುತ್ತಿರುವ ಜನರ

ಹೇಮಾವತಿ ನದಿ ಅಣೆಕಟ್ಟಿನ ಇಂದಿನ ನೀರಿನ ವಿವರ

ಇಮೇಜ್
Sir, HEMAVATHI RESERVOIR  Dt- 20-10-2020  6.00 AM  Max Levl: 2922.00 ft Today's lvl :2920.48 ( 2920.65 )ft, Max Cap: 37.103 TMC  Today's cap: 35.63 ( 35.79 ) Tmc Live  cap : 31.26 ( 31.42 )Tmc   Inflow: 3058 ( 4364 )Cus, Outflow River: 500 ( 300 ) cus. Canals- LBC : 3300 (3200) cus, RBC :   275 (250) Cus, HRBHLC: 600(550) Cus, Total out flow : 4675 ( 4300 ) cus   note: corresponding last year readings are shown in bracket.