ಪೋಸ್ಟ್‌ಗಳು

ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಬುಧವಾರ ಭವಿಷ್ಯ ನುಡಿದರು

ಇಮೇಜ್
ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಬುಧವಾರ ಭವಿಷ್ಯ ನುಡಿದರು                              ಜಿಎಂ ಬಸಯ್ಯ  ನ್ಯಾಯಾಲಯದಲ್ಲಿನ ನ್ಯಾಯ ದೇವತೆ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚಿಗೊಂಡಿದ್ದಾಳೆ, ಜ್ಞಾನ ಜ್ಯೋತಿ ಹಚ್ಚಿಸುವಳು, ಲೋಕ ಸಮೃದ್ಧವಾಗುತ್ತದೆ ಎಂದು ಹಾಸನ ಜಿಲ್ಲೆಯ ಆರಸಿಕೇರಿ ತಾಲೂಕಿನ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಬುಧವಾರ ಭವಿಷ್ಯ ನುಡಿದರು. ಅವರು ಪಟ್ಟಣದ  ಇಂದು‌ಪೆಟ್ರೋಲ್ ಬಂಕ್ ಮಾಲೀಕ ಬಿಎಂ.ರ‍್ರಿಸ್ವಾಮಿ ತಂದೆ ಕುಮಾರಸ್ವಾಮಿ ರವರ ಮನೆಯಲ್ಲಿ ಹಮ್ಮಿಕೊಂಡಿದ್ದ ಕೋಡಿಮಠದ ಶ್ರೀಗಳ ಪಾದಪೂಜೆ ಕಾರ್ಯಕ್ರಮದ ನಂತರ ಮಾತನಾಡಿದರು. ಕುರುಗೋಡು ತಾಲೂಕಿನಲ್ಲಿ ಉತ್ತಮ ಮಳೆಯಾಗಿ ಮೆಣಸಿನಕಾಯಿ ಬೆಳೆಗಳು ಸಮೃದ್ಧಿಯಾಗಿ ಬೆಳೆದು ಉತ್ತಮ ಫಸಲು ಹಾಗೂ ಮಾರುಕಟ್ಟೆಯಲ್ಲಿ ಹೆಚ್ಚಿನ ಧರ ದೊರೆಯುತ್ತದೆ. ಇಲ್ಲಿನ ರೈತರು ಅಭಿವೃದ್ಧಿ ಹೊಂದುತ್ತಾರೆ ಎಂದರು. ಪ್ರಾರAಭದಲ್ಲಿ ಶ್ರೀಗಳಿಗೆ ಪಾದಪೂಜೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳಿಂದ ಭಕ್ತಿಯಿಂದ ಪೂಜೆ ಸಲ್ಲಿಸದರು. ನಂತರ ಕುರುಗೋಡು ಸೇರಿದಂತೆ ಸುತ್ತಮುತ್ತಲಿನ ಭಕ್ತರು ಶ್ರೀಗಳು ದರ್ಶನ ಪಡೆದು ಪುನೀತರಾದರು. ಈ ಸಂದರ್ಭದಲ್ಲಿ ಬಿಎಂ.ರ‍್ರಿಸ್ವಾಮಿ, ಬಿಎಂ.ಜಡೇಸ್ವಾಮಿ, ಗಣೇಶ್ ಸ್ವಾಮಿ ಸೇರಿದ...

ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು

ಇಮೇಜ್
ಇಮ್ಮಡಿ ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ 20 ರಂದು ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ದೀಕ್ಷಾ ರಜತ ಮಹೋತ್ಸವ ಜುಲೈ 20 ರಂದು ಗುರುಪೀಠದ ಆವರಣದಲ್ಲಿ ನಡೆಯಲಿದೆ ಎಂದು ಭೋವಿ ಸಮಾಜದ ಮುಖಂಡ ಪವನ್ ಕುಮಾರ್ ಶಿರ್ವ ತಿಳಿಸಿದರು... ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸುವವರು ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೃತಿ ಬಿಡುಗಡೆ ಮಾಡುವವರು ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಸಚಿವರಾದ ಶಿವರಾಜ್ ತಂಗಡಗಿ ಅಧ್ಯಕ್ಷತೆ ವಹಿಸುವವರು ,ಮಂತ್ರಾಲಯದ ಸುಭುಧೇಂದ್ರ ತೀರ್ಥರು ಹಾಗೂ ನಾಡಿನ ಮಠಾಧೀಶರು ಹಾಗೂ ಶಾಸಕರು ಭಾಗವಹಿಸುವವರು... ಸುಮಾರು 2‌ ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನೀರಿಕ್ಷೆ ಇದೆ...ತಾವೆಲ್ಲ ಭೋವಿ ಸಮಾಜದವರು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಭೋವಿ ಸಮಾಜ ಮುಖಂ ಡ ಪವನ್ ಕುಮಾರ್ ಶಿರ್ವ ಅವರು ಮಾಧ್ಯಮದ ಮುಖಾಂತರ ವಿನಂತಿ ಮಾಡಿದರು

ಅರಕಲಗೂಡು: ಮಲ್ಲಿಪಟ್ಟಣ ಗ್ರಾ.ಪಂ ಅಧ್ಯಕ್ಷ ಎಂ.ಆರ್.ರಂಗಸ್ವಾಮಿ ನೇತೃತ್ವದಲ್ಲಿ ಸಭೆ.

ಇಮೇಜ್
ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಗ್ರಾಪಂ ವತಿಯಿಂದ ಗ್ರಾಮಸಭೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರು ವಿವಿಧ ಸವಲತ್ತುಗಳನ್ನು ಕೋರಿ ಅರ್ಜಿ ಸಲ್ಲಿಸಿದರು. ಮಲ್ಲಿಪಟ್ಟಣದಲ್ಲಿ ಗ್ರಾಪಂ ವಾಣಿಜ್ಯ ಮಳಿಗೆಗಳ ಹರಾಜು ನಡೆಸಿ ಹಲವಾರು ವರ್ಷಗಳೇ ಕಳೆದಿದೆ. ಕೆಲವರು ಮಳಿಗೆಗಳನ್ನು ಹೆಚ್ಚು ಬಾಡಿಗೆ ವಸೂಲಿ ಮಾಡಿ ಪಂಚಾಯಿತಿ ಕಡಿಮೆ ಬಾಡಿಗೆ ಹಣ ಪಾವತಿಸುತ್ತಿದ್ದಾರೆ. ಇದರಿಂದ ಪಂಚಾಯಿತಿಗೆ ಬರಬೇಕಾದ ಲಾಭ ಕೈತಪ್ಪುತ್ತಿದೆ. ಮಳಿಗೆಗಳ ಮರು ಹರಾಜು ನಡೆಸಬೇಕು ಎಂದು ಗ್ರಾಮಸ್ಥರು ಸಭೆಯಲ್ಲಿ ಆಗ್ರಹಿಸಿದರು. ಗ್ರಾಪಂ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಮಾತನಾಡಿ, ಕಳೆದ ಬಾರಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿತ್ತು. ಕರೊನಾ ಕಾರಣದಿಂದಾಗ ಮಳಿಗಳ ವರ್ತಕರು ವ್ಯಾಪಾರವಾಗದೆ ನಷ್ಟದಲ್ಲಿದ್ದ ಕಾರಣ ಹರಾಜು ನಡೆಸುವುದನ್ನು ಕೈ ಬಿಡಲಾಯಿತು. ಮುಖ್ಯ ರಸ್ತೆಯ ಕೊಡ್ಲಿಪೇಟೆ ಇಲ್ಲವೇ ಶನಿವಾರ ಸಂತೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಲಿದೆ. ಇಂದಿಗೂ ಯಾವ ಮಾರ್ಗದಲ್ಲಿ ಹೈವೆ ಮಾರ್ಗ ನಿರ್ಮಾಣವಾಗಲಿದೆ ಎನ್ನುವ ಸ್ಪಷ್ಟ ಮಾಹಿತಿ ಇಲ್ಲ. ರಸ್ತೆ ನಿರ್ಮಾಣವಾದರೆ ಮಳಿಗೆಗಳನ್ನು ತೆರವುಗೊಳಿಸಬೇಕಾಗುತ್ತದೆ. ಹೀಗಾಗಿ ಹರಾಜು ನಡೆಸಲು ಸಾಧ್ಯವಾಗಿಲ್ಲ. ಈ ಕುರಿತು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು. ತೋಟಗಾರಿಕೆ ಇಲಾಖೆ ಅಧಿಕಾರಿ ಧನಂಜಯ ಮಾತನಾಡಿ, ಕೇಂದ್ರ ಮತ್...

ಹೆಚ್.ಯೋಗಾರಮೇಶ್ ಗೆ ಟಿಕೆಟ್ ನೀಡುವಂತೆ ಪದಾಧಿಕಾರಿಗಳು ಹಾಗೂ ಬೆಂಬಲಿಗರಿಂದ ಸಿಎಂಗೆ ಮನವಿ.

ಇಮೇಜ್
ಎ.ಟಿ.ರಾಮಸ್ವಾಮಿ ಬಿಜೆಪಿ ಸೇರ್ಪಡೆ  ಬೆನ್ನಲ್ಲೆ ಬಿಜೆಪಿ ಅರಕಲಗೂಡು ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಹೆಚ್.ಯೋಗಾರಮೇಶ್ ಆಪ್ತರ ತಂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಬೇಟಿ ಮಾಡಿ ಮಾತನಾಡಿದ್ದು ಹೆಚ್.ಯೋಗಾರಮೇಶ್ ಅವರು ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಜಿಲ್ಲೆಯಾಧ್ಯಂತ ಸಂಘಟನೆ ಮಾಡಿ ಬಿಜೆಪಿ ಪಕ್ಷ ಕಟ್ಟಿದ್ದಾರೆ. ಆದ್ದರಿಂದ ಪಕ್ಷಕ್ಕೆ ಯಾರೇ ಬಂದರೂ ಅರಕಲಗೂಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್  ಹೆಚ್.ಯೋಗಾರಮೇಶ್ ಅವರಿಗೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಪೂರಕವಾಗಿ ಸ್ಪಂದಿಸಿದ್ದು ಯೋಗಾರಮೇಶ್ ಅವರಿಗೆ ಅನ್ಯಾಯ ಆಗಲ್ಲ. ಪಕ್ಷ ಎಲ್ಲವನ್ನು ಗಮನಿಸುತ್ತಿದೆ.  ಯೋಗಾರಮೇಶ್ ಅವರ ಶ್ರಮ   ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ.

ಅಂಬೇಡ್ಕರ್‌ಗೆ ಗೌರವ ತಂದುಕೊಟ್ಟ ಏಕೈಕಾ ಪ್ರಧಾನಿ ನರೇಂದ್ರಮೋದಿ, ದಲಿತರು ಬಿಜೆಪಿಯನ್ನು ಬೆಂಬಲಿಸಿ : ಕೆ.ಶಿವರಾಮ್ ಮನವಿ.

ಇಮೇಜ್
ಅಂಬೇಡ್ಕರ್‌ಗೆ ಗೌರವ  ತಂದುಕೊಟ್ಟ ಏಕೈಕಾ ಪ್ರಧಾನಿ ನರೇಂದ್ರಮೋದಿ, ದಲಿತರು ಬಿಜೆಪಿಯನ್ನು ಬೆಂಬಲಿಸಿ : ಕೆ.ಶಿವರಾಮ್ ಮನವಿ. ಅರಕಲಗೂಡು  : ಸ್ವಾತಂತ್ರö್ಯ ಭಾರತದಲ್ಲಿ ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಗೌರವ  ತಂದುಕೊಟ್ಟ ಏಕೈಕಾ ಪ್ರಧಾನಿ ಹೆಮ್ಮೆಯ ನರೇಂದ್ರಮೋದಿಜೀ ಆಗಿದ್ದು,ದಲಿತ ಸಮಾಜದವರು ಬಿಜೆಪಿ ಪಕ್ಷವನ್ನು ಬೆಂಬಲಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ರಾಜ್ಯ ಬಿಜೆಪಿ ಮುಖಂಡ ಕೆ.ಶಿವರಾಮ್ ಮನವಿ ಮಾಡಿದರು. ಪಟ್ಟಣದ ಶ್ರೀಗುರು ವಿಜಯಸಿದ್ದ ಶಿವದೇವಾ ಮಂಗಳ ಮಂದಿರ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ಎಸ್‌ಸಿ,ಎಸ್ಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಪರಿಶಿಷ್ಟರಿಗೆ ನಿಜವಾದ ದೇವರು ಅಂಬೇಡ್ಕರ್ ಆಗಿದ್ದಾರೆ.ನಮ್ಮ ಆರಾಧ್ಯ ದೇವ ಅವರೇ ಆಗಿದ್ದಾರೆ.ಈ ಇತಿಹಾಸದಲ್ಲಿ ನಾವು ಎಷ್ಟು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದ್ದೇವೆ.ಬಾಬಾ ಸಾಹೇಬರಿಗೆ ಯಾರು ಗೌರವ ಕೊಡುತ್ತಾರೋ ಅವರಿಗೆ ನಮ್ಮ ಬೆಂಬಲ ಕೊಡಬೇಕಿದೆ.ಮೋದಿ ಅವರ ಸರಕಾರ ಬಂದ ಮೇಲೆ ದೇಹಲಿಯಲ್ಲಿ ಅಂಬೇಡ್ಕರ್ ಅವರ ಹೆಸರಿನಲ್ಲಿ ಅಂರರಾಷ್ಟಿçÃಯ ಕೇಂದ್ರ ಸ್ಥಾಪನೆ.ಅಂಬೇಡ್ಕರ್ ಅವರ ಸಮಾಧಿ,ವಾಸ ಮಾಡಿದ ಸ್ಥಳ,ದೀಕ್ಷಾ ಭೂಮಿ,ಸಂವಿಧಾನ ಬರೆದ ಸ್ಥಳ,ಓದಿದ ಸ್ಥಳವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.೬೦ವರ್ಷ ಸರಕಾರ ಮಾಡಿದ ಕಾಂಗ್ರೆಸ್‌ಗೆ ಯಾಕೆ ಈ ಸ್ಥಳಗಳನ್ನು ...

ಅರಕಲಗೂಡು ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ರಸ್ತೆಗೆ‌ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮದ ಮಹಿಳೆಯರು.

ಇಮೇಜ್
ಅರಕಲಗೂಡು ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ರಸ್ತೆಗೆ‌ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮದ ಮಹಿಳೆಯರು. ಅರಕಲಗೂಡು ತಾಲ್ಲೂಕಿನ ಕಸಬಾ ಹೋಬಳಿಯ ವಡ್ಡರಹಳ್ಳಿ ಇಂದ ಭೈರಾಪುರ, ನೇರಲಹಳ್ಳಿ ಮತ್ತು ಇತರೆ ಗ್ರಾಮಗಳು ಹಾಗೂ ವಡ್ಡರಹಳ್ಳಿ ಗ್ರಾಮದವರ ತೋಟ ಮತ್ತು ಹೊಲ ಗದ್ದೆಗಳಿಗೆ  ಸಂಪರ್ಕ ಕಲ್ಪಿಸುವ ಗೊರೂರು ಬಲದಂಡೆ ನಾಲೆ ಏರಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ತಡೆಗೋಡೆಯೂ ಇಲ್ಲದೇ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಹಾಗೂ ಬಲದಂಡೆ ನಾಲೆಯಲ್ಲಿ ಉತ್ತಮವಾಗಿದ್ದ ಸೋಪಾನ ಕಟ್ಟೆ ಕಲ್ಲುಗಳನ್ನು ಕಿತ್ತು ಕಳಪೆ ರೀತಿಯಲ್ಲಿ ಅವೈಜ್ಞಾನಿಕವಾಗಿ ಸೋಪಾನ ಕಟ್ಟೆ ನಿರ್ಮಾಣ ಮಾಡಿದ್ದಾರೆ. ಗ್ರಾಮಸ್ಥರು ಬಟ್ಟೆ ಒಗೆಯಲು ತುಂಬಾ ತೋದರೆ ಆಗುತ್ತಿದೆ. ಅಲ್ಲದೇ ರಸ್ತೆಯಲ್ಲಿ ಓಡಾಡಲು ತೊಂದರೆ ಆಗುತ್ತಿದೆ ಎಂದು ವಡ್ಡರಹಳ್ಳಿ ಗ್ರಾಮಸ್ಥರು ರಸ್ತೆಯಲ್ಲಿ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.  ಹಲವು ಬಾರಿ ಶಾಸಕರಿಗೆ ಮನವಿ ಮಾಡಿದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಲಕ್ಷಾಂತರ ಹಣ ಖರ್ಚು ಮಾಡಿ ನಾಲೆ ಅಭಿವೃದ್ಧಿ ಮಾಡಲಾಗಿದೆ. ಕಳಪೆ ಕಾಮಗಾರಿ ಮಾಡುವ ಮೂಲಕ  ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗಿದೆ. ಕೂಡಲೇ ಶಾಸಕ ಎ.ಟಿ.ರಾಮಸ್ವಾಮಿ ಅವರು ಗಮನ ಹರಿಸಿ ಸಮಸ್ಯೆ ಬಗೆಹಿಸಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ಗ್ರಾಮಸ್ಥರೊಂದಿಗೆ ಜೊತೆಗೂಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು...

ಅರಕಲಗೂಡು ತಾಲ್ಲೂಕು ಕಛೇರಿ ಆವರಣದಲ್ಲಿ ಕೋವಿಡ್-19 ಸೊಂಕಿನಿಂದ ಮೃತಪಟ್ಟ 44 ಕುಟುಂಬದ ವಾರಸುದಾರರಿಗೆ ತಲಾ ಒಂದು ಲಕ್ಷದ ಚೆಕ್ ಅನ್ನು ಶಾಸಕರಾದ ಎ.ಟಿ.ರಾಮಸ್ವಾಮಿ ಅವರು ನೀಡಿದರು.

ಇಮೇಜ್
ಅರಕಲಗೂಡು ತಾಲ್ಲೂಕು ಕಛೇರಿ ಆವರಣದಲ್ಲಿ ಕೋವಿಡ್-19 ಸೊಂಕಿನಿಂದ ಮೃತಪಟ್ಟ 44 ಕುಟುಂಬದ ವಾರಸುದಾರರಿಗೆ ತಲಾ ಒಂದು ಲಕ್ಷದ ಚೆಕ್ ಅನ್ನು ಶಾಸಕರಾದ ಎ.ಟಿ.ರಾಮಸ್ವಾಮಿ ಅವರು ನೀಡಿದರು. ಎ.ಟಿ.ರಾಮಸ್ವಾಮಿ ಮಾತನಾಡಿ ಕೋವಿಡ್ -೧೯ ಸೊಂಕಿನಿಂದ ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟ ತಾಲ್ಲೂಕಿನ 44 ಕುಟುಂಬದ ವಾರಸುದಾರರಿಗೆ 44 ಲಕ್ಷದ ಚೆಕ್ ಗಳನ್ನು ಸರ್ಕಾರದ ವತಿಯಿಂದ  ನೀಡಲಾಗುತ್ತಿದೆ‌. ನೆನ್ನೆ ಅಸೆಂಬ್ಲಿ ಮುಗಿಯಿತು. ಮಲಗೋದು ರಾತ್ರಿ ಒಂದು ಗಂಟೆ ಆಗಿದೆ , ರಜಾ ದಿನವಾದ ಇಂದು ಸಹ ಕೆಲಸ ಮಾಡಬೇಕು ಹಣಕ್ಕಿಂತ ಕಾಲಕ್ಕೆ ಹೆಚ್ಚಿನ ಮಹತ್ವ ಕೊಟ್ಟು ನೊಂದ ಕುಟುಂಬಕ್ಕೆ ನೆರವಾಗಬೇಕು ಎಂದು ರಜಾ ದಿನವಾದ ಇಂದು ಸಹ ಕಾರ್ಯಕ್ರಮ ಇಟ್ಟುಕೊಂಡು ಚೆಕ್ ವಿತರಿಸಲಾಗುತ್ತಿದೆ. ನೆನ್ನೆ  ಸದನದಲ್ಲಿ ಇದ್ದಾಗ ನನ್ನ ಸ್ನೇಹಿತರು ಹೇಳಿದ್ರು ಇಂತಹ ಕಾಲದಲ್ಲಿ ನಿಮ್ಮಂತಹ ರಾಜಕಾರಣಿಗಳು ಆಯ್ಕೆಯಾಗುವುದು ಹೆಮ್ಮೆಯ ವಿಷಯ ಎಂದರು. ಈ ಹೆಮ್ಮೆ ನನಗಲ್ಲ, ನನ್ನನ್ನು ಆಯ್ಕೆ ಮಾಡಿದ ಜನರಿಗೆ ಈ ಮಹತ್ವ ಸಲ್ಲಬೇಕು ಎಂದಿದ್ದೇನೆ ಎಂದರು.  ಜನ ತಾಲ್ಲೂಕು ಕಛೇರಿಗೆ ಅಲೆದು ಅಲೆದು ಜನ ಸುಸ್ತು ಆಗಿದ್ದಾರೆ. ಕಂದಾಯ ಅದಾಲತ್ ಮಾಡಿ, ಸಣ್ಣ ಪುಟ್ಟ ಕೆಲಸಕ್ಕೆ ಜನರನ್ನು ಅಲೆಯದ ಹಾಗೆ ಮಾಡಿ ಆಗ ಜನ ನಿಮ್ಮನ್ನು ಪೂಜ್ಯ ಭಾವನೆಯಿಂದ ನೋಡುತ್ತಾರೆ. ಎಂದು ತಹಶಿಲ್ದಾರ್ ಅವರಿಗೆ ಕಿವಿಮಾತು ಹೇಳಿದರು. ಬೇರೆಯವರಿಗೆ ಅರಕಲಗೂಡು ತಾಲ್ಲೂಕು...

ಹಾಸನ:MLC ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಹೆಚ್.ಯೋಗಾರಮೇಶ್ ಪತ್ರಿಕಾಗೋಷ್ಠಿಯಲ್ಲಿ ಮನವಿ

ಇಮೇಜ್
ಅರಕಲಗೂಡು: ನಾಳೆ ಬಿಜೆಪಿ ಜನ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಭೆ. MLC  ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಅವರಿಗೆ ಮತ ನೀಡಿ  ಗೆಲ್ಲಿಸುವಂತೆ ಹೆಚ್.ಯೋಗಾರಮೇಶ್ ಪತ್ರಿಕಾಗೋಷ್ಠಿಯಲ್ಲಿ ಮನವಿ ಪತ್ರಿಕಾಗೋಷ್ಠಿಯಲ್ಲಿ ಹೆಚ್.ಯೋಗಾರಮೇಶ್ ಮಾತನಾಡಿ ಭಾರತೀಯ ಜನತಾ ಪಾರ್ಟಿ ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ರಾಜ್ಯಾಧ್ಯಕ್ಷರಾದ ನಳೀನ್‌ ಕುಮಾರ್ ಕಟೀಲ್‌ ನೇತೃತ್ವದಲ್ಲಿ, ಹಾಗೂ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ, ರವಿಕುಮಾರ್, ಜಿಲ್ಲಾಧ್ಯಕ್ಷರಾದ ಸುರೇಶ್ ಉಲ್ಲಹಳ್ಳಿ ಹಾಗೂ ಕಾರ್ಯಕರ್ತರ  ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದೇನೆ. ಪಕ್ಷವನ್ನು ಬಲಪಡಿಸಬೇಕು ಎಂಬ ದೃಷ್ಟಿಯಲ್ಲಿ ಕೆಲಸ ಮಾಡುತ್ತಿದ್ದು  ಹಾಸನ ಜಿಲ್ಲೆಯ ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕಿದೆ ಈ ನಿಟ್ಟಿನಲ್ಲಿ ನಾಳೆ ಸಭೆ ನಡೆಯಲಿದೆ. ಗ್ರಾಮಗಳ ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರದ ನರೇಂದ್ರ ಮೋದಿ ಸರ್ಕಾರ ಗ್ರಾಮ ಪಂಚಾಯತಿಯನ್ನು ಸದೃಢ ಮಾಡಬೇಕು ಎಂದು ಗ್ರಾಮ ಪಂಚಾಯಿತಿಗೆ ಅತಿ ಹೆಚ್ಚಿನ ಹಣ ಬಿಡುಗಡೆ ಮಾಡಿದೆ. ಇನ್ನು ಹೆಚ್ಚಿನ ಅಭಿವೃದ್ಧಿ ಮಾಡಲು ಭಾರತೀಯ ಜನತಾ ಪಾರ್ಟಿ ಬೆಂಬಲಿಸಬೇಕಿದೆ. ಈ ದೃಷ್ಟಿಯಿಂದ ಗ್ರಾಮ ಪಂಚಾಯತಿ ಸದಸ್ಯರಲ್ಲಿ ಮನವಿ ಮಾಡಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡುತ್ತೇನೆ. ನಮ್ಮ ಅರಕಲಗೂಡು ತಾಲ್ಲೂಕಿನಿ...

ಹಿರಿಯಣ್ಣಕುಮಾರ್ ಮತ್ತು ಸಹ ಶಿಕ್ಷಕಿ ವೀಣಾ ಇವರಿಬ್ಬರನ್ನು ಕಡ್ಡಾಯವಾಗಿ ಶಣವಿನಕುಪ್ಪೆ ಶಾಲೆಯಲ್ಲಿಯೇ ಮುಂದುವರಿಸಬೇಕು.BEO ಗೆ ಪೋಷಕರ ಮನವಿ

ಇಮೇಜ್
ಹಿರಿಯಣ್ಣಕುಮಾರ್ ಮತ್ತು ಸಹ ಶಿಕ್ಷಕಿ ವೀಣಾ ಇವರಿಬ್ಬರನ್ನು ಕಡ್ಡಾಯವಾಗಿ ಶಣವಿನಕುಪ್ಪೆ ಶಾಲೆಯಲ್ಲಿಯೇ ಮುಂದುವರಿಸಬೇಕು. ಇಲ್ಲವಾದರೇ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ.ಇದಕ್ಕೆ ಅವಕಾಶ ಮಾಡಿ ಕೊಡಬಾರದು. BEO ಗೆ ಪೋಷಕರ ಮನವಿ. ಅರಕಲಗೂಡು : ತಾಲೂಕಿನ ಶಣವಿನಕುಪ್ಪೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿದ್ದು,ಕೂಡಲೇ ಅಗತ್ಯಶಿಕ್ಷಕರನ್ನು ನೇಮಿಸಬೇಕೆಂದು ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ. ಕರ್ತವ್ಯಲೋಪ ಹಿನ್ನೆಲೆ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಹಿರಿಯಣ್ಣಕುಮಾರ್ ಅವರ ವರ್ಗಾವಣೆಗೆ ಗ್ರಾಪಂ ಸದಸ್ಯರು ಕ್ಷೇತ್ರಶಿಕ್ಷಣಾಧಿಕಾರಿಗೆ ದೂರು ನೀಡಿದ್ದರು.ಇದರ ಅನ್ವಯ ಬಿಇಒ ಶಾಲೆಗೆ ಭೇಟಿನೀಡಿ ವಿದ್ಯಾರ್ಥಿಗಳು.ಪೋಷಕರುಗಳ ಸಭೆ ನಡೆಸಿ ವಾಸ್ತವತೆಯನ್ನು ತಿಳಿದುಕೊಂಡಿದ್ದಾರೆ. ಇದಾದ ಬಳಿಕ ಹಿರಿಯಣ್ಣಕುಮಾರ್ ರಜೆ ಮೇಲೆ ಹೋಗಿದ್ದಾರೆ.ಇರುವ ಇಬ್ಬರು ಶಿಕ್ಷಕರಿಂದ ೯೦ಮಕ್ಕಳಿಗೆ ಪಾಠಪ್ರವಚನ ಸರಿಯಾಗಿ ಆಗುತ್ತಿಲ್ಲ.ಮಕ್ಕಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ಪ್ರಭಾರಿ ಮುಖ್ಯಶಿಕ್ಷಕರಾದ ಹಿರಿಯಣ್ಣಕುಮಾರ್ ಮತ್ತು ಸಹ ಶಿಕ್ಷಕಿ ವೀಣಾ ಅವರುಗಳು ನೀಡುತಿದ್ದಾರೆ.ಇವರಿಬ್ಬರನ್ನು ಕಡ್ಡಾಯವಾಗಿ ಶಣವಿನಕುಪ್ಪೆ ಶಾಲೆಯಲ್ಲಿಯೇ ಮುಂದುವರಿಸಬೇಕು.ಇಲ್ಲವಾದರೇ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ.ಇದಕ್ಕೆ ಅ...

ರಾಮನಾಥಪುರ ತಂಬಾಕು ಮಂಡಳಿಯಲ್ಲಿ ವಿದೇಶಿ ಕಂಪನಿಗಳು ನೇರವಾಗಿ ರೈತರಿಂದ ತಂಬಾಕು ಖರೀದಿ ಮಾಡಬೇಕು. ಹೆಚ್ ಯೋಗಾರಮೇಶ್ ಒತ್ತಾಯ.

ಇಮೇಜ್
ಅರಕಲಗೂಡು: ವಿದೇಶಿ ಕಂಪನಿಗಳು ರಾಮನಾಥಪುರ ತಂಬಾಕು ಮಂಡಳಿಯಲ್ಲಿ ನೇರವಾಗಿ ಪಾಲ್ಗೊಂಡು ರೈತರಿಂದ ಹೊಗೆಸೊಪ್ಪು ಖರೀದಿಸಬೇಕೆಂದು ಹೆಚ್ ಯೋಗಾರಮೇಶ್ ಒತ್ತಾಯ. ರಾಮನಾಥಪುರ ತಂಬಾಕು ಮಂಡಳಿಗೆ ಪೊಟ್ಯಾಟೋ ಕ್ಲಬ್ ಅಧ್ಯಕ್ಷರಾದ ಯೋಗಾರಮೇಶ್ ಬೇಟಿ ನೀಡಿ ರೈತರ ಸಮಸ್ಯೆಯನ್ನು ಆಲಿಸಿ, ನಂತರ ಮಾತನಾಡಿ  ರೈತರು ಬೆಳೆದ ತಂಬಾಕಿಗೆ ಸರಿಯಾದ ಬೆಲೆ ನೀಡದೆ ವಂಚಿಸಲಾಗುತ್ತಿದೆ‌. ITC ಕಂಪನಿಯೊಂದಿಗೆ ತಂಬಾಕು ಮಂಡಳಿ ಮತ್ತು ಸರ್ಕಾರ ಒಳ‌ಒಪ್ಪಂದ ಮಾಡಿಕೊಂಡು ಇರುವ ಆರೋಪಗಳಿಗೆ. ಇಲ್ಲಿ ಬಂದಿರುವ ಎಲ್ಲಾ ಕಂಪನಿಯು ITC ಕಂಪನಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿವೆ. ITC ಕಂಪನಿ  ತಂಬಾಕು ಮಂಡಳಿಯನ್ನು ಹಿಡಿತದಲ್ಲಿ ಇಟ್ಟುಕೊಂಡಿದೆ. ಇದರಿಂದ ರೈತರಿಗ ಅನ್ಯಾಯ ಮಾಡಲಾಗುತ್ತಿದೆ. ವಿದೇಶಿ ಕಂಪನಿಗಳು ತಂಬಾಕು ಮಂಡಳಿಯಲ್ಲಿ ನೇರವಾಗಿ ಪಾಲ್ಗೊಂಡು ರೈತರಿಂದ ಹೊಗೆಸೊಪ್ಪು ಖರೀದಿಸಬೇಕು. ಹತ್ತು ಗ್ರಾಂ ಇರುವ ಒಂದು ಸಿಗರೇಟ್ ಪ್ಯಾಕ್ ಬೆಲೆ ₹165 ಇದೆ.ಆದರೆ ಒಂದು ಕೆ.ಜಿ. ಹೊಗೆಸೊಪ್ಪು ಬೆಲೆ 100 ರಿಂದ 165 ರೂ ಇದೆ.  ಒಂದು Kg ಹೊಗೆಸೊಪ್ಪಿನಿಂದ ಸಾವಿರಾರು ಸಿಗರೇಟ್ ಮಾಡಿ ಮಾರಾಟ ಮಾಡಿ ಮಾರಾಟಗಾರರು ಆದಾಯ ಮಾಡಿಕೊಳ್ಳುತ್ತಿದ್ದಾರೆ. ಇದು ಯಾವ ರೀತಿಯ ನ್ಯಾಯ ಎಂದರು. ಆದರೆ ರೈತರು ಬೆಳೆದ  ಹೊಗೆಸೊಪ್ಪಿಗೆ ಮಾತ್ರ ಉತ್ತಮ‌ ಬೆಲೆ ನೀಡದೆ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲ...

ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ACF ಉದ್ಘಾಟನೆ.

ಇಮೇಜ್
ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ACF ಉದ್ಘಾಟನೆ.  ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ACF ಕರ್ನಾಟಕ ಸಂಘಟನೆಯನ್ನು  ತಾಲೂಕಾ ಮಟ್ಟದಲ್ಲಿ ರಾಮದುರ್ಗ ಘಟಕದ ಆಂಟಿ ಕರಪ್ಶನ್ ಫೋರ್ಸ್ ACF ಭ್ರಷಾಚಾರ್ ನಿಗ್ರಹ್ ಸಮಿತಿಯನ್ನು   ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.  ACF ಕರ್ನಾಟಕ ರಾಮದುರ್ಗ ಘಟಕದ ಉದ್ಘಾಟನಾ ಸಮಾರಂಭವನ್ನು ರಾಮದುರ್ಗದ ರಾಣಿ ಚನ್ನಮ್ಮ ಶಾಲಾ ಆವರಣದಲ್ಲಿ ಮಾಡಲಾಯಿತು.  ACF ಕರ್ನಾಟಕ ರಾಮದುರ್ಗ ಘಟಕದ ಲೋಗೋವನ್ನು  ACF ಬೆಳಗಾವಿ ಜಿಲ್ಲಾ ಅಧ್ಯಕ್ಷರು  ಶ್ರೀ ಬಿ ಎಚ್ ಜಮಾದಾರ  ಹಾಗೂ ಅಥಿತಿಗಳಿಂದ್ ಬಿಡುಗಡೆ ಮಾಡಲಾಯಿತು.  ಹಾಗೂ ಉದ್ಘಾಟನಾ ಸಮಾರಂಭಕೆ ಆಗಮಿಸಿದ್ ಅಥಿತಿಗಳಿಗೆ ಪ್ರಾರಂಬದಲ್ಲಿ ಮಾಲಾರ್ಪಣೆ ಮಾಡಿ ನಂತರ ಸನ್ಮಾನ ಮಾಡಲಾಯಿತು. ಹಾಗೂ ಸಾರ್ವಜನಿಕರಿಗೆ ಸರಕಾರದಿಂದ್ ಬರುವಂತೆಹ್ 126 ಯೋಜನೆಗಳನ್ನು ಉಚಿತವಾಗಿ ತಮ್ಮ್ ತಮ್ಮ್ ಮನೆಗೆ ತಲುಪುವ ವ್ಯವಸ್ಥೆ ನಮ್ಮ್ ACF ಸಮಿತಿ ಉಚಿತವಾಗಿ ಮಾಡುತ್ತದೆ ಎಂದು ಭರವಸೆ ನೀಡಿದರು .  ಈ ಸಂಧರ್ಭದಲ್ಲಿ ಶ್ರೀ ಮ್ ನಿ ಪ್ರ ಸ್ವ್ ಶಿವಮೂರ್ತಿ ಮಹಾಸ್ವಾಮಿಗಳು ಶ್ರೀ ಫಲಹಾರೇಶ್ವರ ಮಠ ಅವರಾದಿ ಶ್ರೀ ಶಿವಪಜ್ಜ ಸ್ವಾತಿಗಳು ಜಾಲಿಕಟ್ಟಿ ACF ಬೆಳಗಾವಿ ಜಿಲ್ಲಾ   ಶ್ರೀ ಬಿ ಎಚ್ ಜಮಾದಾರ ರವಿ ಸರ್ ಹಾಗೂ ಮನಿಶಿಂಗ್ ACF ರಾಮದುರ್ಗ  ತಾಲೂ...

ರಾಮದುರ್ಗ:ಸರ್ಕಾರದ ನಿಯಮ ಪಾಲನೆ ಮಾಡದ ಬನ್ನೂರು ಗ್ರಾಮ ಪಂಚಾಯತಿ PDO.

ಇಮೇಜ್
ರಾಮದುರ್ಗ:ಸರ್ಕಾರದ ನಿಯಮ ಪಾಲನೆ ಮಾಡದ ಬನ್ನೂರು ಗ್ರಾಮ ಪಂಚಾಯತಿ PDO. ಹೌದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬನ್ನೂರು ಗ್ರಾಮ ಪಂಚಾಯಿತಿಯಲ್ಲಿ  ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ಮಂತ್ರಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಮುಂಜಾನೆ 8 ಗಂಟೆ ಒಳಗಡೆ ಮಾಡುವ ಪೂಜೆಯನ್ನು 11ಗಂಟೆ ಆದರೂ ಪೂಜೆಯನ್ನು ಮಾಡಿರಲಿಲ್ಲ.11 ಗಂಟೆಗೆ  ಬನ್ನೂರು  ಗ್ರಾಮ ಪಂಚಾಯಿತಿಗೆ ಪಾತ್ರಕರ್ತರು ಹೋಗಿ ಎಚ್ಚರಿಸಿದಾಗ ಮತ್ತು ಪತ್ರಕರ್ತರೇ ಎಲ್ಲರನ್ನೂ ಕೂಡಿಸಿ ಗಾಂಧೀಜಿ ಅವರ ಫೋಟೋ ಪೂಜೆ ಮಾಡಲಾಯಿತು. ಹಾಗಾದರೆ ಪತ್ರಕರ್ತರು ಹೋಗಿ ಚರ್ಚೆ ಮಾಡದೆ ಇದ್ದರೆ ಬನ್ನೂರು ಗ್ರಾಮ ಪಂಚಾಯತಿಯಲ್ಲಿ ಗಾಂಧೀ ಜಯಂತಿಯ ಆಚರಣೆ ಆಗ್ತಾ ಇರಲಿಲ್ಲ. ಹೀಗಿರುವಾಗ ಈ ಗ್ರಾಮಪಂಚಾಯತಿಯ  PDO ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಈ ಗ್ರಾಮ ಪಂಚಾಯಿತಿಗೆ ಇದ್ದೂ ಇಲ್ಲದಂತಾಗಿದೆ. ಹಾಗೂ  ಗ್ರಾಮ ಪಂಚಾಯತಿ ಸಾರ್ವಜನಿಕರ ಯಾವುದೇ ಒಂದು ಕೊಂದು  ಕೊರತೆಗಳನ್ನು ಕೇಳದೆ ಇರುವ PDO ಅಧಿಕಾರಿ. ಮತ್ತು  ಪಂಚಾಯತಿಗೆ ಸಂಬಂಧಪಟ್ಟ ಕಾರ್ಯಗಳ ಬಗ್ಗೆ ಮತ್ತು ಕೆಲಸಗಳ ಬಗ್ಗೆ ಆರಿಸಿಬಂದಂತ ಸರ್ವ ಸದಸ್ಯರು PDO ಅಧಿಕಾರಿಗೆ ಚರ್ಚಿಸಿದಾಗ ಸರಿಯಾಗಿ ಮಾಹಿತಿ ಕೊಟ್ಟಿರುವುದಿಲ್ಲ. ವಾರದಲ್ಲಿ ಒಂದು ಸಾರಿ ಮಾತ್ರ ಪಂಚಾಯತಿಗೆ ಹಾಜರಾಗುತ್ತಾ ಸರ್ವ ಸದಸ್ಯರಿಗೆ ಕೆಲಸಗಳನ್ನು ಕೇಳಲು ತೊಂದರೆ ಕೊಡುವ PDO ಅಧಿಕಾರಿ.  ಮತ...

ರಾಮದುರ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಹಾರ ಪೋಷಣಾ ಮಾಸಾಚರಣೆ.

ಇಮೇಜ್
ರಾಮದುರ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಹಾರ ಪೋಷಣಾ ಮಾಸಾಚರಣೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ವತಿಯಿಂದ ಆಹಾರ ಪೋಷಣಾ ಮಾಸಾಚರಣೆ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರದ ಉದ್ಘಾಟನೆಯ ನ್ನು ರಾಮದುರ್ಗ ಶಾಸಕರಾದ ಮಹದೇವಪ್ಪ ಯಾದವಾಡ ಮತ್ತು ತಾಲೂಕು ಆಡಳಿತದ ಮುಖ್ಯ ಅಧಿಕಾರಿಗಳು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಪೋಷಣಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಿದ್ದಪಡಿಸಿದ ಪೌಷ್ಟಿಕ ಆಹಾರವನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ವೀಕ್ಷಣೆ ಮಾಡಿದರು.ಮತ್ತು ರಾಮದುರ್ಗ ತಾಲೂಕ ಮಕ್ಕಳ ಮತ್ತು ಮಹಿಳಾ ಶಿಶು ಅಭಿವೃದ್ಧಿ ಅಧಿಕಾರಿಗಳ ತಂಡದೊಂದಿಗೆ  ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಮತ್ತು ಮಕ್ಕಳಿಗೆ ಅನ್ನಪ್ರಾಶನ,ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ಬಾಂಡ್ ವಿತರಣೆ, ಮಕ್ಕಳ ಜನ್ಮದಿನವನ್ನು ಆಚರಿಸುವ ಮೂಲಕ ವಿಶೇಷವಾಗಿ ಪೋಷಣಾ ಮಾಸಾಚರಣೆ  ಆಚರಣೆ ಮಾಡಿದರು,    ಈ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ ಎಸ್.ಎಮ್.ಬೆನ್ನೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಬೆಳಗಾವಿಯ ಉಪ ನಿರ್ದೇಶಕರಾದ ಬಸವರಾಜ ವರವಟ್ಟಿ,ಶ್ರೀ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ...

ರಾಮದುರ್ಗ: ವಿಶ್ವ ರೇಬಿಸ್ ದಿನಾಚರಣೆ ಹಾಗೂ ಅಜಾದಿ ಕಾ ಅಮೃತ ಮಹೋತ್ಸವ ದಿನ.46 ಶ್ವಾನಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ ನೀಡಲಾಯಿತು

ಇಮೇಜ್
ಅಜಾದಿ ಕಾ ಅಮೃತ ಮಹೋತ್ಸವ ಹಾಗೂ ವಿಶ್ವ ರೇಬಿಸ್ ದಿನಾಚರಣೆ ರಾಮದುರ್ಗ 46 ಶ್ವಾನಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ ನೀಡಲಾಯಿತು ಬೆಳಗಾವಿ ಜಿಲ್ಲೆಯ  ರಾಮದುರ್ಗ ಪಟ್ಟಣದ ಹೊರವಲೆಯ ದಲ್ಲಿ ಇದ್ದ ಪಶು ಸಂಗೋಪನಾ ಇಲಾಖೆ ರಾಮದುರ್ಗ ತಾಲೂಕಿನ ಪಶು ಆಸ್ಪತ್ರೆ  ಆವರಣದಲ್ಲಿ ವಿಶ್ವ ರೇಬಿಸ್ ದಿನದ ಅಂಗವಾಗಿ ಶ್ವಾನಗಳಿಗೆ ಉಚಿತ ರೇಬಿಸ್  46 ಶ್ವಾನಗಳಿಗೆ ಲಸಿಕೆ ಹಾಕಲಾಯಿತು    ಅಜಾದಿ ಕಾ ಅಮೃತ ಮಹೋತ್ಸವ ಹಾಗೂ ವಿಶ್ವ ರೇಬಿಸ್ ದಿನಾಚರಣೆ  ಅಂಗವಾಗಿ  ರಾಮದುರ್ಗ ತಾಲೂಕಿನ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪಶು ಆಸ್ಪತ್ರೆ ಆವರಣದಲ್ಲಿ  ರಾಮದುರ್ಗ ತಾಲೂಕಿನ ಸುತ್ತಮುತ್ತಲಿನ ಎಲ್ಲಾ ಶ್ವಾನಗಳಿಗೆ ಉಚಿತವಾಗಿ ರೇಬಿಸ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಅಲ್ಲಿ ಒಟ್ಟು 46 ಶ್ವಾನಗಳಿಗೆ ಲಸಿಕೆ  ನೀಡಲಾಯಿತು.  ಈ ಸಂದರ್ಭದಲ್ಲಿ ಪಶು ಸಂಗೋಪನಾ ಇಲಾಖೆ ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಯಾದ ಡಾಕ್ಟರ್ ಗಿರೀಶ್ ಪಾಟೀಲ್. ನಾಮದೇವ ಪಮ್ಮಾರ,ಸಿಬ್ಬಂದಿವರ್ಗ್ ಮತ್ತು  ಸುತ್ತಮುತ್ತಲಿನ ಗ್ರಾಮದ  ಕುರುಬರು,ರೈತರು ಹಾಗೂ ರಾಮದುರ್ಗರದ ಶ್ವಾನಗಳನ್ನು ಸಾಕಿದ ಮಾಲೀಕರು ಉಪಸ್ಥಿತರಿದ್ದರು. ವರದಿ - ಎಂ ಕೆ ಯಾದವಾಡ ರಾಮದುರ್ಗ

ರಾಮದುರ್ಗ:ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಾತ್ರ ಜನರು ನೆಮ್ಮದಿ ಬದುಕು ಸಾಧ್ಯ. ಮಾಜಿ ಶಾಸಕ ಅಶೋಕ ಪಟ್ಟಣ.

ಇಮೇಜ್
ರಾಮದುರ್ಗಃ ಮಹಾತ್ಮಾ ಗಾಂಧಿವರ ಕನಸು ಗ್ರಾಮಗಳ ಅಭಿವೃದ್ಧಿ ಆಗಬೇಕು ಜನರಿಗೆ ಸ್ಥಳದಲ್ಲಿಯೇ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಅವರ ಪರಿಕಲ್ಪನೆ ನೆನಸಾಗಬೇಕಾದರೆ ಎಲ್ಲರೂ ಒಂದಾಗಿ ಗ್ರಾಮಗಳ ಅಭಿವೃದ್ಧಿಗೆ ಶ್ರಮೀಸಬೇಕು ಅಂದರೆ ಮಾತ್ರ ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ಯಕ್ಕೆ ಕಾರ್ಯಕ್ರಮಕ್ಕೆ ಒಂದು ಅರ್ಥ ಬರುತ್ತದೆ ಎಂದು ಮಾಜಿ ಶಾಸಕ ಅಶೋಕ ಪಟ್ಟಣ ಹೇಳಿದರು. ಸ್ಥಳಿಯ ಅಶೋಕ ಪಟ್ಟಣ ಅವರ ತೋಟದ ಮನೆಯಲ್ಲಿ ಮಹಾತ್ಮಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮದ ಪೂರ್ವಭಾವಿ ಸಾಮಾಜೀಕ ಜಾಲತಾಣ ಹಾಗೂ ಮುಖಂಡರ ಮತ್ತು ಭೂತÀ ಏಜಂಟರು, ಪದಾಧಿಕಾರಿಗಳ ಸಭೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ಪರಿಷ್ಕರಣೆ ಮತ್ತು  ಶಿಕ್ಷಕರ ಹಾಗೂ ಪದವೀಧರರ ಚುನಾವಣೆಯ ಕುರಿತು ಪೂರ್ವಭಾವಿ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿಯವರು ಪ್ರತಿ ಗ್ರಾಮಗಳ ಜನರು ಸ್ವಾವಲಂಬಿಗಳಾಗಬೇಕು, ಭಾರತದ ಭವಿಷ್ಯ ಹಳ್ಳಿಗಳಲ್ಲಿ ಅಡಗಿದೆ. ಸಾಮಾಜೀಕ, ರಾಜಕೀಯ, ಅರ್ಥಿಕ, ಪ್ರಜಾಪ್ರಭುತ್ವದ ಅಭಿವೃದ್ದಿಯನ್ನು ತಳ ಮಟ್ಟದಿಂದ ಬಲಿಷ್ಠವಾಗಿ ಗ್ರಾಮ ಪಂಚಾಯತ ರಾಜ್ ವ್ಯವಸ್ಥೆಯಲ್ಲಿ ಜನರಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸುವ ಕಲ್ಪನೆ ಒಂದು ಕಡೆಯಾದರೆ ಎಲ್ಲರೂ ಸಮಾನತೆಯಿಂದ ಇರಬೇಕು ಎಂದು ಮಹದಾಸೆಯಾಗಿತ್ತು ಆದ್ದರಿಂದ ಎಲ್ಲರೂ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗಬೇಕಿದೆ. ಹಿಂದನಿಂದಲೂ ದೇಶದ ಅಭಿವೃದ್ದಿಗೆ ಯಾರು ಶ್ರಮಿಸಿದ್ದಾ...

ಪ್ರವೇಶ ಶುಲ್ಕ ಕಡಿಮೆ ಮಾಡುವಂತೆ ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವಂತೆ ತಹಶಿಲ್ದಾರರ ಮೂಲಕ ವಿದ್ಯಾರ್ಥಿಗಳಿಂದ ಮನವಿ

ಇಮೇಜ್
ರಾಮದುರ್ಗ ತಾಲೂಕು ಶುಲ್ಕ ಕಡಿಮೆ ಮಾಡುವಂತೆ ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವಂತೆ ತಹಶಿಲ್ದಾರರ ಮೂಲಕ ವಿದ್ಯಾರ್ಥಿಗಳಿಂದ ಮನವಿ  ಹೌದು ವಿಕ್ಷಕರೇ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ವಿಶ್ವಭಾರತಿ ಪ್ರಥಮ ದರ್ಜೆ ಮಹಾವಿದ್ಯಾಲಯ ತುರನೂರದಲ್ಲಿ ದುಬಾರಿ ಪ್ರವೇಶ ವಸೂಲಾತಿ ಮಾಡುತ್ತಿರುವದು ಮತ್ತು ಈ ಕಾಲೇಜು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಅದರ ನಿಟ್ಟಿನಲ್ಲಿ ವಿದ್ಯಾರ್ಥಿವೃಂದ ವು ಪ್ರವೇಶ ಶುಲ್ಕವನ್ನು  ಕಡಿಮೆ ಮಾಡಬೇಕು ಮತ್ತು ಆದಷ್ಟು ಬೇಗ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಮಾನ್ಯ ರಾಮದುರ್ಗ ತಹಶೀಲ್ದಾರಾದ ಮಲ್ಲಿಕಾರ್ಜುನ್ ಹೆಗ್ಗಣ್ಣವರ್  ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಮನವಿ ನೀಡಿದರು.     ಮಹಾವಿದ್ಯಾಲಯದ ಆಡಳಿತ ಮಂಡಳಿಯು ಪ್ರತಿ ವರ್ಷ ಪ್ರವೇಶ ಶುಲ್ಕವನ್ನು ದುಬಾರಿಗೊಳಿಸುತ್ತಾ ಹೋಗುತ್ತಿದೆ . ಅದರಂತೆ ಈ ಭಾರಿಯೂ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿದೆ . ಕೊರೋನಾನಂತಹ ಮಹಾಮಾರಿಯಿಂದ ನಮ್ಮ ಪಾಲಕರು ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು , ಇಷ್ಟು ಪಾವತಿ ಶುಲ್ಕವನ್ನು ಭರಿಸುವುದು ಕಷ್ಟಸಾಧ್ಯ . ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಸುತ್ತೋಲೆಯ ಪ್ರಕಾರ ಪ್ರವೇಶಾತಿ ಶುಲ್ಕವು ಪರಿಶಿಷ್ಟ ಜಾತಿ | ಪರಿಶಿಷ್ಟ ಪಂಗಡ ದ ವಿದ್ಯಾರ್ಥಿಗಳಿಗೆ ರೂ 470 / - ಗಳು ಮತ್ತು ಸಾಮಾನ್ಯ ವರ್ಗದ ವಿದ್ಯ...

ಅರಕಲಗೂಡು: ಜಾನುವಾರುಗಳ ಸಾವು ಖಂಡಿಸಿ ಪೊಟ್ಯಾಟೋ ಕ್ಲಬ್ ವತಿಯಿಂದ ಪಶು ಆಸ್ಪತ್ರೆ ಮುಂಬಾಗ ಪ್ರತಿಭಟನೆ.

ಇಮೇಜ್
ಅರಕಲಗೂಡು: ಪಟ್ಟಣದ ಪಶು ಆಸ್ಪತ್ರೆ ಮುಂಭಾಗ ಪೊಟ್ಯಾಟೋ ಕ್ಲಬ್ ನೇತೃತ್ವದಲ್ಲಿ ಜಾನುವಾರುಗಳ ಸಾವು ಖಂಡಿಸಿ ಶುಕ್ರವಾರ ರೈತರು ಪ್ರತಿಭಟನೆ ನಡೆಸಿದರು. ಯೋಗಾ ರಮೇಶ್ ಮಾತನಾಡಿ, ಜನಪ್ರತಿನಿಧಿಗಳು ನಿರ್ಲಕ್ಷö್ಯ ಧೋರಣೆಯಿಂದಾಗಿ ಜಾನುವಾರುಗಳಿಗೆ ರೋಗದ ತೀವ್ರತೆ ಹೆಚ್ಚಿ ಗಬ್ಬದ ಹಸು, ಕರುಗಳು ನರಳಿ ನರಳಿ ಪ್ರಾಣ ಕಳೆದುಕೊಳ್ಳುತ್ತಿವೆ. ಲಸಿಕೆ ನೀಡಿ ಜಾನುವಾರುಗಳ ಜೀವ ಉಳಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು. ಕಾಲು ಬಾಯಿ ರೋಗ ಜಾನುವಾರುಗಳಿಗೆ ಮರಣ ಶಾಸನವಾಗಿ ಪರಿಣಮಿಸಿದೆ. ಸ್ಕಿನ್ ಕಾಯಿಲೆ ಕೂಡ ಉಲ್ಭಣಿಸಿದೆ. ಇದಕ್ಕೆ ಔಷಧಿಯೇ ಇಲ್ಲವಂತೆ, ಆಧುನಿಕ ತಂತ್ರಜ್ಞಾನದ ಕಾಲದಲ್ಲೂ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇತರೆ ವಿಚಾರಗಳ ಕುರಿತು ಚರ್ಚೆ ಮಾಡುವ ಶಾಸಕರು, ಸಚಿವರು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಮೂಕರಾಗಿದ್ದಾರೆ. ಕೂಡಲೇ ಮೃತಪಟ್ಟ ಜಾನುವಾರುಗಳ ಸಮೀಕ್ಷೆ ನಡೆಸಿ ಪರಿಹಾರ ಕಲ್ಪಿಸಬೇಕು. ಹಳ್ಳಿಗಳಲ್ಲಿ ಸಾಮೂಹಿಕ ಲಸಿಕೆ ಕೈಗೊಂಡು ರೋಗ ನಿಯಂತ್ರಿಸಬೇಕು. ಪಶು ವೈದ್ಯರ ಕೊರತೆ ನೀಗಿಸಿ ಜಾನುವಾರುಗಳಿಗೆ ಗುಣಮಟ್ಟದ ಚಿಕಿತ್ಸಾತ್ಮಕ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು. ಹೈನುಗಾರಿಕೆಯನ್ನೆ ನೆಚ್ಚಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ. ಇತ್ತ ಶುಂಠಿ, ಆಲೂಗಡ್ಡೆ ಕಟಾವು ನಡೆಸಿ ಮಾರಾಟ ಮಾಡಿದರೂ ಬೆಲೆ ಕುಸಿದು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದೇವೆ, ಅತ್ತ ಮನೆ ಕ...