ಪೋಸ್ಟ್‌ಗಳು

ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ‌ ನೀಡಿದ ಶಾಸಕ ಎ.ಟಿ.ರಾಮಸ್ವಾಮಿ

ಇಮೇಜ್
ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ ಶಾಸಕ  ಎ.ಟಿ.ರಾಮಸ್ವಾಮಿ ಅರಕಲಗೂಡು:  ಹೇಮಾವತಿ ಜಲಾಶಯದಿಂದ  ತಾಲೂಕಿನ ಬಲ ಮೇಲ್ದಂಡೆ  ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಕ್ಷೇತ್ರ ಶಾಸಕರಾದ ಎ.ಟಿ.ರಾಮಸ್ವಾಮಿ ಶನಿವಾರ  ಚಾಲನೆ ನೀಡಿದರು.   ಇದೆ ಸಂದರ್ಭದಲ್ಲಿ ಮಾತನಾಡಿದ ಶಾಸಕರು , ಈ ಬಾರಿ ಜಲಾಶಯದಲ್ಲಿ ನೀರು ಸಂಗ್ರಹ  ಉತ್ತಮವಾಗಿರುವ ಕಾರಣ ಮುಂಚಿತವಾಗಿಯೆ ನಾಲೆಗಳಿಗೆ ನೀರು ಹರಿಸಲಾಗಿದೆ,  ಕಳೆದ ಮೂರು  ವರ್ಷಗಳಿಂದ  ಈ ಕ್ರಮ ನಡೆಸಲಾಗುತ್ತಿದೆ.  ಜಲಾಶಯದ  ಎಡ ಮತ್ತು ಬಲ ದಂಡೆ ನಾಲೆಗಳಿಗಿಂತ ಬಲ ಮೇಲ್ದಂಡೆ ನಾಲೆ ಎತ್ತರದಲ್ಲಿದೆ. ಹೀಗಾಗಿ 15 ದಿನ ಮುಂಚಿತವಾಗಿ ಈ ನಾಲೆಯಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.   96.8 ಕಿ ಮೀ ಉದ್ದದ ಬಲ ಮೇಲ್ದಂಡೆ ನಾಲೆಯಲ್ಲಿ  907 ಕ್ಯೂಸೆಕ್ಸ್ ನೀರಿನ ಹರಿವಿನ ಸಾಮರ್ಥ್ಯ  ಇದ್ದು, 56 ಸಾವಿರ  ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ.  6 ಸಾವಿರ  ಎಕರೆ ಭತ್ತದ ಬೆಳೆಗೆ  ಹಾಗೂ 50 ಸಾವಿರ ಎಕರೆಯಲ್ಲಿ ಅರೆ ನೀರಾವರಿ  ಬೆಳೆಗಳಿಗೆ ನಿರೊದಗಿಸುವ ಯೋಜನೆ ರೂಪಿಸಲಾಗಿದೆ.  ನಾಲಾ ವ್ಯಾಪ್ತಿಯಲ್ಲಿ 41 ವಿತರಣಾ ನಾಲೆಗಳು ಇದ್ದು 210 ಕೆರೆಗಳಿವೆ.  ಬಲ ಮೇಲ್ದಂಡೆ ನಾಲಾ ವ್ಯಾಪ್ತಿಯಲ್ಲಿ  146, ಅಡಿಕೆ ಬೊಮ್ಮನಹಳ್ಳಿ ಏತ ನೀರಾವರಿ ಯೋಜನೆಯಲ್ಲಿ 25,ಅಲ್ಲಾ ಪಟ್ಟಣ ಏತ ನೀರಾವರಿ ಯೋಜನೆಯಲ್ಲಿ 7,ಹಳ್ಳಿ ಮೈಸೂರು ಏತನೀರಾವರಿ ಯೋಜನೆಯಲ್ಲಿ 32 ಕೆರೆಗಳಿದ್ದು ಇವುಗಳನ್ನು  ತು

ವಿದ್ಯುತ್ ಪೂರೈಕೆ ಸಮಯ ಆಗಾಗ್ಗೆ ಬದಲಾವಣೆ ರೈತರ ಆಕ್ರೋಶ: ಪ್ರತಿಭಟನೆಯ ಎಚ್ಚರಿಕೆ.

ಇಮೇಜ್
ವಿದ್ಯುತ್ ಪೂರೈಕೆ ಸಮಯ ಆಗಾಗ್ಗೆ ಬದಲಾವಣೆ ರೈತರ ಆಕ್ರೋಶ: ಪ್ರತಿಭಟನೆಯ ಎಚ್ಚರಿಕೆ.  ಅನಿರೀಕ್ಷಿತವಾಗಿ ಹಾಗೂ ಮಾಹಿತಿ ನೀಡದೆ ವಿದ್ಯುತ್ ಸಮಯವನ್ನು ಆಗಿಂದಾಗ್ಗೆ ಬದಲಾವಣೆ ಮಾಡುತ್ತಿರುವ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಕಳೆದ ಕೆಲವು ದಿನಗಳಿಂದ ಯಾವುದೇ ಮಾಹಿತಿ ನೀಡದೆ ವಿದ್ಯುತ್ ಸರಬರಾಜು ಸಮಯವನ್ನು ಬದಲಾವಣೆ ಮಾಡುತ್ತಿರುವುದು ರೈತರಿಗೆ ಅನಾನುಕೂಲವಾಗುತ್ತಿದೆ . ಈಗಾಗಲೇ ಇರುವ ವೇಳಾಪಟ್ಟಿಯ ಅವಧಿಯಂತೆ ವಿದ್ಯುತ್  ಸರಬರಾಜು ಮಾಡುವಂತೆ ರೈತರು ಒತ್ತಾಯಿಸಿದ್ದಾರೆ. ಅಲ್ಲದೇ ವಿದ್ಯುತ್ ನೀಡುವ ಅವಧಿಯನ್ನು ಹೆಚ್ಚಿಸುವಂತೆಯೂ ಒತ್ತಾಯಿಸಿದ್ದಾರೆ. ಇಲಾಖೆ ವತಿಯಿಂದ ವಾಟ್ಸಪ್ ಗುಂಪನ್ನು ರಚಿಸಿ ವಿದ್ಯುತ್ ಸರಬರಾಜು ಸಮಯದ ಬಗ್ಗೆ ನಿಗದಿತ ಮಾಹಿತಿಯನ್ನು ಒದಗಿಸುವಂತೆ ರೈತರು ಆಗ್ರಹಿಸಿದ್ದಾರೆ.  ರೈತರು ಈ ಕುರಿತು ಕಿರಿಯ ಅಭಿಯಂತರರ ಕಚೇರಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಬಸವಾಪಟ್ಟಣ ಕಚೇರಿಗೆ ದೂರನ್ನು ಸಲ್ಲಿಸಿದಿದ್ದಾರೆ.  ಒಂದು ವೇಳೆ ಇದೇ ರೀತಿ ರೈತರಿಗೆ ತೊಂದರೆ ಆದರೆ ಕಛೇರಿಯ ಮುಂದೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸುವ ಮೂಲಕ ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಸಂದರ್ಭದಲ್ಲಿ ಯುವ ರೈತರಾದ ಡಾ. ಶಿವಪ್ರಸಾದ್ ಬಿಎಂ, , ರವಿ ಬಿಕೆ ಮಂಜಾ ಬಿಎಂ ಪುಟ್ಟಸ್ವಾಮಿ ಬಿಆರ್ ಹಾಗೂ ರಂಗನ್ ಹಾಜರಿದ್ದರು

ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣ ಗ್ರಾಮದಲ್ಲಿ ಕಲುಷಿತ ನೀರಿನ ಸರಬರಾಜು ಆರೋಪಿಸಿ ಗ್ರಾಮಸ್ಥರ ಆಕ್ರೋಶ.

ಇಮೇಜ್
ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣ ಗ್ರಾಮದಲ್ಲಿ ಕಲುಷಿತ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ ಎಂದು ಆರೋಪಿಸಿ  ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯತ್ ಕೇಂದ್ರ ಸ್ಥಾನವಾದ ಬಸವಾಪಟ್ಟಣ ಗ್ರಾಮಕ್ಕೆ ಕಾವೇರಿ ನದಿಯಿಂದ ಕಲುಷಿತ ನೀರಿನ ಸರಬರಾಜು  ಕಂಡು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರಿನ ಸರಬರಾಜು ಅವಸ್ಥೆಯನ್ನು ಕಂಡು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಿಂದ ಸ್ವಲ್ಪ ದೂರದಲ್ಲಿ ಹರಿಯುವ ಕಾವೇರಿ ನದಿಯಿಂದ  ನೀರಿನ ಪೂರೈಕೆ ಮಾಡುವ ಸ್ಥಳವು ಕಲುಷಿತಗೊಂಡಿದ್ದು ಅದೇ ಸ್ಥಳದಿಂದ ನೀರನ್ನು ಪೂರೈಸುತ್ತಿರುವುದು ವಿಷಾದನೀಯ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಕನಿಷ್ಟ ಮೂಲಭೂತ ಸೌಲಭ್ಯವನ್ನು ಒದಗಿಸದಿರುವುದು ಗ್ರಾಮ ಪಂಚಾಯಿತಿ ಆಡಳಿತ ವೈಫಲ್ಯಕ್ಕೆ ಸಾಕ್ಷಿ ಎಂದು ಅಭಿಪ್ರಾಯಪಟ್ಟಿದ್ದಾರೆ ನೀರನ್ನು ಪಂಪ್ ಮಾಡುವ ಸ್ಥಳ ಶಿಥಿಲಗೊಂಡಿದ್ದು ಅಲ್ಲದೆ ಕೊಳಚೆ ಪ್ರದೇಶವಾಗಿದೆ ಇದೇ ಸ್ಥಳದಿಂದ ಗ್ರಾಮಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದ್ದು  ನಲ್ಲಿಗಳಲ್ಲಿ ಕಲುಷಿತ  ನೀರು ಬರುತ್ತಿರುವುದು ಗೃಹಿಣಿಯರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಹೊಡೆದು ವರ್ಷದಿಂದ ಗ್ರಾಮದೇವತೆ ದೇವಸ್ಥಾನದ ಹತ್ತಿರ ಇರುವ  ಗದ್ದೆಗಳಲ್ಲಿ ನೀರು ತುಂಬಿಕೊ

ಜನ ಹಿತ ಲಾಕ್ ಡೌನ್ ಬೇಕು.ಹೆಚ್.ಡಿ.ಕುಮಾರಸ್ವಾಮಿ.

ಇಮೇಜ್
ಬೆಂಗಳೂರು: ಲಾಕ್ ಡೌನ್ ಅಲ್ಲದ ಕಠಿಣ ಲಾಕ್ ಡೌನ್, ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ ಲಾಕ್ ಡೌನ್ ಇಂದಿನಿಂದ ಜಾರಿಗೆ ಬರಲಿದೆ. ಜನಸಂಚಾರ ತಡೆಯುವುದೇ ಲಾಕ್ ಡೌನ್ ಎಂದು ಭಾವಿಸಿರುವ ಸರ್ಕಾರ ಸಂಕಷ್ಟದಲ್ಲಿ ನಾಗರಿಕರನ್ನು ಮರೆತಿರುವುದು ದುರಂತ. ನಾವು ಸೂಚಿಸಿದ ಲಾಕ್ ಡೌನ್ ಇದಾಗಿರಲಿಲ್ಲ. ನಾವು ಹೇಳಿದ್ದು ಜನಹಿತದ ಲಾಕ್ ಡೌನ್ ಆಗಿತ್ತು ಎಂದು ಮಾಜಿ ಸಿಎಂ ಹೆಚ್.ಡಿ, ಕುಮಾರಸ್ವಾಮಿ ಹೇಳಿದ್ದಾರೆ. ಲಾಕ್ ಡೌನ್ ಮಾಡಿ ಜನರ ಜೀವ ಉಳಿಸಿ ಎಂದು ನಾನು ಮೊದಲೇ ಹೇಳಿದ್ದೆ. ಹಾಗೆ ಹೇಳುವಾಗ ಲಾಕ್ ಡೌನ್ ನಿಂದ ಜನ ಜೀವನಕ್ಕೆ ಆಗುವ ತೊಂದರೆಗಳಿಗೆ ಪರಿಹಾರ ಕ್ರಮಗಳಿರಬೇಕು, ಜನರ ಅಗತ್ಯವನ್ನು ಸರ್ಕಾರ ಭರಿಸಬೇಕೆಂದು ಹೇಳಿದ್ದೆ. ಆದರೆ, ಲಾಕ್ ಡೌನ್ ಸಂದರ್ಭದಲ್ಲಿ ನೀಡಬೇಕಾದ ಪರಿಹಾರ ಕ್ರಮಗಳಿಂದ ವಿಮುಖವಾಗಿರುವ ಸರ್ಕಾರ ಬೇಜವಾಬ್ದಾರಿತನ ತೋರಿದೆ. ಜನರಿಗೆ ಎಲ್ಲಿ ಪರಿಹಾರ ನೀಡಬೇಕಾಗುತ್ತದೆಯೋ, ಜೀವನ ನಿರ್ವಹಣೆಗೆ ನೆರವು ನೀಡಬೇಕಾಗಿ ಬರುತ್ತದೆಯೋ ಎಂಬ ದುರಾಲೋಚನೆ ಮಾಡಿರುವ ಸರ್ಕಾರ ಲಾಕ್ ಡೌನ್ ಎಂಬ ಪದವನ್ನು ಧೈರ್ಯದಿಂದ ಹೇಳುತ್ತಲೇ ಇಲ್ಲ. ಕಠಿಣ ನಿಯಮ ಎಂದು ಹೇಳಿ ಲಾಕ್ ಡೌನ್ ನಿಂದ ದೂರ ನಿಂತಿದೆ. ಕೇಂದ್ರವೂ ಇದೇ ಕುತಂತ್ರದ ನಡೆಯನ್ನು ಅನುಸರಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂದಿದ್ದಾರೆ. ಲಾಕ್ ಡೌನ್ ಎಂದರೆ ಜನ ಹೊರ ಹೋಗಲಾಗದ ಪರಿಸ್ಥಿತಿ. ಬದುಕಿನ ಅಗತ್ಯವನ್ನು ದುಡಿದುಕೊಳ್ಳಲಾಗದ ದುಸ್ಥಿತಿ. ಸರ್ಕಾರವೇ ಇದರ ಹ

ಸೋಮವಾರದಿಂದ ಅನಗತ್ಯವಾಗಿ ರಸ್ತೆಗಿಳಿದರೆ ಕಠಿಣ ಕ್ರಮ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ.

ಇಮೇಜ್
ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮೇ 10ರಿಂದ 24ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದು, ಸೋಮವಾರದಿಂದ ರಸ್ತೆಗಳಲ್ಲಿ ಅನಗತ್ಯವಾಗಿ ಜನರು ಓಡಾಟ ನಡೆಸಿದರೆ ಅರೆಸ್ಟ್ ಮಾಡುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. ಸಾರ್ವಜನಿಕರು ಜವಾಬ್ದಾರಿಯಿಂದ ನಿಯಮ ಪಾಲನೆ ಮಾಡಬೇಕು ಹೊರತು ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಟ ನಡೆಸಬಾರದು. ಅಗತ್ಯ ವಸ್ತುಗಳ ಖರೀದಿಗಾಗಿ ಖರೀದಿಗಾಗಿ ಬೆಳಿಗ್ಗೆ 6ಗಂಟೆಯಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. 10 ಗಂಟೆಯ ಬಳಿಕ ಯಾರೊಬ್ಬರೂ ಮನೆಯಿಂದ ಹೊರಬರುವಂತಿಲ್ಲ. ಅನಗತ್ಯವಾಗಿ ರಸ್ತೆಗಿಳಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಬೇಕಾಬಿಟ್ಟಿಯಾಗಿ ಓಡಾಡುವ, ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ಸೀಜ್ ಮಾಡಲಾಗುವುದು ಮಾತ್ರವಲ್ಲ ಕೋವಿಡ್ ನಿಯಮ ಉಲ್ಲಂಘನೆ ಮಾಡುವವರನ್ನು ಬಂಧಿಸಲಾಗುವುದು. ಮೆಡಿಕಲ್‌ ಎಮರ್ಜನ್ಸಿ ಹೊರತಾಗಿ ಯಾವುದೇ ಕೆಲಸಕ್ಕೂ ಹೊರಬರುವಂತಿಲ್ಲ. ನಗರದಾದ್ಯಂತ ಪೊಲೀಸರನ್ನು ನಿಯೋಜಿಸಲಾಗಿದ್ದು, ಸಂಪೂರ್ಣ ತಪಾಸಣೆ ನಡೆಸಲಿದ್ದಾರೆ ಎಂದರು.

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಗಂಟೆಗೊಂದು ಆದೇಶ

ಇಮೇಜ್
*ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಗ್ಗೆ 10ರ ತನಕ ವ್ಯಾಪಾರಕ್ಕೆ ಅವಕಾಶ. ಉಳಿದಂತೆ ಭಾನುವಾರ,  ಮಂಗಳವಾರ, ಗುರುವಾರ,  ಶನಿವಾರ ಹಾಸನ ಸಂಪೂರ್ಣ ಲಾಕ್ ಡೌನ್.* ಆದೇಶವನ್ನು ಇಂದಿನ‌ ಸಭೆಯಲ್ಲಿ ನೀಡಲಾಗಿತ್ತು.  ಜಿಲ್ಲಾ ಉಸ್ತುವಾರಿ ಸಚಿವರಿಂದ ಆದೇಶ. ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಾಲ್ಕು ದಿನ ಲಾಕ್ ಡೌನ್ ಆದೇಶ ರದ್ದು ಮಾಡಿದ್ದು, ಜಿಲ್ಲೆಯ ಶಾಸಕರ ಮನವಿ ಆಗ್ರಹ ಸಲಹೆಗಳಿಗೆ ಕೊಂಚವು ಕಿಮ್ಮತ್ತು ಸಿಕ್ಕಿಲ್ಲ, ಜೆಡಿಎಸ್ ಪಕ್ಷದ ಎಲ್ಲ ಶಾಸಕರು ಮಂತ್ರಿಗಳ ಸಭೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ನಿರ್ವಹಣೆ ಮಾಡಲು ಲಾಕ್ ಡೌನ್ ಮಾಡಿ ಎಂದು ಹೇಳಿದ್ದರಿಂದ ಮಾಡಿದ್ದ ನಾಲ್ಕು ದಿನಗಳ ಲಾಕ್ ಡೌನ್ ಆದೇಶವನ್ನು ಒಂದು ಗಂಟೆಯ ನಂತರ ಸಚಿವರು ವಾಪಸ್ ಪಡೆದಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಸಭೆಯಲ್ಲಿ ಕೈಗೊಂಡ ಲಾಕ್ ಡೌನ್ ಆದೇಶವನ್ನು ರದ್ದು ಮಾಡಿದ್ದು, ಮುಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆದೇಶ ಬರುವವರೆಗು ಈಗ ಇರುವ ಪರಿಸ್ಥಿತಿಯನ್ನು ಮುಂದುವರೆಸಲಾಗಿದೆ ಎಂದರು. ಬೆಂಗಳೂರಿನಲ್ಲಿ ಸಿಎಂ ಜೊತೆ ಚರ್ಚಿಸಿ ಕೇಂದ್ರದ ಆದೇಶ ನೋಡಿಕೊಂಡು ಮುಂದಿನ ತೀರ್ಮಾನ ಎಂದು ಹೇಳಿಕೆ ನೀಡಿದರು. ಇದರಿಂದ ಎಲ್ಲ ಜನಪ್ರತಿನಿಧಿಗಳ ಹೋರಾಟ ಹಾರಾಟಗಳೆಲ್ಲ ಮೂಲೆಗುಂಪಾಗಿದ್ದು, ಅವರ ಮಾತುಗಳಿಗೆ ಯಾವುದೇ ಬೆಲೆಯಿಲ್ಲದಂತೆ ಆಗಿದೆ.

ಹತ್ತಿ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಹತ್ತಿ ಬೆಂಕಿಗಾಹುತಿ

ಇಮೇಜ್
ಅರಕಲಗೂಡು ಪಟ್ಟಣದ ವಿನಾಯಕ ನಗರದ ಗದ್ದೆ ಹಳ್ಳ ಮುಖ್ಯರಸ್ತೆಯಲ್ಲಿರುವ ಮಂಜುನಾಥ ರವರ ಬಿಲ್ಡಿಂಗ್ ನಲ್ಲಿ ಬಾಡಿಗೆಗೆ ಇದ್ದ ರಿಜ್ವಾನ್ ರವರಿಗೆ ಸೇರಿದ ಹಾಸಿಗೆ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿದ್ದು ಲಕ್ಷಾಂತರ ಮೌಲ್ಯದ ಹತ್ತಿ ಬೆಂಕಿಗೆ ಆಹುತಿ ಆಗಿದೆ.  ಅಂಗಡಿ ಮಾಲಿಕ ಬೆಳಗ್ಗೆ ಹತ್ತಿ ಅಂಗಡಿ ಬಾಗಿಲು ಹಾಕಿಕೊಂಡು ಸಂಜೆ ಆರು ಗಂಟೆ ವೇಳೆಗೆ ಹೊರಗಡೆ ಹೊಗಿದ್ದಾರೆ. ಸಂಜೆ ಸುಮಾರು 7 ಗಂಟೆಯ ವೇಳೆಗೆ ಹತ್ತಿ ಅಂಗಡಿಯಿಂದ ಹೊಗೆ ಬರುತ್ತಿದ್ದನ್ನು ಕಂಡ ಸ್ಥಳೀಯರು ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿ ತಿಳಿಸಿದ್ದಾರೆ.  ವಿಷಯ ತಿಳಿದು  ಸ್ಥಳಕ್ಕೆ ಆಗಮಿಸಿದ  ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದಾರೆ.