ಪೋಸ್ಟ್‌ಗಳು

ಸೆಪ್ಟೆಂಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಮದುರ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಹಾರ ಪೋಷಣಾ ಮಾಸಾಚರಣೆ.

ಇಮೇಜ್
ರಾಮದುರ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಹಾರ ಪೋಷಣಾ ಮಾಸಾಚರಣೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ವತಿಯಿಂದ ಆಹಾರ ಪೋಷಣಾ ಮಾಸಾಚರಣೆ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರದ ಉದ್ಘಾಟನೆಯ ನ್ನು ರಾಮದುರ್ಗ ಶಾಸಕರಾದ ಮಹದೇವಪ್ಪ ಯಾದವಾಡ ಮತ್ತು ತಾಲೂಕು ಆಡಳಿತದ ಮುಖ್ಯ ಅಧಿಕಾರಿಗಳು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಪೋಷಣಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಿದ್ದಪಡಿಸಿದ ಪೌಷ್ಟಿಕ ಆಹಾರವನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ವೀಕ್ಷಣೆ ಮಾಡಿದರು.ಮತ್ತು ರಾಮದುರ್ಗ ತಾಲೂಕ ಮಕ್ಕಳ ಮತ್ತು ಮಹಿಳಾ ಶಿಶು ಅಭಿವೃದ್ಧಿ ಅಧಿಕಾರಿಗಳ ತಂಡದೊಂದಿಗೆ  ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಮತ್ತು ಮಕ್ಕಳಿಗೆ ಅನ್ನಪ್ರಾಶನ,ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ಬಾಂಡ್ ವಿತರಣೆ, ಮಕ್ಕಳ ಜನ್ಮದಿನವನ್ನು ಆಚರಿಸುವ ಮೂಲಕ ವಿಶೇಷವಾಗಿ ಪೋಷಣಾ ಮಾಸಾಚರಣೆ  ಆಚರಣೆ ಮಾಡಿದರು,    ಈ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ ಎಸ್.ಎಮ್.ಬೆನ್ನೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಬೆಳಗಾವಿಯ ಉಪ ನಿರ್ದೇಶಕರಾದ ಬಸವರಾಜ ವರವಟ್ಟಿ,ಶ್ರೀ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ...

ರಾಮದುರ್ಗ: ವಿಶ್ವ ರೇಬಿಸ್ ದಿನಾಚರಣೆ ಹಾಗೂ ಅಜಾದಿ ಕಾ ಅಮೃತ ಮಹೋತ್ಸವ ದಿನ.46 ಶ್ವಾನಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ ನೀಡಲಾಯಿತು

ಇಮೇಜ್
ಅಜಾದಿ ಕಾ ಅಮೃತ ಮಹೋತ್ಸವ ಹಾಗೂ ವಿಶ್ವ ರೇಬಿಸ್ ದಿನಾಚರಣೆ ರಾಮದುರ್ಗ 46 ಶ್ವಾನಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ ನೀಡಲಾಯಿತು ಬೆಳಗಾವಿ ಜಿಲ್ಲೆಯ  ರಾಮದುರ್ಗ ಪಟ್ಟಣದ ಹೊರವಲೆಯ ದಲ್ಲಿ ಇದ್ದ ಪಶು ಸಂಗೋಪನಾ ಇಲಾಖೆ ರಾಮದುರ್ಗ ತಾಲೂಕಿನ ಪಶು ಆಸ್ಪತ್ರೆ  ಆವರಣದಲ್ಲಿ ವಿಶ್ವ ರೇಬಿಸ್ ದಿನದ ಅಂಗವಾಗಿ ಶ್ವಾನಗಳಿಗೆ ಉಚಿತ ರೇಬಿಸ್  46 ಶ್ವಾನಗಳಿಗೆ ಲಸಿಕೆ ಹಾಕಲಾಯಿತು    ಅಜಾದಿ ಕಾ ಅಮೃತ ಮಹೋತ್ಸವ ಹಾಗೂ ವಿಶ್ವ ರೇಬಿಸ್ ದಿನಾಚರಣೆ  ಅಂಗವಾಗಿ  ರಾಮದುರ್ಗ ತಾಲೂಕಿನ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪಶು ಆಸ್ಪತ್ರೆ ಆವರಣದಲ್ಲಿ  ರಾಮದುರ್ಗ ತಾಲೂಕಿನ ಸುತ್ತಮುತ್ತಲಿನ ಎಲ್ಲಾ ಶ್ವಾನಗಳಿಗೆ ಉಚಿತವಾಗಿ ರೇಬಿಸ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಅಲ್ಲಿ ಒಟ್ಟು 46 ಶ್ವಾನಗಳಿಗೆ ಲಸಿಕೆ  ನೀಡಲಾಯಿತು.  ಈ ಸಂದರ್ಭದಲ್ಲಿ ಪಶು ಸಂಗೋಪನಾ ಇಲಾಖೆ ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಯಾದ ಡಾಕ್ಟರ್ ಗಿರೀಶ್ ಪಾಟೀಲ್. ನಾಮದೇವ ಪಮ್ಮಾರ,ಸಿಬ್ಬಂದಿವರ್ಗ್ ಮತ್ತು  ಸುತ್ತಮುತ್ತಲಿನ ಗ್ರಾಮದ  ಕುರುಬರು,ರೈತರು ಹಾಗೂ ರಾಮದುರ್ಗರದ ಶ್ವಾನಗಳನ್ನು ಸಾಕಿದ ಮಾಲೀಕರು ಉಪಸ್ಥಿತರಿದ್ದರು. ವರದಿ - ಎಂ ಕೆ ಯಾದವಾಡ ರಾಮದುರ್ಗ

ರಾಮದುರ್ಗ:ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಾತ್ರ ಜನರು ನೆಮ್ಮದಿ ಬದುಕು ಸಾಧ್ಯ. ಮಾಜಿ ಶಾಸಕ ಅಶೋಕ ಪಟ್ಟಣ.

ಇಮೇಜ್
ರಾಮದುರ್ಗಃ ಮಹಾತ್ಮಾ ಗಾಂಧಿವರ ಕನಸು ಗ್ರಾಮಗಳ ಅಭಿವೃದ್ಧಿ ಆಗಬೇಕು ಜನರಿಗೆ ಸ್ಥಳದಲ್ಲಿಯೇ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಅವರ ಪರಿಕಲ್ಪನೆ ನೆನಸಾಗಬೇಕಾದರೆ ಎಲ್ಲರೂ ಒಂದಾಗಿ ಗ್ರಾಮಗಳ ಅಭಿವೃದ್ಧಿಗೆ ಶ್ರಮೀಸಬೇಕು ಅಂದರೆ ಮಾತ್ರ ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ಯಕ್ಕೆ ಕಾರ್ಯಕ್ರಮಕ್ಕೆ ಒಂದು ಅರ್ಥ ಬರುತ್ತದೆ ಎಂದು ಮಾಜಿ ಶಾಸಕ ಅಶೋಕ ಪಟ್ಟಣ ಹೇಳಿದರು. ಸ್ಥಳಿಯ ಅಶೋಕ ಪಟ್ಟಣ ಅವರ ತೋಟದ ಮನೆಯಲ್ಲಿ ಮಹಾತ್ಮಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮದ ಪೂರ್ವಭಾವಿ ಸಾಮಾಜೀಕ ಜಾಲತಾಣ ಹಾಗೂ ಮುಖಂಡರ ಮತ್ತು ಭೂತÀ ಏಜಂಟರು, ಪದಾಧಿಕಾರಿಗಳ ಸಭೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ಪರಿಷ್ಕರಣೆ ಮತ್ತು  ಶಿಕ್ಷಕರ ಹಾಗೂ ಪದವೀಧರರ ಚುನಾವಣೆಯ ಕುರಿತು ಪೂರ್ವಭಾವಿ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿಯವರು ಪ್ರತಿ ಗ್ರಾಮಗಳ ಜನರು ಸ್ವಾವಲಂಬಿಗಳಾಗಬೇಕು, ಭಾರತದ ಭವಿಷ್ಯ ಹಳ್ಳಿಗಳಲ್ಲಿ ಅಡಗಿದೆ. ಸಾಮಾಜೀಕ, ರಾಜಕೀಯ, ಅರ್ಥಿಕ, ಪ್ರಜಾಪ್ರಭುತ್ವದ ಅಭಿವೃದ್ದಿಯನ್ನು ತಳ ಮಟ್ಟದಿಂದ ಬಲಿಷ್ಠವಾಗಿ ಗ್ರಾಮ ಪಂಚಾಯತ ರಾಜ್ ವ್ಯವಸ್ಥೆಯಲ್ಲಿ ಜನರಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸುವ ಕಲ್ಪನೆ ಒಂದು ಕಡೆಯಾದರೆ ಎಲ್ಲರೂ ಸಮಾನತೆಯಿಂದ ಇರಬೇಕು ಎಂದು ಮಹದಾಸೆಯಾಗಿತ್ತು ಆದ್ದರಿಂದ ಎಲ್ಲರೂ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗಬೇಕಿದೆ. ಹಿಂದನಿಂದಲೂ ದೇಶದ ಅಭಿವೃದ್ದಿಗೆ ಯಾರು ಶ್ರಮಿಸಿದ್ದಾ...

ಪ್ರವೇಶ ಶುಲ್ಕ ಕಡಿಮೆ ಮಾಡುವಂತೆ ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವಂತೆ ತಹಶಿಲ್ದಾರರ ಮೂಲಕ ವಿದ್ಯಾರ್ಥಿಗಳಿಂದ ಮನವಿ

ಇಮೇಜ್
ರಾಮದುರ್ಗ ತಾಲೂಕು ಶುಲ್ಕ ಕಡಿಮೆ ಮಾಡುವಂತೆ ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವಂತೆ ತಹಶಿಲ್ದಾರರ ಮೂಲಕ ವಿದ್ಯಾರ್ಥಿಗಳಿಂದ ಮನವಿ  ಹೌದು ವಿಕ್ಷಕರೇ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ವಿಶ್ವಭಾರತಿ ಪ್ರಥಮ ದರ್ಜೆ ಮಹಾವಿದ್ಯಾಲಯ ತುರನೂರದಲ್ಲಿ ದುಬಾರಿ ಪ್ರವೇಶ ವಸೂಲಾತಿ ಮಾಡುತ್ತಿರುವದು ಮತ್ತು ಈ ಕಾಲೇಜು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಅದರ ನಿಟ್ಟಿನಲ್ಲಿ ವಿದ್ಯಾರ್ಥಿವೃಂದ ವು ಪ್ರವೇಶ ಶುಲ್ಕವನ್ನು  ಕಡಿಮೆ ಮಾಡಬೇಕು ಮತ್ತು ಆದಷ್ಟು ಬೇಗ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಮಾನ್ಯ ರಾಮದುರ್ಗ ತಹಶೀಲ್ದಾರಾದ ಮಲ್ಲಿಕಾರ್ಜುನ್ ಹೆಗ್ಗಣ್ಣವರ್  ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಮನವಿ ನೀಡಿದರು.     ಮಹಾವಿದ್ಯಾಲಯದ ಆಡಳಿತ ಮಂಡಳಿಯು ಪ್ರತಿ ವರ್ಷ ಪ್ರವೇಶ ಶುಲ್ಕವನ್ನು ದುಬಾರಿಗೊಳಿಸುತ್ತಾ ಹೋಗುತ್ತಿದೆ . ಅದರಂತೆ ಈ ಭಾರಿಯೂ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿದೆ . ಕೊರೋನಾನಂತಹ ಮಹಾಮಾರಿಯಿಂದ ನಮ್ಮ ಪಾಲಕರು ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು , ಇಷ್ಟು ಪಾವತಿ ಶುಲ್ಕವನ್ನು ಭರಿಸುವುದು ಕಷ್ಟಸಾಧ್ಯ . ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಸುತ್ತೋಲೆಯ ಪ್ರಕಾರ ಪ್ರವೇಶಾತಿ ಶುಲ್ಕವು ಪರಿಶಿಷ್ಟ ಜಾತಿ | ಪರಿಶಿಷ್ಟ ಪಂಗಡ ದ ವಿದ್ಯಾರ್ಥಿಗಳಿಗೆ ರೂ 470 / - ಗಳು ಮತ್ತು ಸಾಮಾನ್ಯ ವರ್ಗದ ವಿದ್ಯ...

ಅರಕಲಗೂಡು: ಜಾನುವಾರುಗಳ ಸಾವು ಖಂಡಿಸಿ ಪೊಟ್ಯಾಟೋ ಕ್ಲಬ್ ವತಿಯಿಂದ ಪಶು ಆಸ್ಪತ್ರೆ ಮುಂಬಾಗ ಪ್ರತಿಭಟನೆ.

ಇಮೇಜ್
ಅರಕಲಗೂಡು: ಪಟ್ಟಣದ ಪಶು ಆಸ್ಪತ್ರೆ ಮುಂಭಾಗ ಪೊಟ್ಯಾಟೋ ಕ್ಲಬ್ ನೇತೃತ್ವದಲ್ಲಿ ಜಾನುವಾರುಗಳ ಸಾವು ಖಂಡಿಸಿ ಶುಕ್ರವಾರ ರೈತರು ಪ್ರತಿಭಟನೆ ನಡೆಸಿದರು. ಯೋಗಾ ರಮೇಶ್ ಮಾತನಾಡಿ, ಜನಪ್ರತಿನಿಧಿಗಳು ನಿರ್ಲಕ್ಷö್ಯ ಧೋರಣೆಯಿಂದಾಗಿ ಜಾನುವಾರುಗಳಿಗೆ ರೋಗದ ತೀವ್ರತೆ ಹೆಚ್ಚಿ ಗಬ್ಬದ ಹಸು, ಕರುಗಳು ನರಳಿ ನರಳಿ ಪ್ರಾಣ ಕಳೆದುಕೊಳ್ಳುತ್ತಿವೆ. ಲಸಿಕೆ ನೀಡಿ ಜಾನುವಾರುಗಳ ಜೀವ ಉಳಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು. ಕಾಲು ಬಾಯಿ ರೋಗ ಜಾನುವಾರುಗಳಿಗೆ ಮರಣ ಶಾಸನವಾಗಿ ಪರಿಣಮಿಸಿದೆ. ಸ್ಕಿನ್ ಕಾಯಿಲೆ ಕೂಡ ಉಲ್ಭಣಿಸಿದೆ. ಇದಕ್ಕೆ ಔಷಧಿಯೇ ಇಲ್ಲವಂತೆ, ಆಧುನಿಕ ತಂತ್ರಜ್ಞಾನದ ಕಾಲದಲ್ಲೂ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇತರೆ ವಿಚಾರಗಳ ಕುರಿತು ಚರ್ಚೆ ಮಾಡುವ ಶಾಸಕರು, ಸಚಿವರು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಮೂಕರಾಗಿದ್ದಾರೆ. ಕೂಡಲೇ ಮೃತಪಟ್ಟ ಜಾನುವಾರುಗಳ ಸಮೀಕ್ಷೆ ನಡೆಸಿ ಪರಿಹಾರ ಕಲ್ಪಿಸಬೇಕು. ಹಳ್ಳಿಗಳಲ್ಲಿ ಸಾಮೂಹಿಕ ಲಸಿಕೆ ಕೈಗೊಂಡು ರೋಗ ನಿಯಂತ್ರಿಸಬೇಕು. ಪಶು ವೈದ್ಯರ ಕೊರತೆ ನೀಗಿಸಿ ಜಾನುವಾರುಗಳಿಗೆ ಗುಣಮಟ್ಟದ ಚಿಕಿತ್ಸಾತ್ಮಕ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು. ಹೈನುಗಾರಿಕೆಯನ್ನೆ ನೆಚ್ಚಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ. ಇತ್ತ ಶುಂಠಿ, ಆಲೂಗಡ್ಡೆ ಕಟಾವು ನಡೆಸಿ ಮಾರಾಟ ಮಾಡಿದರೂ ಬೆಲೆ ಕುಸಿದು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದೇವೆ, ಅತ್ತ ಮನೆ ಕ...

ಅರಕಲಗೂಡು: ಕಾಲು ಬಾಯಿ ಜ್ವರಕ್ಕೆ ಪಶುಗಳ ಮಾರಣಹೋಮ..! ಕಣ್ಮುಚ್ಚಿ ಕುಳಿತ ಪಶು ಇಲಾಖೆ ಮತ್ತು ಸರ್ಕಾರ..!

ಇಮೇಜ್
ಅರಕಲಗೂಡು: ಕಾಲು ಬಾಯಿ ಜ್ವರಕ್ಕೆ ಪಶುಗಳ ಮಾರಣಹೋಮ..! ಕಣ್ಮುಚ್ಚಿ ಕುಳಿತ ಪಶು ಇಲಾಖೆ ಮತ್ತು ಸರ್ಕಾರ..! ಅರಕಲಗೂಡು ತಾಲ್ಲೂಕಿನ ಪಾರಸನಹಳ್ಳಿ ಗ್ರಾಮದಲ್ಲಿ ಇಂದು ಕಾಲು-ಬಾಯಿ ಜ್ವರಕ್ಕೆ ಕರು ಬಲಿಯಾಗಿದ್ದು ಇನ್ನೊಂದು ಗರ್ಭಪಾತವಾಗಿದೆ ಕಾಲು ಬಾಯಿ ಸೊಂಕಿನ ಬಗ್ಗೆ ಪೊಟ್ಯಾಟೋ ಕ್ಲಬ್ ಅಧ್ಯಕ್ಷರಾದ ಹೆಚ್ ಯೋಗಾರಮೇಶ್ ಅವರು ಪಾರಸನಹಳ್ಳಿ ಗ್ರಾಮಕ್ಕೆ ಬೇಟಿ ನೀಡಿ ಸಮಸ್ಯೆಯ ಬಗ್ಗೆ  ಮಾಧ್ಯಮದ ಮೂಲಕ ತಾಲ್ಲೂಕು ಆಡಳಿತ ಹಾಗೂ ಪಶು ಇಲಾಖೆ ಹಾಗೂ ಸರ್ಕಾರದ ಗಮನಕ್ಕೆ ತಂದರೂ ಇದುವರೆಗೆ ಲಸಿಕೆ ಮತ್ತು ಔಷಧ ನೀಡುವಂತಹ ಯಾವುದೇ ಕ್ರಮ ಕೈಗೊಂಡಿಲ್ಲ.  ತಕ್ಷಣಕ್ಕೆ ಸಹಾಯ ಆಗುವಂತೆ ಅರಕಲಗೂಡು ಪೊಟ್ಯಾಟೋ ಕ್ಲಬ್ ವತಿಯಿಂದ ಕಾಲು ಬಾಯಿ ಜ್ವರಕ್ಕೆ ಪಾರಸನಹಳ್ಳಿ ಮತ್ತು ಮುತ್ತಿಗೆ ಗ್ರಾಮದ ಜಾನುವಾರುಗಳಿಗೆ ಉಚಿತವಾಗಿ ಔಷಧಿಯನ್ನು ನೀಡಲಾಗಿದೆ.  ಇಲಾಖೆಯ ನಿರ್ಲಕ್ಷ್ಯದಿಂದ ಸಮಯಕ್ಕೆ ಸರಿಯಾಗಿ ಲಸಿಕೆ ಮತ್ತು ಔಷಧೀಯಗಳು ಸಿಗದ ಕಾರಣ  ಇದುವರೆಗೆ ಇಪ್ಪತ್ತಕ್ಕೂ ಹೆಚ್ಚು ಹಸುಗಳು ಕಾಲು ಬಾಯಿ ರೋಗಕ್ಕೆ ತುತ್ತಾಗಿದ್ದು ಇನ್ನೂ ಕೆಲವು ಜಾನುವಾರುಗಳು ಕಾಲು ಬಾಯಿ ಜ್ವರದಿಂದ ನರಳುತ್ತಿದ್ದಾವೆ. ಪಶು ಇಲಾಖೆಯ ನಿರ್ಲಕ್ಷ್ಯ ಹೀಗೆ ಮುಂದುವರೆದರೆ ಪಶುಗಳ ಮಾರಣ ಹೋಮವೇ ನಡೆಯುವುದರಲ್ಲಿ ಅನುಮಾನವೇ ಇಲ್ಲ. ಕೆಂದ್ರ ಸರ್ಕಾರದ ಯೋಜನೆಯ ಅಡಿಯಲ್ಲಿ ಜಾನುವಾರುಗ...

ಕಬ್ಬ ಬೆಳೆಗಾರರ ರೈತರ ಬೆಂಬಲಕ್ಕೆ ನಿಂತ ಹೆಚ್ ಯೋಗಾರಮೇಶ್ ನೇತೃತ್ವದ ಪೊಟ್ಯಾಟೋ ಕ್ಲಬ್.

ಇಮೇಜ್
ಕಬ್ಬು ಬೆಳೆಗಾರರ ರೈತರ ಬೆಂಬಲಕ್ಕೆ ನಿಂತ ಹೆಚ್ ಯೋಗಾರಮೇಶ್ ನೇತೃತ್ವದ ಪೊಟ್ಯಾಟೋ ಕ್ಲಬ್. ಮಂಡ್ಯ ಜಿಲ್ಲೆಯಲ್ಲಿರುವ ರಾಜ್ಯ ಸರ್ಕಾರದ  ಮೈ ಶುಗರ್ಸ್ ಏಕೈಕ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ತ್ವರಿತವಾಗಿ ಪುನರಾರಂಭಿಸಬೇಕು ಹಾಗೂ ಖಾಸಗಿಯವರ ನಿರ್ವಹಣೆಗೆ ನೀಡಬಾರದೆಂದು ಸರ್ಕಾರವನ್ನು ಆಗ್ರಹಿಸಲು, ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ವೇದಿಕೆ ಮತ್ತು ಸಮಾನ ಮನಸ್ಕ ರೈತ ಸಂಘಟನೆಗಳು ಇಂದು ನಡೆಸಿದ ಸಭೆಯಲ್ಲಿ ಹೆಚ್ ಯೋಗಾರಮೇಶ್ ಪಾಲ್ಗೊಂಡು ಸಭೆಯ ಆಶಯವನ್ನು ಪೊಟ್ಯಾಟೋ ಕ್ಲಬ್ ಬೆಂಬಲಿಸಿದೆ. ಈ ಸಭೆಯಲ್ಲಿ ರೈತ ಮುಖಂಡರಾದ ಸುನಂದ ಜಯರಾಂ ಅವರು ಮತ್ತು ಇತರೆ ರೈತ ಮುಖಂಡರು ಪಾಲ್ಗೊಂಡಿದ್ದರು. ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಕೊಂಡು, ಸರ್ಕಾರವೇ ಕಾರ್ಖಾನೆಯನ್ನು ಆರಂಭಿಸಲು ಕ್ರಮವಹಿಸ ಬೇಕು. ಖಾಸಗಿಯವರಿಗೆ ಕಾರ್ಖಾನೆಯನ್ನು ಪರಭಾರೆ ಮಾಡಬಾರದು. ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆಯನ್ನು ನಿಗದಿಗೊಳಿಸಿ, ರೈತರ ಹಿತ ಕಾಯಬೇಕೆಂದು ಒತ್ತಾಯಿಸಿದರು. #MandyaJillaRytaHitaRakshanaSamithi| #SunandaJayaram| #Mandya| #GovernmentOfKarnataka| #PotatoClub| #Arkalgud| #Hassan |#HYogaramesh| #MySugarsLtd | #SugarCaneFactory| #UmeshKathi |#BasavarajBommai |#SumalathaAmbarish |#Narayanagowda

ಕಬ್ಬ ಬೆಳೆಗಾರರ ರೈತರ ಬೆಂಬಲಕ್ಕೆ ನಿಂತ ಹೆಚ್ ಯೋಗಾರಮೇಶ್ ನೇತೃತ್ವದ ಪೊಟ್ಯಾಟೋ ಕ್ಲಬ್.

ಇಮೇಜ್
  ಕಬ್ಬ ಬೆಳೆಗಾರರ ರೈತರ ಬೆಂಬಲಕ್ಕೆ ನಿಂತ ಹೆಚ್ ಯೋಗಾರಮೇಶ್ ನೇತೃತ್ವದ ಪೊಟ್ಯಾಟೋ ಕ್ಲಬ್. ಮಂಡ್ಯ ಜಿಲ್ಲೆಯಲ್ಲಿರುವ ರಾಜ್ಯ ಸರ್ಕಾರದ  ಮೈ ಶುಗರ್ಸ್ ಏಕೈಕ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ತ್ವರಿತವಾಗಿ ಪುನರಾರಂಭಿಸಬೇಕು ಹಾಗೂ ಖಾಸಗಿಯವರ ನಿರ್ವಹಣೆಗೆ ನೀಡಬಾರದೆಂದು ಸರ್ಕಾರವನ್ನು ಆಗ್ರಹಿಸಲು, ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ವೇದಿಕೆ ಮತ್ತು ಸಮಾನ ಮನಸ್ಕ ರೈತ ಸಂಘಟನೆಗಳು ಇಂದು ನಡೆಸಿದ ಸಭೆಯಲ್ಲಿ ಹೆಚ್ ಯೋಗಾರಮೇಶ್ ಪಾಲ್ಗೊಂಡು, ಸಭೆಯ ಆಶಯವನ್ನು ಪೊಟ್ಯಾಟೋ ಕ್ಲಬ್ ಬೆಂಬಲಿಸಿದೆ. ಈ ಸಭೆಯಲ್ಲಿ ರೈತ ಮುಖಂಡರಾದ ಸುನಂದ ಜಯರಾಂ ಅವರು ಮತ್ತು ಇತರೆ ರೈತ ಮುಖಂಡರು ಪಾಲ್ಗೊಂಡಿದ್ದರು. ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಕೊಂಡು, ಸರ್ಕಾರವೇ ಕಾರ್ಖಾನೆಯನ್ನು ಆರಂಭಿಸಲು ಕ್ರಮವಹಿಸ ಬೇಕು. ಖಾಸಗಿಯವರಿಗೆ ಕಾರ್ಖಾನೆಯನ್ನು ಪರಭಾರೆ ಮಾಡಬಾರದು. ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆಯನ್ನು ನಿಗದಿಗೊಳಿಸಿ, ರೈತರ ಹಿತ ಕಾಯಬೇಕೆಂದು ಒತ್ತಾಯಿಸಿದರು. #MandyaJillaRytaHitaRakshanaSamithi| #SunandaJayaram| #Mandya| #GovernmentOfKarnataka| #PotatoClub| #Arkalgud| #Hassan |#HYogaramesh| #MySugarsLtd | #SugarCaneFactory| #UmeshKathi |#BasavarajBommai |#SumalathaAmbarish |#Narayanagowda

ಶುಂಠಿಗೆ 1500/- ಬೆಂಬಲ ಬೆಲ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಹೆಚ್ ಯೋಗಾರಮೇಶ್.

ಇಮೇಜ್
ಇಂದು ಅರಕಲಗೂಡು ಪೊಟ್ಯಾಟೋ ಕ್ಲಬ್ ಅಧ್ಯಕ್ಷರಾದ ಹೆಚ್ ಯೋಗಾರಮೇಶ್ ನೇತೃತ್ವದ ತಂಡ ಹಾಸನ ಜಿಲ್ಲಾಧಿಕಾರಿ ಆರ್ ಗೀರೀಶ್ ಅವರನ್ನು ಬೇಟಿ ಮಾಡಿ ಶುಂಠಿ ಮತ್ತು ಆಲೂಗಡ್ಡೆ  ಬೆಲೆ ಕುಸಿದಿದ್ದು ಶುಂಠಿ 60Kg ಚೀಲಕ್ಕೆ ಕನಿಷ್ಟ 1500/-  ಸೂಕ್ತ ಬೆಂಬಲ‌ ಬೆಲೆಯನ್ನು ಸರ್ಕಾರ ತಕ್ಷಣವೇ ಘೋಷಣೆ ಮಾಡುವಂತೆ ಸರ್ಕಾರಕ್ಕೆ ವರದಿ ನೀಡಬೇಕು.    ಹಾಗೂ ರೈತರು ಬೆಳೆದ ಶುಂಠಿ ಮತ್ತು ಆಲೂಗಡ್ಡೆ ಬೆಳೆ ಹಾಳಾಗಿದ್ದು ತಕ್ಷಣವೇ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ, ಶುಂಠಿ ಮತ್ತು ಆಲೂಗಡ್ಡೆ ಬೆಳೆ ನಷ್ಟ ಆಗಿರುವ ಬಗ್ಗೆ ಅಧಿಕಾರಿಗಳಿಂದ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ  ಸೂಕ್ತ ಬೆಳೆ ನಷ್ಟ  ಪರಿಹಾರವನ್ನು ನೀಡುವಂತೆ ಕ್ರಮ ಕೈಗೊಳ್ಳಬೇಕು. ಹಾಗೂ ಮುಂದಿನ ದಿನಗಳಲ್ಲಿ ದೃಢೀಕೃತ ಬಿತ್ತನೆ ಬೀಜದ ಶುಂಠಿಯನ್ನು ಸರ್ಕಾರದ ವತಿಯಿಂದಲೇ ಸಿದ್ದಪಡಿಸಿ ರೈತರಿಗೆ ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ  ಒತ್ತಾಯಿಸಿ ಮನವಿ ಮಾಡಲಾಯಿತು.  ಇದಕ್ಕೆ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಸ್ಪಂದಿಸಿದ್ದು ಕೂಡಲೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಂಡು ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದ್ದಾರೆ. ವರದಿ: ರಘು ಅರಕಲಗೂಡು

ಶುಂಠಿ ಬೆಲೆ ಕುಸಿತ: ರೈತರ ಹಿತ ಕಾಪಾಡುವಂತೆ ಹೆಚ್‌.ಯೋಗಾರಮೇಶ್ ನೇತೃತ್ವದಲ್ಲಿ ಸರ್ಕಾರಕ್ಕೆ ‌ಮನವಿ.

ಇಮೇಜ್
ಅರಕಲಗೂಡು: ಹೆಚ್‌.ಯೋಗಾರಮೇಶ್  ನೇತೃತ್ವದಲ್ಲಿ ಪೊಟ್ಯಾಟೋ ಕ್ಲಬ್ ಕಛೇರಿಯಲ್ಲಿ ಇಂದು ನಡೆದ ಶುಂಠಿ ಬೆಳೆಗಾರರ ರೈತರ ಸಂವಾದದಲ್ಲಿ ಶುಂಠಿ ಬೆಳೆಗಾರರ ರೈತರ ಸಂಕಷ್ಟದ ಬಗ್ಗೆ  ರೈತರೊಂದಿಗೆ ಸಮಸ್ಯೆಗಳನ್ನು ಚರ್ಚಿಸಲಾಯಿತು. ಶುಂಠಿ ಬೆಳೆಯಲು ಅನುಸರಿಸಬೇಕಾದ ವೈಜ್ಞಾನಿಕ ಕ್ರಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲಾಯಿತು. ಅರಕಲಗೂಡು ಪೊಟ್ಯಾಟೋ ಕ್ಲಬ್ ಅಧ್ಯಕ್ಷರಾದ ಹೆಚ್ ಯೋಗಾರಮೇಶ್ ಮಾತನಾಡಿ  ರೈತರು ಅರ್ಥಿಕವಾಗಿ ಸ್ವಲ್ಪ ಹಣ ಗಳಿಸಬಹುದು ಎಂದು ಪ್ರತಿ ವರ್ಷವೂ ಶುಂಠಿ ಬೆಳೆ ಬೆಳೆಯುತ್ತಿದ್ದಾರೆ. ಶುಂಠಿ ಔಷದೀಯ ಜೊತೆಗೆ ಆಹಾರಕ್ಕಾಗಿ ಹೆಚ್ಚಾಗಿ ಬಳಕೆ ಆಗುತ್ತಿದೆ. ಒಂದು ವರ್ಷ ಶುಂಠಿಗೆ ಒಳ್ಳೆಯ ಬೆಲೆ ಬಂದರೆ ಆ ವರ್ಷ ಶುಂಠಿಗೆ ಕಾಯಿಲೆ ಬಂದು ಉತ್ತಮ ಬೆಳೆ ಬಂದಿರುವುದಿಲ್ಲ. ಇದಕ್ಕೆ ಒಳ್ಳೆಯ ದೃಢೀಕೃತ ಬೀಜ ಇಲ್ಲದಿರುವುದೇ ಆಗಿದೆ. ಇದರಿಂದ ರೈತರು ಆರ್ಥಿಕವಾಗಿ ಪ್ರತಿ ವರ್ಷವೂ ಸಂಕಷ್ಟ  ಎದುರಿಸುವಂತಾಗಿದೆ ಎಂದರು.  ತಾಲ್ಲೂಕಿನಲ್ಲಿ ಪ್ರತಿ ಗ್ರಾಮದಲ್ಲೂ ಕನಿಷ್ಠ 50 ರಿಂದ 100 ಜನ ಶುಂಠಿ ಬೆಳೆಗಾರರು ಇದ್ದಾರೆ. ಇವರಿಗೆ ಒಂದೊಂದು ರೈತರಿಗೆ 2-3 ಲಕ್ಷ ನಷ್ಟ ಎಂದು ಅಂದಾಜು ಮಾಡಿದರೂ ಒಂದು ಗ್ರಾಮದಲ್ಲಿ 1 ರಿಂದ 2-3 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ತಾಲ್ಲೂಕಿನಲ್ಲಿ ಸಾವಿರಾರು ಕೋಟಿಗೂ ಅಧಿಕ ನಷ್ಟ ರೈತರಿಗೆ ಉಂಟಾಗಿದೆ.  ಈ ವರ್ಷ ಶುಂಠಿ ಬೆ...

ಅರಕಲಗೂಡು: ಶುಂಠಿಗೆ 1500/- ಬೆಂಬಲ ಬೆಲೆ ನೀಡುವಂತೆ ಹೆಚ್ ಯೋಗಾರಮೇಶ್ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ.

ಇಮೇಜ್
ಅರಕಲಗೂಡು: ಹೆಚ್‌.ಯೋಗಾರಮೇಶ್  ನೇತೃತ್ವದಲ್ಲಿ  ಪೊಟ್ಯಾಟೋ ಕ್ಲಬ್ ಕಛೇರಿಯಲ್ಲಿ ಇಂದು ನಡೆದ ಶುಂಠಿ ಬೆಳೆಗಾರರ ರೈತರ ಸಂವಾದದಲ್ಲಿ ಶುಂಠಿ ಬೆಳೆಗಾರರ ರೈತರ ಸಂಕಷ್ಟದ ಬಗ್ಗೆ  ರೈತರೊಂದಿಗೆ ಸಮಸ್ಯೆಗಳನ್ನು ಚರ್ಚಿಸಲಾಯಿತು. ಶುಂಠಿ ಬೆಳೆಯಲು ಅನುಸರಿಸಬೇಕಾದ ವೈಜ್ಞಾನಿಕ ಕ್ರಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲಾಯಿತು. ಪೊಟ್ಯಾಟೋ ಕ್ಲಬ್ ಅಧ್ಯಕ್ಷರಾದ ಹೆಚ್ ಯೋಗಾರಮೇಶ್ ಮಾತನಾಡಿ  ರೈತರು ಅರ್ಥಿಕವಾಗಿ ಸ್ವಲ್ಪ ಹಣ ಗಳಿಸಬಹುದು ಎಂದು ಪ್ರತಿ ವರ್ಷವೂ ಶುಂಠಿ ಬೆಳೆ ಬೆಳೆಯುತ್ತಿದ್ದಾರೆ. ಶುಂಠಿ ಔಷದೀಯ ಜೊತೆಗೆ ಆಹಾರಕ್ಕಾಗಿ ಹೆಚ್ಚಾಗಿ ಬಳಕೆ ಆಗುತ್ತಿದೆ.       ಇದುವರೆಗೂ ಯಾವ ಯುನಿವರ್ಸಿಟಿಗಳು ಸಹ ಒಂದೇ‌ ಒಂದು Kg ದೃಢೀಕೃತ ಬಿತ್ತನೆ ಶುಂಠಿ ಬೀಜವನ್ನು ಉತ್ಪಾ ಮಾಡುತ್ತಿಲ್ಲ‌. ಶುಂಠಿ ಬಗ್ಗೆ ಇದುವರೆಗೂ ಯಾವುದೇ ಅಧ್ಯಯನ ನಡೆಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು ಒಂದು ವರ್ಷ ಶುಂಠಿಗೆ ಒಳ್ಳೆಯ ಬೆಲೆ ಬಂದರೆ ಆ ವರ್ಷ ಶುಂಠಿಗೆ ಕಾಯಿಲೆ ಬಂದು ಉತ್ತಮ ಬೆಳೆ ಬಂದಿರುವುದಿಲ್ಲ. ಇದಕ್ಕೆ ಒಳ್ಳೆಯ ದೃಢೀಕೃತ ಬೀಜ ಇಲ್ಲದಿರುವುದೇ ಆಗಿದೆ. ಇದರಿಂದ ರೈತರು ಆರ್ಥಿಕವಾಗಿ ಪ್ರತಿ ವರ್ಷವೂ ಸಂಕಷ್ಟ  ಎದುರಿಸುವಂತಾಗಿದೆ ಎಂದರು. ಈ ವರ್ಷ ಶುಂಠಿ ಬೆಲೆ ಕುಸಿತ ಹಿನ್ನೆಲೆ ರೈತರು ಕಂಗಾಲಾಗಿದ್ದಾರೆ. ರೈತರು ತಮ್ಮ ಒಡವೆಗಳನ್ನು ಅಡ ಇಟ್ಟು,...