ಪೋಸ್ಟ್‌ಗಳು

ಅಂಬೇಡ್ಕರ್‌ಗೆ ಗೌರವ ತಂದುಕೊಟ್ಟ ಏಕೈಕಾ ಪ್ರಧಾನಿ ನರೇಂದ್ರಮೋದಿ, ದಲಿತರು ಬಿಜೆಪಿಯನ್ನು ಬೆಂಬಲಿಸಿ : ಕೆ.ಶಿವರಾಮ್ ಮನವಿ.

ಇಮೇಜ್
ಅಂಬೇಡ್ಕರ್‌ಗೆ ಗೌರವ  ತಂದುಕೊಟ್ಟ ಏಕೈಕಾ ಪ್ರಧಾನಿ ನರೇಂದ್ರಮೋದಿ, ದಲಿತರು ಬಿಜೆಪಿಯನ್ನು ಬೆಂಬಲಿಸಿ : ಕೆ.ಶಿವರಾಮ್ ಮನವಿ. ಅರಕಲಗೂಡು  : ಸ್ವಾತಂತ್ರö್ಯ ಭಾರತದಲ್ಲಿ ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಗೌರವ  ತಂದುಕೊಟ್ಟ ಏಕೈಕಾ ಪ್ರಧಾನಿ ಹೆಮ್ಮೆಯ ನರೇಂದ್ರಮೋದಿಜೀ ಆಗಿದ್ದು,ದಲಿತ ಸಮಾಜದವರು ಬಿಜೆಪಿ ಪಕ್ಷವನ್ನು ಬೆಂಬಲಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ರಾಜ್ಯ ಬಿಜೆಪಿ ಮುಖಂಡ ಕೆ.ಶಿವರಾಮ್ ಮನವಿ ಮಾಡಿದರು. ಪಟ್ಟಣದ ಶ್ರೀಗುರು ವಿಜಯಸಿದ್ದ ಶಿವದೇವಾ ಮಂಗಳ ಮಂದಿರ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ಎಸ್‌ಸಿ,ಎಸ್ಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಪರಿಶಿಷ್ಟರಿಗೆ ನಿಜವಾದ ದೇವರು ಅಂಬೇಡ್ಕರ್ ಆಗಿದ್ದಾರೆ.ನಮ್ಮ ಆರಾಧ್ಯ ದೇವ ಅವರೇ ಆಗಿದ್ದಾರೆ.ಈ ಇತಿಹಾಸದಲ್ಲಿ ನಾವು ಎಷ್ಟು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದ್ದೇವೆ.ಬಾಬಾ ಸಾಹೇಬರಿಗೆ ಯಾರು ಗೌರವ ಕೊಡುತ್ತಾರೋ ಅವರಿಗೆ ನಮ್ಮ ಬೆಂಬಲ ಕೊಡಬೇಕಿದೆ.ಮೋದಿ ಅವರ ಸರಕಾರ ಬಂದ ಮೇಲೆ ದೇಹಲಿಯಲ್ಲಿ ಅಂಬೇಡ್ಕರ್ ಅವರ ಹೆಸರಿನಲ್ಲಿ ಅಂರರಾಷ್ಟಿçÃಯ ಕೇಂದ್ರ ಸ್ಥಾಪನೆ.ಅಂಬೇಡ್ಕರ್ ಅವರ ಸಮಾಧಿ,ವಾಸ ಮಾಡಿದ ಸ್ಥಳ,ದೀಕ್ಷಾ ಭೂಮಿ,ಸಂವಿಧಾನ ಬರೆದ ಸ್ಥಳ,ಓದಿದ ಸ್ಥಳವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.೬೦ವರ್ಷ ಸರಕಾರ ಮಾಡಿದ ಕಾಂಗ್ರೆಸ್‌ಗೆ ಯಾಕೆ ಈ ಸ್ಥಳಗಳನ್ನು ಅಭಿವೃದ್ಧಿಗೊಳಿಸ

ಅರಕಲಗೂಡು ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ರಸ್ತೆಗೆ‌ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮದ ಮಹಿಳೆಯರು.

ಇಮೇಜ್
ಅರಕಲಗೂಡು ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ರಸ್ತೆಗೆ‌ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮದ ಮಹಿಳೆಯರು. ಅರಕಲಗೂಡು ತಾಲ್ಲೂಕಿನ ಕಸಬಾ ಹೋಬಳಿಯ ವಡ್ಡರಹಳ್ಳಿ ಇಂದ ಭೈರಾಪುರ, ನೇರಲಹಳ್ಳಿ ಮತ್ತು ಇತರೆ ಗ್ರಾಮಗಳು ಹಾಗೂ ವಡ್ಡರಹಳ್ಳಿ ಗ್ರಾಮದವರ ತೋಟ ಮತ್ತು ಹೊಲ ಗದ್ದೆಗಳಿಗೆ  ಸಂಪರ್ಕ ಕಲ್ಪಿಸುವ ಗೊರೂರು ಬಲದಂಡೆ ನಾಲೆ ಏರಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ತಡೆಗೋಡೆಯೂ ಇಲ್ಲದೇ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಹಾಗೂ ಬಲದಂಡೆ ನಾಲೆಯಲ್ಲಿ ಉತ್ತಮವಾಗಿದ್ದ ಸೋಪಾನ ಕಟ್ಟೆ ಕಲ್ಲುಗಳನ್ನು ಕಿತ್ತು ಕಳಪೆ ರೀತಿಯಲ್ಲಿ ಅವೈಜ್ಞಾನಿಕವಾಗಿ ಸೋಪಾನ ಕಟ್ಟೆ ನಿರ್ಮಾಣ ಮಾಡಿದ್ದಾರೆ. ಗ್ರಾಮಸ್ಥರು ಬಟ್ಟೆ ಒಗೆಯಲು ತುಂಬಾ ತೋದರೆ ಆಗುತ್ತಿದೆ. ಅಲ್ಲದೇ ರಸ್ತೆಯಲ್ಲಿ ಓಡಾಡಲು ತೊಂದರೆ ಆಗುತ್ತಿದೆ ಎಂದು ವಡ್ಡರಹಳ್ಳಿ ಗ್ರಾಮಸ್ಥರು ರಸ್ತೆಯಲ್ಲಿ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.  ಹಲವು ಬಾರಿ ಶಾಸಕರಿಗೆ ಮನವಿ ಮಾಡಿದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಲಕ್ಷಾಂತರ ಹಣ ಖರ್ಚು ಮಾಡಿ ನಾಲೆ ಅಭಿವೃದ್ಧಿ ಮಾಡಲಾಗಿದೆ. ಕಳಪೆ ಕಾಮಗಾರಿ ಮಾಡುವ ಮೂಲಕ  ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗಿದೆ. ಕೂಡಲೇ ಶಾಸಕ ಎ.ಟಿ.ರಾಮಸ್ವಾಮಿ ಅವರು ಗಮನ ಹರಿಸಿ ಸಮಸ್ಯೆ ಬಗೆಹಿಸಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ಗ್ರಾಮಸ್ಥರೊಂದಿಗೆ ಜೊತೆಗೂಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಸ್ಥಳದಲ್ಲಿ ಮಾ

ಅರಕಲಗೂಡು ತಾಲ್ಲೂಕು ಕಛೇರಿ ಆವರಣದಲ್ಲಿ ಕೋವಿಡ್-19 ಸೊಂಕಿನಿಂದ ಮೃತಪಟ್ಟ 44 ಕುಟುಂಬದ ವಾರಸುದಾರರಿಗೆ ತಲಾ ಒಂದು ಲಕ್ಷದ ಚೆಕ್ ಅನ್ನು ಶಾಸಕರಾದ ಎ.ಟಿ.ರಾಮಸ್ವಾಮಿ ಅವರು ನೀಡಿದರು.

ಇಮೇಜ್
ಅರಕಲಗೂಡು ತಾಲ್ಲೂಕು ಕಛೇರಿ ಆವರಣದಲ್ಲಿ ಕೋವಿಡ್-19 ಸೊಂಕಿನಿಂದ ಮೃತಪಟ್ಟ 44 ಕುಟುಂಬದ ವಾರಸುದಾರರಿಗೆ ತಲಾ ಒಂದು ಲಕ್ಷದ ಚೆಕ್ ಅನ್ನು ಶಾಸಕರಾದ ಎ.ಟಿ.ರಾಮಸ್ವಾಮಿ ಅವರು ನೀಡಿದರು. ಎ.ಟಿ.ರಾಮಸ್ವಾಮಿ ಮಾತನಾಡಿ ಕೋವಿಡ್ -೧೯ ಸೊಂಕಿನಿಂದ ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟ ತಾಲ್ಲೂಕಿನ 44 ಕುಟುಂಬದ ವಾರಸುದಾರರಿಗೆ 44 ಲಕ್ಷದ ಚೆಕ್ ಗಳನ್ನು ಸರ್ಕಾರದ ವತಿಯಿಂದ  ನೀಡಲಾಗುತ್ತಿದೆ‌. ನೆನ್ನೆ ಅಸೆಂಬ್ಲಿ ಮುಗಿಯಿತು. ಮಲಗೋದು ರಾತ್ರಿ ಒಂದು ಗಂಟೆ ಆಗಿದೆ , ರಜಾ ದಿನವಾದ ಇಂದು ಸಹ ಕೆಲಸ ಮಾಡಬೇಕು ಹಣಕ್ಕಿಂತ ಕಾಲಕ್ಕೆ ಹೆಚ್ಚಿನ ಮಹತ್ವ ಕೊಟ್ಟು ನೊಂದ ಕುಟುಂಬಕ್ಕೆ ನೆರವಾಗಬೇಕು ಎಂದು ರಜಾ ದಿನವಾದ ಇಂದು ಸಹ ಕಾರ್ಯಕ್ರಮ ಇಟ್ಟುಕೊಂಡು ಚೆಕ್ ವಿತರಿಸಲಾಗುತ್ತಿದೆ. ನೆನ್ನೆ  ಸದನದಲ್ಲಿ ಇದ್ದಾಗ ನನ್ನ ಸ್ನೇಹಿತರು ಹೇಳಿದ್ರು ಇಂತಹ ಕಾಲದಲ್ಲಿ ನಿಮ್ಮಂತಹ ರಾಜಕಾರಣಿಗಳು ಆಯ್ಕೆಯಾಗುವುದು ಹೆಮ್ಮೆಯ ವಿಷಯ ಎಂದರು. ಈ ಹೆಮ್ಮೆ ನನಗಲ್ಲ, ನನ್ನನ್ನು ಆಯ್ಕೆ ಮಾಡಿದ ಜನರಿಗೆ ಈ ಮಹತ್ವ ಸಲ್ಲಬೇಕು ಎಂದಿದ್ದೇನೆ ಎಂದರು.  ಜನ ತಾಲ್ಲೂಕು ಕಛೇರಿಗೆ ಅಲೆದು ಅಲೆದು ಜನ ಸುಸ್ತು ಆಗಿದ್ದಾರೆ. ಕಂದಾಯ ಅದಾಲತ್ ಮಾಡಿ, ಸಣ್ಣ ಪುಟ್ಟ ಕೆಲಸಕ್ಕೆ ಜನರನ್ನು ಅಲೆಯದ ಹಾಗೆ ಮಾಡಿ ಆಗ ಜನ ನಿಮ್ಮನ್ನು ಪೂಜ್ಯ ಭಾವನೆಯಿಂದ ನೋಡುತ್ತಾರೆ. ಎಂದು ತಹಶಿಲ್ದಾರ್ ಅವರಿಗೆ ಕಿವಿಮಾತು ಹೇಳಿದರು. ಬೇರೆಯವರಿಗೆ ಅರಕಲಗೂಡು ತಾಲ್ಲೂಕು  ಮಾದರಿ ತಾಲ್ಲೂಕು

ಹಾಸನ:MLC ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಹೆಚ್.ಯೋಗಾರಮೇಶ್ ಪತ್ರಿಕಾಗೋಷ್ಠಿಯಲ್ಲಿ ಮನವಿ

ಇಮೇಜ್
ಅರಕಲಗೂಡು: ನಾಳೆ ಬಿಜೆಪಿ ಜನ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಭೆ. MLC  ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಅವರಿಗೆ ಮತ ನೀಡಿ  ಗೆಲ್ಲಿಸುವಂತೆ ಹೆಚ್.ಯೋಗಾರಮೇಶ್ ಪತ್ರಿಕಾಗೋಷ್ಠಿಯಲ್ಲಿ ಮನವಿ ಪತ್ರಿಕಾಗೋಷ್ಠಿಯಲ್ಲಿ ಹೆಚ್.ಯೋಗಾರಮೇಶ್ ಮಾತನಾಡಿ ಭಾರತೀಯ ಜನತಾ ಪಾರ್ಟಿ ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ರಾಜ್ಯಾಧ್ಯಕ್ಷರಾದ ನಳೀನ್‌ ಕುಮಾರ್ ಕಟೀಲ್‌ ನೇತೃತ್ವದಲ್ಲಿ, ಹಾಗೂ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ, ರವಿಕುಮಾರ್, ಜಿಲ್ಲಾಧ್ಯಕ್ಷರಾದ ಸುರೇಶ್ ಉಲ್ಲಹಳ್ಳಿ ಹಾಗೂ ಕಾರ್ಯಕರ್ತರ  ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದೇನೆ. ಪಕ್ಷವನ್ನು ಬಲಪಡಿಸಬೇಕು ಎಂಬ ದೃಷ್ಟಿಯಲ್ಲಿ ಕೆಲಸ ಮಾಡುತ್ತಿದ್ದು  ಹಾಸನ ಜಿಲ್ಲೆಯ ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕಿದೆ ಈ ನಿಟ್ಟಿನಲ್ಲಿ ನಾಳೆ ಸಭೆ ನಡೆಯಲಿದೆ. ಗ್ರಾಮಗಳ ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರದ ನರೇಂದ್ರ ಮೋದಿ ಸರ್ಕಾರ ಗ್ರಾಮ ಪಂಚಾಯತಿಯನ್ನು ಸದೃಢ ಮಾಡಬೇಕು ಎಂದು ಗ್ರಾಮ ಪಂಚಾಯಿತಿಗೆ ಅತಿ ಹೆಚ್ಚಿನ ಹಣ ಬಿಡುಗಡೆ ಮಾಡಿದೆ. ಇನ್ನು ಹೆಚ್ಚಿನ ಅಭಿವೃದ್ಧಿ ಮಾಡಲು ಭಾರತೀಯ ಜನತಾ ಪಾರ್ಟಿ ಬೆಂಬಲಿಸಬೇಕಿದೆ. ಈ ದೃಷ್ಟಿಯಿಂದ ಗ್ರಾಮ ಪಂಚಾಯತಿ ಸದಸ್ಯರಲ್ಲಿ ಮನವಿ ಮಾಡಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡುತ್ತೇನೆ. ನಮ್ಮ ಅರಕಲಗೂಡು ತಾಲ್ಲೂಕಿನಿಂದ ಬಿಜೆಪಿ ಬೆಂಬಲಿತ ಅ

ಹಿರಿಯಣ್ಣಕುಮಾರ್ ಮತ್ತು ಸಹ ಶಿಕ್ಷಕಿ ವೀಣಾ ಇವರಿಬ್ಬರನ್ನು ಕಡ್ಡಾಯವಾಗಿ ಶಣವಿನಕುಪ್ಪೆ ಶಾಲೆಯಲ್ಲಿಯೇ ಮುಂದುವರಿಸಬೇಕು.BEO ಗೆ ಪೋಷಕರ ಮನವಿ

ಇಮೇಜ್
ಹಿರಿಯಣ್ಣಕುಮಾರ್ ಮತ್ತು ಸಹ ಶಿಕ್ಷಕಿ ವೀಣಾ ಇವರಿಬ್ಬರನ್ನು ಕಡ್ಡಾಯವಾಗಿ ಶಣವಿನಕುಪ್ಪೆ ಶಾಲೆಯಲ್ಲಿಯೇ ಮುಂದುವರಿಸಬೇಕು. ಇಲ್ಲವಾದರೇ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ.ಇದಕ್ಕೆ ಅವಕಾಶ ಮಾಡಿ ಕೊಡಬಾರದು. BEO ಗೆ ಪೋಷಕರ ಮನವಿ. ಅರಕಲಗೂಡು : ತಾಲೂಕಿನ ಶಣವಿನಕುಪ್ಪೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿದ್ದು,ಕೂಡಲೇ ಅಗತ್ಯಶಿಕ್ಷಕರನ್ನು ನೇಮಿಸಬೇಕೆಂದು ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ. ಕರ್ತವ್ಯಲೋಪ ಹಿನ್ನೆಲೆ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಹಿರಿಯಣ್ಣಕುಮಾರ್ ಅವರ ವರ್ಗಾವಣೆಗೆ ಗ್ರಾಪಂ ಸದಸ್ಯರು ಕ್ಷೇತ್ರಶಿಕ್ಷಣಾಧಿಕಾರಿಗೆ ದೂರು ನೀಡಿದ್ದರು.ಇದರ ಅನ್ವಯ ಬಿಇಒ ಶಾಲೆಗೆ ಭೇಟಿನೀಡಿ ವಿದ್ಯಾರ್ಥಿಗಳು.ಪೋಷಕರುಗಳ ಸಭೆ ನಡೆಸಿ ವಾಸ್ತವತೆಯನ್ನು ತಿಳಿದುಕೊಂಡಿದ್ದಾರೆ. ಇದಾದ ಬಳಿಕ ಹಿರಿಯಣ್ಣಕುಮಾರ್ ರಜೆ ಮೇಲೆ ಹೋಗಿದ್ದಾರೆ.ಇರುವ ಇಬ್ಬರು ಶಿಕ್ಷಕರಿಂದ ೯೦ಮಕ್ಕಳಿಗೆ ಪಾಠಪ್ರವಚನ ಸರಿಯಾಗಿ ಆಗುತ್ತಿಲ್ಲ.ಮಕ್ಕಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ಪ್ರಭಾರಿ ಮುಖ್ಯಶಿಕ್ಷಕರಾದ ಹಿರಿಯಣ್ಣಕುಮಾರ್ ಮತ್ತು ಸಹ ಶಿಕ್ಷಕಿ ವೀಣಾ ಅವರುಗಳು ನೀಡುತಿದ್ದಾರೆ.ಇವರಿಬ್ಬರನ್ನು ಕಡ್ಡಾಯವಾಗಿ ಶಣವಿನಕುಪ್ಪೆ ಶಾಲೆಯಲ್ಲಿಯೇ ಮುಂದುವರಿಸಬೇಕು.ಇಲ್ಲವಾದರೇ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ.ಇದಕ್ಕೆ ಅ

ರಾಮನಾಥಪುರ ತಂಬಾಕು ಮಂಡಳಿಯಲ್ಲಿ ವಿದೇಶಿ ಕಂಪನಿಗಳು ನೇರವಾಗಿ ರೈತರಿಂದ ತಂಬಾಕು ಖರೀದಿ ಮಾಡಬೇಕು. ಹೆಚ್ ಯೋಗಾರಮೇಶ್ ಒತ್ತಾಯ.

ಇಮೇಜ್
ಅರಕಲಗೂಡು: ವಿದೇಶಿ ಕಂಪನಿಗಳು ರಾಮನಾಥಪುರ ತಂಬಾಕು ಮಂಡಳಿಯಲ್ಲಿ ನೇರವಾಗಿ ಪಾಲ್ಗೊಂಡು ರೈತರಿಂದ ಹೊಗೆಸೊಪ್ಪು ಖರೀದಿಸಬೇಕೆಂದು ಹೆಚ್ ಯೋಗಾರಮೇಶ್ ಒತ್ತಾಯ. ರಾಮನಾಥಪುರ ತಂಬಾಕು ಮಂಡಳಿಗೆ ಪೊಟ್ಯಾಟೋ ಕ್ಲಬ್ ಅಧ್ಯಕ್ಷರಾದ ಯೋಗಾರಮೇಶ್ ಬೇಟಿ ನೀಡಿ ರೈತರ ಸಮಸ್ಯೆಯನ್ನು ಆಲಿಸಿ, ನಂತರ ಮಾತನಾಡಿ  ರೈತರು ಬೆಳೆದ ತಂಬಾಕಿಗೆ ಸರಿಯಾದ ಬೆಲೆ ನೀಡದೆ ವಂಚಿಸಲಾಗುತ್ತಿದೆ‌. ITC ಕಂಪನಿಯೊಂದಿಗೆ ತಂಬಾಕು ಮಂಡಳಿ ಮತ್ತು ಸರ್ಕಾರ ಒಳ‌ಒಪ್ಪಂದ ಮಾಡಿಕೊಂಡು ಇರುವ ಆರೋಪಗಳಿಗೆ. ಇಲ್ಲಿ ಬಂದಿರುವ ಎಲ್ಲಾ ಕಂಪನಿಯು ITC ಕಂಪನಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿವೆ. ITC ಕಂಪನಿ  ತಂಬಾಕು ಮಂಡಳಿಯನ್ನು ಹಿಡಿತದಲ್ಲಿ ಇಟ್ಟುಕೊಂಡಿದೆ. ಇದರಿಂದ ರೈತರಿಗ ಅನ್ಯಾಯ ಮಾಡಲಾಗುತ್ತಿದೆ. ವಿದೇಶಿ ಕಂಪನಿಗಳು ತಂಬಾಕು ಮಂಡಳಿಯಲ್ಲಿ ನೇರವಾಗಿ ಪಾಲ್ಗೊಂಡು ರೈತರಿಂದ ಹೊಗೆಸೊಪ್ಪು ಖರೀದಿಸಬೇಕು. ಹತ್ತು ಗ್ರಾಂ ಇರುವ ಒಂದು ಸಿಗರೇಟ್ ಪ್ಯಾಕ್ ಬೆಲೆ ₹165 ಇದೆ.ಆದರೆ ಒಂದು ಕೆ.ಜಿ. ಹೊಗೆಸೊಪ್ಪು ಬೆಲೆ 100 ರಿಂದ 165 ರೂ ಇದೆ.  ಒಂದು Kg ಹೊಗೆಸೊಪ್ಪಿನಿಂದ ಸಾವಿರಾರು ಸಿಗರೇಟ್ ಮಾಡಿ ಮಾರಾಟ ಮಾಡಿ ಮಾರಾಟಗಾರರು ಆದಾಯ ಮಾಡಿಕೊಳ್ಳುತ್ತಿದ್ದಾರೆ. ಇದು ಯಾವ ರೀತಿಯ ನ್ಯಾಯ ಎಂದರು. ಆದರೆ ರೈತರು ಬೆಳೆದ  ಹೊಗೆಸೊಪ್ಪಿಗೆ ಮಾತ್ರ ಉತ್ತಮ‌ ಬೆಲೆ ನೀಡದೆ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಯ

ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ACF ಉದ್ಘಾಟನೆ.

ಇಮೇಜ್
ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ACF ಉದ್ಘಾಟನೆ.  ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ACF ಕರ್ನಾಟಕ ಸಂಘಟನೆಯನ್ನು  ತಾಲೂಕಾ ಮಟ್ಟದಲ್ಲಿ ರಾಮದುರ್ಗ ಘಟಕದ ಆಂಟಿ ಕರಪ್ಶನ್ ಫೋರ್ಸ್ ACF ಭ್ರಷಾಚಾರ್ ನಿಗ್ರಹ್ ಸಮಿತಿಯನ್ನು   ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.  ACF ಕರ್ನಾಟಕ ರಾಮದುರ್ಗ ಘಟಕದ ಉದ್ಘಾಟನಾ ಸಮಾರಂಭವನ್ನು ರಾಮದುರ್ಗದ ರಾಣಿ ಚನ್ನಮ್ಮ ಶಾಲಾ ಆವರಣದಲ್ಲಿ ಮಾಡಲಾಯಿತು.  ACF ಕರ್ನಾಟಕ ರಾಮದುರ್ಗ ಘಟಕದ ಲೋಗೋವನ್ನು  ACF ಬೆಳಗಾವಿ ಜಿಲ್ಲಾ ಅಧ್ಯಕ್ಷರು  ಶ್ರೀ ಬಿ ಎಚ್ ಜಮಾದಾರ  ಹಾಗೂ ಅಥಿತಿಗಳಿಂದ್ ಬಿಡುಗಡೆ ಮಾಡಲಾಯಿತು.  ಹಾಗೂ ಉದ್ಘಾಟನಾ ಸಮಾರಂಭಕೆ ಆಗಮಿಸಿದ್ ಅಥಿತಿಗಳಿಗೆ ಪ್ರಾರಂಬದಲ್ಲಿ ಮಾಲಾರ್ಪಣೆ ಮಾಡಿ ನಂತರ ಸನ್ಮಾನ ಮಾಡಲಾಯಿತು. ಹಾಗೂ ಸಾರ್ವಜನಿಕರಿಗೆ ಸರಕಾರದಿಂದ್ ಬರುವಂತೆಹ್ 126 ಯೋಜನೆಗಳನ್ನು ಉಚಿತವಾಗಿ ತಮ್ಮ್ ತಮ್ಮ್ ಮನೆಗೆ ತಲುಪುವ ವ್ಯವಸ್ಥೆ ನಮ್ಮ್ ACF ಸಮಿತಿ ಉಚಿತವಾಗಿ ಮಾಡುತ್ತದೆ ಎಂದು ಭರವಸೆ ನೀಡಿದರು .  ಈ ಸಂಧರ್ಭದಲ್ಲಿ ಶ್ರೀ ಮ್ ನಿ ಪ್ರ ಸ್ವ್ ಶಿವಮೂರ್ತಿ ಮಹಾಸ್ವಾಮಿಗಳು ಶ್ರೀ ಫಲಹಾರೇಶ್ವರ ಮಠ ಅವರಾದಿ ಶ್ರೀ ಶಿವಪಜ್ಜ ಸ್ವಾತಿಗಳು ಜಾಲಿಕಟ್ಟಿ ACF ಬೆಳಗಾವಿ ಜಿಲ್ಲಾ   ಶ್ರೀ ಬಿ ಎಚ್ ಜಮಾದಾರ ರವಿ ಸರ್ ಹಾಗೂ ಮನಿಶಿಂಗ್ ACF ರಾಮದುರ್ಗ  ತಾಲೂಕಾ ಅಧ್ಯಕ್ಷರಾದ ಮಂಜುನಾಥ್ ಕಲಾದಗಿ ರಾಮದುರ್ಗ ದಂಡಾಧಿಕಾರಿಗಳಾದ ಶ್ರೀ ಮಲ್ಲಿಕಾರ್ಜ