ರಾಮನಾಥಪುರ ತಂಬಾಕು ಮಂಡಳಿಯಲ್ಲಿ ವಿದೇಶಿ ಕಂಪನಿಗಳು ನೇರವಾಗಿ ರೈತರಿಂದ ತಂಬಾಕು ಖರೀದಿ ಮಾಡಬೇಕು. ಹೆಚ್ ಯೋಗಾರಮೇಶ್ ಒತ್ತಾಯ.
ಅರಕಲಗೂಡು: ವಿದೇಶಿ ಕಂಪನಿಗಳು ರಾಮನಾಥಪುರ ತಂಬಾಕು ಮಂಡಳಿಯಲ್ಲಿ ನೇರವಾಗಿ ಪಾಲ್ಗೊಂಡು ರೈತರಿಂದ ಹೊಗೆಸೊಪ್ಪು ಖರೀದಿಸಬೇಕೆಂದು ಹೆಚ್ ಯೋಗಾರಮೇಶ್ ಒತ್ತಾಯ. ರಾಮನಾಥಪುರ ತಂಬಾಕು ಮಂಡಳಿಗೆ ಪೊಟ್ಯಾಟೋ ಕ್ಲಬ್ ಅಧ್ಯಕ್ಷರಾದ ಯೋಗಾರಮೇಶ್ ಬೇಟಿ ನೀಡಿ ರೈತರ ಸಮಸ್ಯೆಯನ್ನು ಆಲಿಸಿ, ನಂತರ ಮಾತನಾಡಿ ರೈತರು ಬೆಳೆದ ತಂಬಾಕಿಗೆ ಸರಿಯಾದ ಬೆಲೆ ನೀಡದೆ ವಂಚಿಸಲಾಗುತ್ತಿದೆ. ITC ಕಂಪನಿಯೊಂದಿಗೆ ತಂಬಾಕು ಮಂಡಳಿ ಮತ್ತು ಸರ್ಕಾರ ಒಳಒಪ್ಪಂದ ಮಾಡಿಕೊಂಡು ಇರುವ ಆರೋಪಗಳಿಗೆ. ಇಲ್ಲಿ ಬಂದಿರುವ ಎಲ್ಲಾ ಕಂಪನಿಯು ITC ಕಂಪನಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿವೆ. ITC ಕಂಪನಿ ತಂಬಾಕು ಮಂಡಳಿಯನ್ನು ಹಿಡಿತದಲ್ಲಿ ಇಟ್ಟುಕೊಂಡಿದೆ. ಇದರಿಂದ ರೈತರಿಗ ಅನ್ಯಾಯ ಮಾಡಲಾಗುತ್ತಿದೆ. ವಿದೇಶಿ ಕಂಪನಿಗಳು ತಂಬಾಕು ಮಂಡಳಿಯಲ್ಲಿ ನೇರವಾಗಿ ಪಾಲ್ಗೊಂಡು ರೈತರಿಂದ ಹೊಗೆಸೊಪ್ಪು ಖರೀದಿಸಬೇಕು. ಹತ್ತು ಗ್ರಾಂ ಇರುವ ಒಂದು ಸಿಗರೇಟ್ ಪ್ಯಾಕ್ ಬೆಲೆ ₹165 ಇದೆ.ಆದರೆ ಒಂದು ಕೆ.ಜಿ. ಹೊಗೆಸೊಪ್ಪು ಬೆಲೆ 100 ರಿಂದ 165 ರೂ ಇದೆ. ಒಂದು Kg ಹೊಗೆಸೊಪ್ಪಿನಿಂದ ಸಾವಿರಾರು ಸಿಗರೇಟ್ ಮಾಡಿ ಮಾರಾಟ ಮಾಡಿ ಮಾರಾಟಗಾರರು ಆದಾಯ ಮಾಡಿಕೊಳ್ಳುತ್ತಿದ್ದಾರೆ. ಇದು ಯಾವ ರೀತಿಯ ನ್ಯಾಯ ಎಂದರು. ಆದರೆ ರೈತರು ಬೆಳೆದ ಹೊಗೆಸೊಪ್ಪಿಗೆ ಮಾತ್ರ ಉತ್ತಮ ಬೆಲೆ ನೀಡದೆ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲ...