ಪೋಸ್ಟ್‌ಗಳು

ಆಗಸ್ಟ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೇಮಾವತಿ ನದಿ ಅಣೆಕಟ್ಟಿನ ಇಂದಿನ ನೀರಿನ‌ ಮಟ್ಟ

Sir, HEMAVATHI RESERVOIR  Dt- 31-08-2020  6.00 AM  Max Levl: 2922.00 ft Today's lvl :2920.53 ( 2921.57 )ft, Max Cap: 37.103 TMC  Today's cap: 35.68 ( 36.68 ) Tmc Live  cap : 31.31 ( 32.31 )Tmc   Inflow: 2492 ( 4203 )Cus, Outflow River: 1200 ( 500 ) cus. Canals- LBC : 3200 (3200) cus, RBC :   330(300) Cus, HRBHLC: 500(475) Cus, Total out flow : 5230 ( 4475 ) cus   note: corresponding last year readings are shown in bracket.

ತಂಬಾಕು ಮನೆಗೆ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಮನೆ

ಇಮೇಜ್
ರಾಮನಾಥಪುರ ಹೋಬಳಿಯ ಮಲ್ಲಾಪುರ ಊರಿನ ತಂಬಾಕು  ಬ್ಯಾರನ್ ಮನೆಗೆ ಆಕಸ್ಮಿಕ ಬೆಂಕಿ . ಮಲ್ಲಾಪುರ ಗ್ರಾಮದ ಮಲ್ಲೇಶ್ ರವರಿಗೆ ಸೇರಿದ ತಂಬಾಕು ಬ್ಯಾರನ್ ಮನೆಗೆ ಹೊಗೇಸಪ್ಪು ಬೇಯಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ  ಮನೆ‌‌ ಸಂಪೂರ್ಣ ಸುಟ್ಟು ಬಸ್ಮವಾಗಿದೆ.  ಹೊಗೆಸೊಪ್ಪು ಬ್ಯಾರನ್ ಮನೆಗೆ ಬೆಂಕಿ ಬಿದ್ದ ಪರಿಣಾಮ ಬೇಯಿಸುತ್ತಿದ್ದ ಹೋಗೆಸಪ್ಪು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅಲ್ಲದೇ ತಂಬಾಕು ಮನೆಯಲ್ಲಿದ್ದ ಕಡ್ಡಿ ಫೋಲ್ಸ್ ಹಾಗೂ ಮನೆಯ ಮೇಲ್ಛಾವಣಿಯು ಸಹ ಸಂಪೂರ್ಣವಾಗಿ ಹಾನಿಯಾಗಿದೆ . ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಆಗಲೇ ಮನೆ ಸಂಪೂರ್ಣವಾಗಿ ಸುಟ್ಟ ಹೋಗಿದೆ. ಇದರಿಂದ ಮಲ್ಲೇಶ್ ಎಂಬುವರಿಗೆ ಸುಮಾರು 6 ರಿಂದ 7 ಲಕ್ಷಗಳಷ್ಟು ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.  ತಂಬಾಕು ಮನೆ ಸುಟ್ಟು ಹೋಗಿದ್ದರಿಂದ ಅಲ್ಪ ಸ್ವಲ್ಪ ಪರಿಹಾರ ಬರುತ್ತದೆ ಆದರೂ ಇದು ಸಂಪೂರ್ಣವಾಗಿ ರೈತರ  ನಷ್ಟವನ್ನು ತುಂಬಲು ಸಾಧ್ಯವಿಲ್ಲ ಎಂಬುದು ನೋವಿನ ಸಂಗತಿ

ಅರಕಲಗೂಡು ಪೇಟೆ ಮಾಚಗೌಡನಹಳ್ಳಿ‌‌ ಬಳಿ ರಸ್ತೆ ಅಪಘಾತ.

ಇಮೇಜ್
ಅರಕಲಗೂಡು ಪೇಟೆ ಮಾಚಗೌಡನಹಳ್ಳಿ ಬಳಿ  ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಸವಾರ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಹೆಚ್ಚಿನ ಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೇ   ಬೈಕ್ ಸವಾರ‌ ಪ್ರಜ್ಞೆ ತಪ್ಪಿದ್ದಾನೆ. ಅರಕಲಗೂಡು  ಪಟ್ಟಣದಲ್ಲಿ ಇರುವ ಅಂಚೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಂಜುಶೆಟ್ಟಿ‌ ಎಂದು ಗುರುತಿಸಲಾಗಿದೆ. ಅರಕಲಗೂಡು ತಾಲ್ಲೂಕಿನ  ದೊಡ್ಡಮಗ್ಗೆಯ ಗ್ರಾಮದವರು. ಎಂದು ಹೇಳಲಾಗಿದೆ.   ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ   ಮಂಜು ಶೆಟ್ಟಿ ರವರನ್ನು ಹಾಸನ ಜಿಲ್ಲಾಸ್ಪತ್ರೆ ಇಂದ  ರವಾನಿಸಲಾಗಿದೆ. ಮಧ್ಯಾಹ್ನದಿಂದಲೂ ರಸ್ತೆ ಮಧ್ಯದಲ್ಲಿಯೇ ನಿಂತಿದ್ದ ಲಾರಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಪಂಕ್ಚರ್ ಆಗಿದ್ದ ಲಾರಿಯನ್ನು ಮಧ್ಯಾಹ್ನದಿಂದಲೂ ತೆರವುಗೊಳಿಸದೇ ರಸ್ತೆಯಲ್ಲಿ ನಿಲ್ಲಿಸಿಕೊಂಡಿದ್ದ ಎಂದು ಸ್ಥಳಿಯರು ಹೇಳುತ್ತಿದ್ದು ಲಾರಿಯ ಹಿಂಬದಿಯಲ್ಲಿ ಯಾವುದೇ ರೇಡಿಯಂ ಪಲಕ ಹಾಕದೇ ಇದ್ದುದ್ದರಿಂದಲೇ  ರಾತ್ರಿ ಸಮಯದಲ್ಲಿ ನಿಂತಿದ್ದ ಲಾರಿಯನ್ನು ಗುರುತಿಸಲು ಸಾಧ್ಯವಾಗಿಲ್ಲ.  ಆದ್ದರಿಂದಲೇ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.  ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಪೋಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.  ಇನ್ನು ಅಪಘಾತಕ್ಕೆ ಸಂಬಂದಿಸಿದಂತೆ ಅರಕಲಗೂಡು ‌ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಾಗಿರುತ್ತದೆ. 

ಬೆಳಗಾವಿಯಲ್ಲಿ ತಾರಕಕ್ಕೇರಿದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ವಿವಾದ.

ಇಮೇಜ್
ಬೆಳಗಾವಿಯಲ್ಲಿ ತಾರಕಕ್ಕೇರಿದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ವಿವಾದ..!  ಕನ್ನಡಿಗರ ಮೇಲೆ ಚಪ್ಪಲಿ ಎಸೆದ ಮರಾಠಿಗರು. ಶಿವಸೇನೆ ಕಾರ್ಯಕರ್ತರು ಬಂದ ಮೇಲೆ ಹೆಚ್ಚಾದ ಗಲಾಟೆ  ಮರಾಠಿಗಳ ಮೇಲೆ ಲಾಟಿ ಚಾರ್ಜ್ ಮಾಡಿದ  ಪೋಲೀಸರು  ಪಿರನವಾಡಿ ಬಳಿ ಸೂಕ್ತ  ಬಂದೂಬಸ್ತ್ ಮರಾಠಿ ಪುಂಡರ ವಿರುದ್ದ ಕನ್ನಡಿಗರ ಆಕ್ರೋಶ.

ಹೇಮಾವತಿ ನದಿಯ ಇಂದಿನ ನೀರಿನ ಮಟ್ಟ

Sir, HEMAVATHI RESERVOIR  Dt- 28-08-2020  6.00 AM  Max Levl: 2922.00 ft Today's lvl :2921.29 ( 2921.50 )ft, Max Cap: 37.103 TMC  Today's cap: 36.41 ( 36.61 ) Tmc Live  cap : 32.04 ( 32.24 )Tmc   Inflow: 3102 ( 4451 )Cus, Outflow River: 800 ( 500 ) cus. Canals- LBC : 3200 (3200) cus, RBC :   330(300) Cus, HRBHLC: 500(50) Cus, Total out flow : 4830 ( 4050 ) cus   note: corresponding last year readings are shown in bracket.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಅಂಬೇಡ್ಕರ್ ಧಾರವಾಹಿ ಪ್ರಚಾರ ಜಾಗೃತಿಗೆ ಅರಕಲಗೂಡಿನಲ್ಲಿ ಫ್ಲೆಕ್ಸ್ ಬ್ಯಾನರ್ ಅಳವಡಿಸಿದರು

ಇಮೇಜ್
ಅರಕಲಗೂಡು :: ಮಹಾನಾಯಕ ಧಾರವಾಹಿಯನ್ನು ಪ್ರಸಾರ ಮಾಡುತ್ತಿರುವ ಜೀ ಕನ್ನಡ ವಾಹಿನಿಯ ಎಲ್ಲಾ ಸಿಬ್ಬಂಧಿಗೂ ಹಾಗೂ ಕಾರ್ಯಕ್ರಮ ಪ್ರಧಾನ ಸಂಪಾಧಕರಾದ ರಾಘವೇಂದ್ರ ಹುಣುಸೂರ್ ರವರಿಗೂ  ನಾಡಿನ ಸಮಸ್ತ ನಾಗರೀಕರ ಪರವಾಗಿ ಕೃತಜ್ಞತೆ  ಅರ್ಪಿಸಿದ ಅಂಬೇಡ್ಕರ್ ಆಟೋ ಮಾಲೀಕರು ಮತ್ತು ಚಾಲಕರ ಸಂಘದಿಂದ  ಬಾಬಾಸಾಹೇಬ್ ಅಂದರೇ... ಕ್ರಾಂತಿ ಹೋರಾಟ   ಬಾಬಾಸಾಹೇಬರು ತನ್ನ ತತ್ವ ಸಿದ್ಧಾಂತಗಳ ವಿರುದ್ಧ ಎಂದೂ ಎಲ್ಲಿಯೂ ಯಾರಿಗೂ ರಾಜಿಯಾದವರಲ್ಲ ಅವರೂ ಏಕಾಂಗಿಯಾಗಿ ಹೋರಾಟ ಮಾಡಿದರೂ ಕೂಡಾ  ಎಂದಿಗೂ ಮಾರಾಟವಾಗಲಿಲ್ಲ  ಆದ್ದರಿಂದ ವಿಶ್ವವೇ ತಿರುಗಿ ನೋಡುವಂತ  ಪರಿವರ್ತನಾ ಕ್ರಾಂತಿ ಮಾಡಿದರೆಂದ . ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಅಂಬೇಡ್ಕರ್ ಧಾರವಾಹಿ ಪ್ರಚಾರ ಜಾಗೃತಿಗೆ ಫ್ಲೆಕ್ಸ್ ಬ್ಯಾನರ್ ಅಳವಡಿಸುವಿಕೆ ಸಂಧರ್ಭದಿ ಮಾತನಾಡಿದ ಅವರು  ಯಾವುದೇ ಧರ್ಮ ಜಾತಿ ಮೀರಿದ ಪ್ರಜ್ಞಾವಂತರು ಅಂಬೇಡ್ಕರ್ ಕುರಿತು ವಾಸ್ತವ ನೈಜ ಸತ್ಯ ಮಾತನಾಡುತ್ತಾರೆ  ಇದಕ್ಕೆ  ಜೀ ಕನ್ನಡ ವಾಹಿನಿ ಸರಿಗಮಪ ಕಾರ್ಯಕ್ರಮದಲ್ಲಿ ಸ್ವರಸಾಮ್ರಾಟ್ ಹಂಸಲೇಖರವರು ಬಾಬಾ ಸಾಹೇಬರ ಬಗ್ಗೆ ಆಡಿದ ಮಾತುಗಳೇ  ಸಾಕ್ಷಿ ಎಂದ ಅವರು ಇದುವರೆಗೂ ಕಾಲ್ಪನಿಕ ಕಟ್ಟು ಕಥೆ ರಂಜನೀಯ ಕಥೆಗಳ ಧಾರವಾಹಿ ನೀಡಿದ ವಾಹಿನಿಯು ಪ್ರಥಮಭಾರಿಗೆ ಕಿರುತೆರೆಯಲ್ಲೇ ಒಬ್ಬ ಸಾಧಕನ ನೈಜ ಬದುಕನ್ನು ಧಾರವಾಹಿಯಾಗಿ ಪ್ರಸಾರ ಮಾಡುತ್ತಿರುವ ಜೀ ವಾಹಿನಿಯ ಎಲ್ಲಾ ಸಿಬ್ಬಂಧಿಗೂ ಕಾರ್ಯಕ್ರಮ ಸಂಪಾ

ಅರಸೀಕಟ್ಟೆಯನ್ನು ಪ್ರವಾಸಿ ತಾಣವಾಗಿ ಮಾಡಲಾಗುವುದು

ಇಮೇಜ್
ಅರಕಲಗೂಡು:  ತಾಲ್ಲೂಕಿನ ಅರಸಿಕಟ್ಟೆ ಅಮ್ಮ ದೇವಾಲಯವನ್ನು ಪ್ರವಾಸಿಗರ ತಾಣವಾಗಿ ಅಭಿವೃದ್ಧಿ ಪಡಿಸಲು ಶಾಸಕ ಎ. ಟಿ. ರಾಮಸ್ವಾಮಿ ನಕ್ಷತ್ರ ವನ ಹಾಗೂ ನವಗ್ರಹ ವನ ನಿರ್ಮಾಣಕ್ಕೆ ಧಾರ್ಮಿಕ ಸಂಕೇತವಾದ ಅತ್ತಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು ನಂತರ ಮಾತನಾಡಿದ ಅವರು ತಾಲ್ಲೂಕಿನ ಶಕ್ತಿ ದೇವತೆಯಲ್ಲಿ ಒಂದಾದ  ಅರಸಿಕಟ್ಟೆ ಅಮ್ಮ ದೇವಾಲಯವು ರಾಜ್ಯಾದ್ಯಂತ ಭಕ್ತಾದಿಗಳನ್ನು ಹೊಂದಿದ್ದು ದೇವಾಲಯಕ್ಕೆ ಪ್ರತಿ ದಿನ ಸಾವಿರಾರು ಜನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಪೂಜೆ ಸಲ್ಲಿಸಿ ಪ್ರಸಾದ ತಯಾರಿಸಿ ದೇವರಿಗೆ ನೈವೇದ್ಯ ನೀಡಿ ನಂತರ ತಮ್ಮ ಕುಟುಂಬ ನೆಂಟರುಗಳ ಜೊತೆ ಕುಡಿ ಊಟ ಸೇವಿಸುವ ರೂಢಿಯಲ್ಲಿದೆ ಅದರಿಂದ ದೇವಾಲಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚತವಾಗಿ ಹಾಗೂ ಸುಂದರವಾದ ತಾಣವಾಗಿ ನಿರ್ಮಾಣ ಮಾಡುವ ಸದ್ದುಉದೇಶದಿಂದ ದೇವಸ್ಥಾನ ಸುತ್ತಲಿನ ಪ್ರದೇಶದಲ್ಲಿ ವಿವಿಧ ಬಗ್ಗೆ ಹೂವಿನ ಗಿಡ ಹಾಗೂ ಬಗ್ಗೆಯ  ಹಣ್ಣಿನ ಗಿಡ ನೆಡಲಾಗಿದೆ ಜೊತೆಗೆ ಧಾರ್ಮಿಕ ಕ್ಷೇತ್ರದ ಸಂಕೇತವಾದ ನಕ್ಷತ್ರ ವನ ಹಾಗೂ ನವಗ್ರಹ ವನ  ನಿರ್ಮಾಣ ಮಾಡಲು ಅರಣ್ಯ ಇಲಾಖೆ ವತಿಯಿಂದ ಅಗತ್ಯ ವಿವಿಧ  9 ನಮೂನೆಯ ಗಿಡಗಳನ್ನು ಇಂದು ನೆಡಲಾಯಿತ್ತು ಮತ್ತು ಕುಡಿಯುವ ನೀರು ವ್ಯವಸ್ಥೆ ಊಟ ತಯಾರಿಸಲು ಕೊಠಡಿಗಳು ಮತ್ತು ಹೈಟೆಕ್ ಶೌಚಾಲಯ ನಿರ್ಮಿಸಲು ಚಾಲನೆ ಮಾಡಲಾಗಿದೆ ಎಂದು ತಿಳಿಸಿದರು   ಜಿಲ್ಲಾ ವಲಯ ಅರಣ್ಯಾಧಿಕಾರಿ ಶಿವರಾಮ

ಹಾಸನ ಜಿಲ್ಲೆಯ ಇಂದಿನ ಕೊರೋನಾ ಪಾಸಿಟಿವ್ ಸಂಖ್ಯೆಗಳ ವಿವರ

ಇಮೇಜ್
ಹಾಸನ ಜಿಲ್ಲೆಯ ಇಂದಿನ ಕೊರೋನಾ ಪಾಸಿಟಿವ್ ಸಂಖ್ಯೆಗಳ ವಿವರ

ಪಟ್ಟಣದಲ್ಲಿ ಮದ್ಯದ ಅಂಗಡಿ ತೆರೆಯದಂತೆ ಮಹಿಳೆಯರಿಂದ ಶಾಸಕ ಎ.ಟಿ. ರಾಮಸ್ವಾಮಿಗೆ ಮನವಿ.

ಇಮೇಜ್
ಅರಕಲಗೂಡು : ಪಟ್ಟಣದಲ್ಲಿ ಸರ್ಕಾರಿ ಮದ್ಯ ಅಂಗಡಿ ( MSIL)  ತೆರೆಯದಂತೆ  ಒತ್ತಯಿಸಿ ಗೃಹಿಣಿ ಯರು ತಾಲ್ಲೂಕು ಅಬಕಾರಿ ಇಲಾಖೆ ಹಾಗೂ ಶಾಸಕ ಎ ಟಿ ರಾಮಸ್ವಾಮಿಗೆ ಮನವಿ ಸಲ್ಲಿಸಿದರು ಪಟ್ಟಣದ ಎರಡನೇ ವಾಡ್೯ನ  ಮಲ್ಲಿಪಟ್ಟಣ ರಸ್ತೆಯಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ಮಳಿಗೆಯಲ್ಲಿ ಸರ್ಕಾರದ MSIl ಮದ್ಯ ಅಂಗಡಿ ತೆರೆಯಲಾಗುತ್ತದೆ ಎಂಬ ಗಾಳಿ ಸುದ್ದಿಗೆ ಎಚ್ಚತ್ತ ವಾಡ್೯ ನ ಮಹಿಳೆಯರು ತಾಲ್ಲೂಕು ಅಬಕಾರಿ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಮತ್ತು ಸ್ಥಳೀಯ ಶಾಸಕ ಎ ಟಿ ರಾಮಸ್ವಾಮಿಯವರಿಗೆ ಮನವಿ ನೀಡುವ ಮುಖಾಂತರ ಮದ್ಯ ಅಂಗಡಿ ಪ್ರಾರಂಭಿಸಲು ಅವಕಾಶ ನೀಡಬಾರದು ಎಂದು ಕೇಳಿಕೊಡರು    ಮಲ್ಲಿಪಟ್ಟಣ ರಸ್ತೆಯಲ್ಲಿ ಈಗಾಗಲೇ ನಿವೇದಿತಾ ವಿದ್ಯಾ ಸಂಸ್ಥೆ ಹಾಗೂ ಕಂಚೀರಾಯ ಪ್ರೌಢಶಾಲೆ ಕಾರ್ಯ ನಡೆಸುತ್ತಿದ್ದು‌ ರಸ್ತೆಗೆ ಹೊಂದಿಕೊಂಡಂತೆ ಪುರಾತನ ಇತಿಹಾಸವುಳ್ಳ  ಕೋಟೆ ಕೊತ್ತಲು ಗಣಪತಿ ದೇವಸ್ಥಾನ ಅಮೃತೇಶ್ವರ ದೇವಸ್ಥಾನ ಹಾಗೂ ಲಕ್ಷ್ಮೀ ನರಸಿಂಹ ದೇವಾಲಯಗಳ ಜಾತ್ರೆ ಮತ್ತು ದಿನನಿತ್ಯ ಪೂಜೆಕೈಕಾರ್ಯ ಜರುಗುತ್ತಿರುವ ಸ್ಥಳಗಳಲ್ಲಿ  ಮದ್ಯ ಅಂಗಡಿ ತೆರೆಯುವುದು ಕಾನೂನು ಬಾಹಿರ ಎಂದು ‌ವಾರ್ಡ್ ನ  ಮಹಿಳೆಯರು  ಸಾರ್ವಜನಿಕವಾಗಿ ಪ್ರಶ್ನೆಸುತ್ತಿರುವುದು ಕಂಡು ಬಂತು  ವಾಡ್೯ನ ಪಟ್ಟಣ ಪಂಚಾಯತಿ  ಸದಸ್ಯೆ ಸುಮಿತ್ರಾ ಮಾತನಾಡಿ ರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚು ಕಡು ಬಡವರು   ವಾಸಿಸುತ್ತಿದ್ದು  ಇಂತಹ ಸ್ಥಳದಲ್ಲ

ಹಾಸನ ಜಿಲ್ಲೆಯಲ್ಲಿ ಇವತ್ತಿನ‌ ಕೊರೋನಾ ಪಾಸಿಟಿವ್ ಬಂದಿರುವ ವರದಿ

ಇಮೇಜ್
ಹಾಸನ ಜಿಲ್ಲೆಯಲ್ಲಿ  ಕೊರೋನಾ ಪಾಸಿಟಿವ್ ಬಂದಿರುವ ಇಂದಿನ ವರದಿ

ಇಂದಿನಿಂದ ನಿಗದಿಯಂತೆ ನಡೆಯಲಿದೆ KPSC ಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆ :

ಇಮೇಜ್
ಇಂದಿನಿಂದ ನಿಗದಿಯಂತೆ ನಡೆಯಲಿದೆ KPSC ಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆ :  ಅಭ್ಯರ್ಥಿಗಳು ತಪ್ಪದೇ ಈ ಮಾರ್ಗಸೂಚಿ ಅನುಸರಿಸಸಬೇಕು ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ ಗೆಜೆಟೆಡ್​ ಪ್ರೊಬೇಷನರಿ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ಇಂದಿನಿಂದ ನಿಗದಿಯಂತೆ ನಡೆಯಲಿದೆ. ಒಟ್ಟು 106 ಗೆಜೆಟೆಡ್​ ಪ್ರೊಬೇಷನರಿ ಹುದ್ದೆಗೆ ಈ ಪರೀಕ್ಷೆ ನಡೆಯಲಿದ್ದು, 1,65,258 ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದು ಪರೀಕ್ಷೆ ಬರೆಯಲು ಸಿದ್ದರಾಗಿದ್ದಾರೆ. ಕೊರೋನಾ ಸೊಂಕಿನ ಹಿನ್ನಲೆಯಲ್ಲಿ ಇಲಾಖೆಯಯ  ಮುಂಜಾಗ್ರತವಾಗಿ ಎಲ್ಲಾ ಕ್ರಮವನ್ನು ಹಾಗೂ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದೆ.  ಬೆಂಗಳೂರು, ಬೆಳಗಾವಿ, ಬಳ್ಳಾರಿ, ದಾವಣಗೆರೆ, ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ರಾಯಚೂರು ಮತ್ತು ಶಿವಮೊಗ್ಗ ಜಿಲ್ಲಾ  ಕೇಂದ್ರದಲ್ಲಿ ಪರೀಕ್ಷೆ ನಡೆಸಲಿದೆ. ಪರೀಕ್ಷಾ ಕೇಂದ್ರಗಳ ಸುತ್ತಲೂ 200ಮೀ ಆವರಣವನ್ನು ಆರಿಸಿ  ಕಲಂ 144ರ ಮೇರೆಗೆ ನಿರ್ಭಂದಿತ ಪ್ರದೇಶವೆಂದು ಘೋಷಿಸಲಾಗಿದೆ. ಸದರಿ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತಲೂ ಬೆಳಗ್ಗೆ 09 ರಿಂದ ಸಂಜೆ 5ರ ವರೆಗೆ ಜೆರಾಕ್ಸ್ ಸೆಂಟರ್ ಹಾಗೂ ಅನಧಿಕೃತ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶ ನಿಷೇಧಿಸಲಾಗಿದೆ‌.  ಕರೋನಾ ಸೋಂಕು ಹಿನ್ನಲೆಯಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ, ಪಿಯುಸಿಯ ಒಂದು ವಿಷಯದ ಪರೀಕ್ಷೆ ಹಾಗೂ ಸಿಇಟಿ ಪರೀಕ್ಷೆಗಳನ್ನು ಅತ್ಯಂತ ಯಶಸ್

ಹೇಮಾವತಿ ನದಿ ಅಣೇಕಟ್ಟಿನ ಇಂದಿನ‌ ನೀರಿನ ‌ಮಟ್ಟ

Sir, HEMAVATHI RESERVOIR  Dt- 23-08-2020  6.00 AM  Max Levl: 2922.00 ft Today's lvl :2921.50 ( 2921.60 )ft, Max Cap: 37.103 TMC  Today's cap: 36.62 ( 36.71 ) Tmc Live  cap : 32.24 ( 32.34 )Tmc   Inflow: 5963 ( 5463 )Cus, Outflow River: 2000 ( 2000 ) cus. Canals- LBC : 3100 (3100) cus, RBC :   300(300) Cus, HRBHLC: 500(-) Cus, Total out flow : 5900 ( 5400 ) cus   note: corresponding last year readings are shown in bracket.

ಕರ್ನಾಟಕ ರಾಜ್ಯದಲ್ಲಿ ಈವರೆಗೆ 271876 ಕ್ಕೆ ಏರಿದ ಕೊರೋನಾ ಸಂಕಿತರ ಸಂಖ್ಯೆ.

ಇಮೇಜ್
ಕರ್ನಾಟಕ ರಾಜ್ಯದಲ್ಲಿ ಈವರೆಗೆ 271876 ಕ್ಕೆ ಏರಿದ ಕೊರೋನಾ ಸಂಕಿತರ ಸಂಖ್ಯೆ.  ರಾಜ್ಯದಲ್ಲಿ ಇಂದು 7330 ಕೊರೋನಾ ಪಾಸಿಟಿವ್ ಸಂಖ್ಯೆ. ಇಂದು ಒಂದೇ ದಿನ  ರಾಜ್ಯದಲ್ಲಿ 7330 ಹೊಸ ಕೋವಿಡ್ 19 ಪ್ರಕರಣಗಳು ದಾಖಲಾಗಿದ್ದು ಆಸ್ಪತ್ರೆಯಿಂದ ಇಂದು  7626 ಜನ ಸೊಂಕು ಮುಕ್ತರಾಗಿ  ಬಿಡುಗಡೆಯಾಗಿದ್ದಾರೆ. ಈ ವರೆಗೆ ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 271876 ಆಗಿದ್ದು ಅದರಲ್ಲಿ ಈ ವರೆಗೆ 184568 ಜನ ಸೊಂಕಿನಿಂದ ಮುಕ್ತವಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಇನ್ನೂ ಸಹ ಸಕ್ರಿಯವಾಗಿ 82677 ಜನ ಸೊಂಕಿತರಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.  ರಾಜ್ಯದಲ್ಲಿ ಈ ವರೆಗೆ 4615 ಜನ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದರೆ 16 ಜನ ಅನ್ಯ ಕಾರಣಗಳಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇಂದು ಒಂದೇ ದಿನ ಕೋವಿಡ್ 19 ಕಾರಣದಿಂದ  93 ಜನ ಕೊರೋನಾ ಸೊಂಕಿಗೆ ಬಲಿಯಾಗಿದ್ದಾರೆ.

ಥೂ.. ನಿಮ್ ಯೋಗ್ಯತೆಗಿಷ್ಟು ಬೆಂಕಿ ಹಾಕ. ಸಚಿವ ಸುದಾಕರ್ ಗೆ ಮಹಿಳಾ ಛೀಮಾರಿ.

ಥೂ..  ನಿಮ್ ಯೋಗ್ಯತೆಗಿಷ್ಟು ಬೆಂಕಿ ಹಾಕ. ಸಚಿವ ಸುದಾಕರ್ ಗೆ  ಮಹಿಳಾ ವೈದ್ಯೆಯಿಂದ ಛೀಮಾರಿ.  ನಂಜನಗೂಡು ತಾಲ್ಲೂಕು  THO ನಾಗೆಂದ್ರ ಅವರು ಮೇಲಾಧಿಕಾರಿಗಳ ಕಿರುಕುಳದಿಂದ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಷಯಕ್ಕೆ ಸಂಬಂದಿಸಿದಂತೆ ಮನನೊಂದು ಮಹಿಳಾ ವೈದ್ಯಾಧಿಕಾರಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರಿಗೆ ಏಕವಚನದಲ್ಲಿಯೇ ಛೀಮಾರಿ ಹಾಕಿದ ಘಟನೆ ನಡೆದಿದೆ. 

ರಾಜ್ಯದಲ್ಲಿ ಇಂದು 7571 ಹೊಸ ಕೊರೋನಾ ಪಾಸಿಟಿವ್ ಸಂಖ್ಯೆ.

ಇಮೇಜ್
ಇಂದು ಒಂದೇ ದಿನ  ರಾಜ್ಯದಲ್ಲಿ 7571 ಹೊಸ ಕೋವಿಡ್ 19 ಪ್ರಕರಣಗಳು ದಾಖಲಾಗಿದ್ದು ಆಸ್ಪತ್ರೆಯಿಂದ ಇಂದು  6561 ಜನ ಸೊಂಕು ಮುಕ್ತರಾಗಿ  ಬಿಡುಗಡೆಯಾಗಿದ್ದಾರೆ. ಈ ವರೆಗೆ ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 264546  ಆಗಿದ್ದು ಅದರಲ್ಲಿ ಈ ವರೆಗೆ 176942 ಜನ ಸೊಂಕಿನಿಂದ ಮುಕ್ತವಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಇನ್ನೂ ಸಹ ಸಕ್ರಿಯವಾಗಿ 83066 ಜನ ಸೊಂಕಿತರಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.  ರಾಜ್ಯದಲ್ಲಿ ಈ ವರೆಗೆ 4522 ಜನ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದರೆ 16 ಜನ ಅನ್ಯ ಕಾರಣಗಳಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇಂದು ಒಂದೇ ದಿನ ಕೋವಿಡ್ 19 ಕಾರಣದಿಂದ  93 ಜನ ಕೊರೋನಾಗೆ ಬಲಿಯಾಗಿದ್ದಾರೆ.

ಅರಕಲಗೂಡಿನ ಹಿರಿಯ ವೈದ್ಯರಾಗಿದ್ದ ಡಾ. ಎ.ವಿ ಗುಂಡಪ್ಪ ಇಂದು ಸಂಜೆ ನಿಧನರಾಗಿದ್ದಾರೆ

ಇಮೇಜ್
ಮಾಜಿ ಪುರಸಭಾ ಸದಸ್ಯರಾಗಿದ್ದ ಇವರು  ಸೀತಾ ರಾಘವ  ಶಿಕ್ಷಣ ಸಂಸ್ಥೆ ಅಧ್ಯಕ್ಷ, ಜೇಸೀಸ್ ಅಧ್ಯಕ್ಷ ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಇವರ ಪತ್ನಿ ವಿಶಾಲಾಕ್ಷಮ್ಮ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ. ಇವರಿಗೆ  ನಾಲ್ವರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಬಿಟ್ಟು ಅಗಲಿದ್ದಾರೆ ಯಾವುದೇ ಕಾಯಿಲೆ ಇದ್ದರೂ ಗುಂಡೂಡಾಕ್ಟರ್ ಹತ್ತಿರ ಇಂಜೆಕ್ಷನ್ ತಗೊ ಗುಣಆಗುತ್ತೆ ಅನ್ನುವ ಕಾಲವಿತ್ತು ಅರಕಲಗೂಡಿನಲ್ಲಿ... ಎಂತಹ ಕಾಯಿಲೆಗೂ ಗುಂಡೂಡಾಕ್ಟರ್ ಇಂಜೆಕ್ಷನ್ ದಿವ್ಯೌಷಧ ವಾಗಿತ್ತು.. ಹಲವಾರು ವರುಷ ವೈದ್ಯಕೀಯ ಸೇವೆ ಯನ್ನು ಡಾ. ಗುಂಡಪ್ಪ ನವರು ಅರಕಲಗೂಡಿನಲ್ಲಿ ಸಲ್ಲಿಸಿದ್ದಾರೆ.. ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.. ಇವರು ಇಂದು ವಯೋಸಹಜ ಹಾಗೂ ಅನಾರೋಗ್ಯ ದಿಂದ ಮೃತರಾಗಿದ್ದಾರೆ.. ಮೃತರಿಗೆ ಅಂತಿಮ ನಮನಗಳು

ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ಲಾಟ್ ಪಾರಂಗಳನ್ನು ರೈತರು ಉಪಯೋಗಿಸಿಕೊಳ್ಳುವಂತೆ ಶಾಸಕ ಎ.ಟಿ.ರಾಮಸ್ವಾಮಿ ಸಲಹೆ.

ಇಮೇಜ್
ರಾಮನಾಥಪುರ-  ಗ್ರಾಮೀಣ ಪ್ರದೇಶದಲ್ಲಿ ಇಂತಹ ಕೃಷಿ ಮಾರುಕಟ್ಟೆಗಳು ಅತ್ಯವಶ್ಯವಾಗಿದೆ. ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಇಲ್ಲಿಯ ಫ್ಲಾಟ್ ಪಾರಂನ್ನು ಉಪಯೋಗ ಪಡೆದುಕೊಳ್ಳುವಂತೆ ಶಾಸಕ ಡಾ. ಎ.ಟಿ. ರಾಮಸ್ವಾಮಿ ಮನವಿ ಮಾಡಿದರು. ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ ಗ್ರಾಮ ಪಂಚಾಯತಿ ಅವರಣದಲ್ಲಿ ನರ್ಬಾಡ್ ಯೋಜನೆಯ ವತಿಯಿಂದ  75 ಲಕ್ಷ ರೂ ವೆಚ್ಚದಲ್ಲಿ  3 ಪ್ಲಾಟ್ ಪಾರಂಗಳು ಕೃಷಿ ಉತ್ಮನ್ನ ಮಾರುಕಟ್ಟೆವತಿಯಿಂದ ನಿರ್ಮಾಣದ ಉದ್ಘಾಟನಾ  ಪ್ರಾರಂಭದಲ್ಲಿ ಮಾತನಾಡಿದ ಅವರು ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ಇಲ್ಲಿ ವ್ಯವಸ್ಥೆ ಮಾಡುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.  ತಮ್ಮ  ದೈನಂದಿನ ಜೀವನದಲ್ಲಿ  ಹಬ್ಬಗಳು ಎಂದರೆ ಸಂಭ್ರಮ, ಸಂತೋಷ, ಒಂದೊಂದು ಹಬ್ಬವು ನಮ್ಮ ಹಿರಿಯರು ಹಾಕಿಕೊಟ್ಟ ಹಿನ್ನಲೆಯಲ್ಲಿ ಅಯಾ ಋತು ಮಾನಗಳ ಹೊಂದಿಕೆಗೆ ಅನುಗುಣವಾಗಿ ದೈನಂದಿನ  ಬದುಕಿನ ಬದುಕಿನ‌ ಜೊತೆಗೆ ಬಿಡುವಿನ ವೇಳೆಯಲ್ಲಿ ರೈತರು ತಾವು ಬೆಳೆದಿರುವ ತರಕಾರಿ, ಹಣ್ಣು ಹಪ್ಪಲಗಳನ್ನು ಎಂತಹ ಕೃಷಿ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡುವ ಮೂಲಕ ಉತ್ತಮ ಅದಾಯದ ಮೂಲಕ  ಹವ್ಯಾಸ ಗುಣಗಳನ್ನು ಅಳವಡಿಸಿಕೊಳ್ಳಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷರು ಸವೀತಾರಾಮ್,  ತಹಸಿಲ್ದಾರ್ ವೈ.ಎಂ. ರೇಣುಕುಮಾರ್, ಕಾರ್ಯನಿರ್ವಾಣಧಿಕಾರಿ ರವಿಕುಮಾರ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರ

ಸಾದನೆಗೈದ ಛಾಯಾಗ್ರಾಹಕರ ಮಕ್ಕಳಿಗೆ ಸನ್ಮಾನ

ಇಮೇಜ್
ಅರಕಲಗೂಡು:ಎಸ್,ಎಸ್,ಎಲ್,ಸಿ ಮತ್ತು ಪಿಯುಸಿ  ಪರೀಕ್ಷೆಯಲ್ಲಿ ಉತ್ತೀರ್ಣರಾದ ಛಾಯಾಗ್ರಹಕರ ಮಕ್ಕಳನ್ನು ಸನ್ಮಾನಿಸಲಾಯಿತು. ಪಟ್ಟಣದ ಕೋಟೆಯ ಕೊತ್ತಲು ಗಣಪತಿ ದೇವಸ್ಥಾನದ ಅವರಣದಲ್ಲಿ ನೆಡೆದ 181 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ತಿಂಗಳ ಮಾಸಿಕ ಸಭೆಯ  ಪ್ರಯುಕ್ತ ಛಾಯಾಗ್ರಹಕರ ಮಕ್ಕಳನ್ನು ಶಾಲು ಹೊದಿಸಿ ಹಾರ ಹಾಕುವ ಮೂಲಕ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅರಕಲಗೂಡು ತಾಲೂಕು ಛಾಯಾಗ್ರಹಕರ ಸಂಘದ ಗೌರವ ಅಧ್ಯಕ್ಷರಾದ ವಿರೂಪಾಕ್ಷ, ಹಿರಿಯ ಛಾಯಾಗ್ರಹಕರಾದ ಧರ್ಮಣ್ಣ,ರಂಗ ನಾಥ, ಕರುಣಾಕರ್,ರವಿಕುಮಾರ್, ಮಂಜಣ್ಣ,ಗುರುಮೂರ್ತಿ,ದೇವರಾಜು,ಮಂಜು,ಶೇಖರ್,ನಟರಾಜು,ಯಶವಂತ್,ಸುನಿಲ್,ಅಶೋಕ್,ವರುಣ್,ಲೋಕೇಶ್, ದಾಮೋದರ್, ಸಂಘದ ಅಧ್ಯಕ್ಷರಾದ ಶಿವಕುಮಾರ್, ಖಜಾಂಚಿ ಪ್ರಶಾಂತ್ ಇತರರು ಹಾಜರಿದ್ದರು. Active news Reporter by Raghu Arakalgud E-mail:raghuaryavardan@gmail.com